Just In
- 1 hr ago
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- 2 hrs ago
ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾದ ಒಕಿನಾವ
- 2 hrs ago
ಡೀಲರ್ ಬಳಿ ತಲುಪಿದ ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕ್
- 3 hrs ago
ನ್ಯಾಷನಲ್ ಡ್ರ್ಯಾಗ್ ರೇಸಿಂಗ್: 2020ರ ಆವೃತ್ತಿಯನ್ನು ಗೆದ್ದ ಕನ್ನಡಿಗ ಹೇಮಂತ್ ಮುದ್ದಪ್ಪ!
Don't Miss!
- News
ಜಮ್ಮು-ಕಾಶ್ಮೀರ: ಭಾರತೀ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಸಾವು
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಯ್ತು ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್
ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾದ ಬಜಾಜ್ ಆಟೋ ಕಂಪನಿಯು ತನ್ನ ಪಲ್ಸರ್ 125 ಸ್ಪ್ಲಿಟ್-ಸೀಟ್ ಮಾದರಿಯ ಹೊಸ ಬೇಸ್ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಪಲ್ಸರ್ 125 ಸ್ಪ್ಲಿಟ್-ಸೀಟ್ ಡ್ರಮ್ ಬ್ರೇಕ್ ವೆರಿಯೆಂಟ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.73,274 ಗಳಾಗಿದೆ.

ಬೇಸ್ ವೆರಿಯೆಂಟ್ ಮುಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಮಾದರಿಯ ಹೊಸ ಬೇಸ್ ವೆರಿಯೆಂಟ್ ಬ್ರೇಕಿಂಗ್ ಹಾರ್ಡ್‌ವೇರ್ ಅನ್ನು ಹೊರತುಪಡಿಸಿ ಟಾಪ್-ಸ್ಪೆಕ್ ರೂಪಾಂತರದಿಂದ ಅದರ ಎಲ್ಲಾ ವಿನ್ಯಾಸ ಮತ್ತು ಫೀಚರ್ ಗಳನ್ನು ಎರವಲು ಪಡೆದುಕೊಂಡಿದೆ. ಎಂಟ್ರಿ-ಲೆವೆಲ್ ಮಾದರಿಯು ಈಗ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 170 ಎಂಎಂ ಮತ್ತು 130 ಎಂಎಂ ಡ್ರಮ್ ಬ್ರೇಕ್ ಸೆಟಪ್ ಅನ್ನು ಹೊಂದಿದೆ.

ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್ ಮಾದರಿಯ ಟಾಪ್-ಸ್ಪೆಕ್ ವೆರಿಯೆಂಟ್ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ. ಎರಡೂ ರೂಪಾಂತರಗಳು ಬ್ರೇಕಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಡಿಸ್ಕ್ ಬ್ರೇಕ್ ಕಳೆದುಕೊಂಡ ಪರಿಣಾಮವಾಗಿ, ಬಜಾಜ್ ಪಲ್ಸರ್ 125 ಸ್ಪ್ಲಿಟ್-ಸೀಟ್‌ನ ಮೂಲ ಮಾದರಿಯು ಟಾಪ್-ಸ್ಪೆಕ್ ರೂಪಾಂತರಕ್ಕಿಂತ ಬೆಲೆಯು ಸುಮಾರು ರೂ.7,000 ಕಡಿಮೆಯಾಗಿದೆ. ಬ್ಲ್ಯಾಕ್ ರೆಡ್ ಮತ್ತು ಬ್ಲ್ಯಾಕ್ ಸಿಲ್ವರ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಬಜಾಜ್ ಪಲ್ಸರ್ 125 ಸುಮಾರು 15 ವರ್ಷಗಳ ಹಿಂದೆ ಬಿಡುಗಡೆಯಾದಾಗ ಹೆಡ್‌ಲೈಟ್ ಕೌಲ್‌ನೊಂದಿಗೆ ಬೈಕಿನ ಮೂಲ ವಿನ್ಯಾಸವನ್ನು ಹೊಂದಿರುವ ಬ್ರ್ಯಾಂಡ್‌ನ ಸರಣಿಯಲ್ಲಿರುವ ಕೆಲವೇ ಕೆಲವು ಬೈಕುಗಳಲ್ಲಿ ಒಂದಾಗಿದೆ. ಇದು ಮಾರುಕಟ್ಟೆಯಲ್ಲಿ ಖರೀದಿದಾರರಿಗೆ ಇಷ್ಟವಾಗುವ ವಿನ್ಯಾಸವಾಗಿರುವುದರಿಂದ ಇದನ್ನು ಮುಂದುವರೆಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಪಲ್ಸರ್ 125 ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಕ್ಷನ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಗ್ಯಾಸ್-ಶಾಕ್ ಅಬ್ಸಾರ್ಬರ್ ಯುನಿಟ್ ಅನ್ನು ಹೊಂದಿದೆ. ಈ ಬೈಕಿನ ಎರಡೂ ತುದಿಗಳಲ್ಲಿ ಟ್ಯೂಬ್ಲೆಸ್ ಟಯರ್ ಗಳೊಂದಿಗೆ ಅಲಾಯ್ ವ್ಹೀಲ್ ಷೋಡ್ ಅನ್ನು ಹೊಂದಿದೆ.

ಪಲ್ಸರ್ 125 ಬೈಕಿನಲ್ಲಿ ಎರಡು ಪೈಲಟ್ ಲ್ಯಾಂಪ್ ಗಳೊಂದಿಗೆ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11.5-ಲೀಟರ್ ಫ್ಯೂಯಲ್ ಟ್ಯಾಂಕ್, ಎಂಜಿನ್ ಕೌಲ್ ಮತ್ತು ಬ್ಲ್ಯಾಕ್ ಔಟ್ ಎಕ್ಸಾಸ್ಟ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇದರೊಂದಿಗೆ ಸ್ಪ್ಲೀಟ್ ಗ್ರ್ಯಾಬ್ ರೈಲ್ ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಬೈಕ್ ಎಂಜಿನ್ ಕೌಲ್, ಅಲಾಯ್ ವ್ಹೀಲ್ಸ್ ಬ್ಯಾಡ್ಜಿಂಗ್ ಮತ್ತು ಗ್ರ್ಯಾಬ್ ರೈಲ್ ಮೇಲೆ ಮೇಲೆ ಬಹಳ ಸೂಕ್ಷ್ಮವಾದ ಗ್ರಾಫಿಕ್ಸ್ ಒಳಗೊಂಡಿದೆ.

ಈ ಬೈಕಿನಲ್ಲಿ 124 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11 ಬಿಹೆಚ್‍ಪಿ ಪವರ್ ಮತ್ತು 10.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.