Just In
- 28 min ago
ಲ್ಯಾಂಬೊರ್ಗಿನಿ ಕಾರಿನ ಬಣ್ಣದಲ್ಲಿ ಮಾಡಿಫೈಗೊಂಡ ಹ್ಯುಂಡೈ ಎಲಾಂಟ್ರಾ
- 1 hr ago
ಕ್ರ್ಯಾಶ್ ಟೆಸ್ಟಿಂಗ್ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- 1 hr ago
ಮೇಡ್ ಇನ್ ಇಂಡಿಯಾ ಜಿಮ್ನಿ ಎಸ್ಯುವಿಯ ರಫ್ತು ಆರಂಭಿಸಿದ ಮಾರುತಿ ಸುಜುಕಿ
- 2 hrs ago
ಸ್ಥಗಿತಗೊಳಿಸಲಾಗಿದ್ದ ರ್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ
Don't Miss!
- Education
Karnataka Bank PO Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Sports
IPL 2021 players retention Live Updates: ಉಳಿಸಿಕೊಳ್ಳುವವರ ಪಟ್ಟಿ
- Lifestyle
ಮಹಿಳೆಯರ ಪಾಲಿನ ಸಂಜೀವಿನಿ ಈ ಅಶ್ವಗಂಧ...!
- News
2020ರಲ್ಲಿ 98 ಪೇಟೆಂಟ್ ಪಡೆದುಕೊಂಡ ಟಾಟಾ ಮೋಟಾರ್ಸ್
- Finance
ಕೇಂದ್ರ ಬಜೆಟ್ 2021: ಕೊರೊನಾ ಪೀಡಿತ ಆರ್ಥಿಕತೆ ಚೇತರಿಕೆಗೆ ಏನು ನಿರೀಕ್ಷಿಸಬಹುದು?
- Movies
ಡಿ ಬಾಸ್ ಜೊತೆ ಶಿವರಾಜ್ ಕೆ ಆರ್ ಪೇಟೆ ಪುತ್ರನ ಹುಟ್ಟುಹಬ್ಬ ಆಚರಣೆ: ವಿಶೇಷ ಗಿಫ್ಟ್ ನೀಡಿದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್
ಸುಜುಕಿ ಮೋಟಾರ್‍ಸೈಕಲ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬ್ರ್ಯಾಂಡ್‌ನ ಜನಪ್ರಿಯ ಬರ್ಗ್‌ಮನ್ ಸ್ಟ್ರೀಟ್ 125 ಮ್ಯಾಕ್ಸಿ-ಸ್ಕೂಟರ್ ಆಧರಿಸಿ ಅಭಿವೃದ್ದಿ ಪಡಿಸಲಿದೆ ಎಂದು ಹೇಳಲಾಗುತ್ತಿದೆ.

ಸುಜುಕಿ ಮೋಟಾರ್‍ಸೈಕಲ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದೆ. ಹೊಸ ಸುಜುಕಿ ಬರ್ಗ್‌ಮನ್ ಲೆಕ್ಟ್ರಿಕ್ ಸ್ಕೂಟರ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಪೈ ಚಿತ್ರದಲ್ಲಿ ಕಂಡುಬಂದತೆ ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್ ಬಹುತೇಕೆ ತನ್ನ ಪೆಟ್ರೋಲ್ ಮಾದರಿಯ ರೀತಿಯಲ್ಲೇ ವಿನ್ಯಾಸವನ್ನು ಹೊಂದಿರಲಿದೆ.

ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ರೀತಿಯ ಹೆಡ್‌ಲ್ಯಾಂಪ್‌ಗಳು, ಫ್ರಂಟ್ ಕೌಲ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳೊಂದಿಗೆ ಫ್ರಂಟ್ ಏಪ್ರನ್ ಮತ್ತು ಸೈಡ್ ಮತ್ತು ರಿಯರ್ ಪ್ಯಾನೆಲ್‌ಗಳನ್ನು ಒಳಗೊಂಡಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಆದರೆ ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್ ಸೈಡ್ ಪ್ಯಾನೆಲ್‌ಗಳ ಕೆಳಭಾಗದಲ್ಲಿ ಬ್ಲೂ ಬಣ್ಣದ ಅಸೆಂಟ್ಸ್ ಗಳನ್ನು ಕಾಬಹುದು. ಈ ಬ್ಲೂ ಬಣ್ಣವನ್ನು ಹ್ಯಾಂಡಲ್‌ಬಾರ್‌ನ ಹತ್ತಿರವೂ ಕಾಣಬಹುದು, ಇದು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಸ್ಕೂಟರ್ ಗಳ ನಡುವಿನ ಪ್ರಮುಖ ಕಾಸ್ಮೆಟಿಕ್ ವ್ಯತ್ಯಾಸವಾಗಿದೆ.

ಮತ್ತೊಂದು ವ್ಯತ್ಯಾಸವೆಂದರೆ ಹಿಂದಿನ ಚಕ್ರದ ಬಳಿ ಎಕ್ಸಾಸ್ಟ್ ಪೈಪ್ ಆಗಿದೆ, ಸ್ಕೂಟರ್‌ನ ಬಲಭಾಗವನ್ನು ಈಗ ಸ್ವಿಂಗಾರ್ಮ್-ಮೌಂಟಡ್ ಸಸ್ಪೆಂಕ್ಷನ್ ಸೆಟಪ್ ನೊಂದಿಗೆ ಕಾಣಬಹುದು. ಎಡಭಾಗದಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಸುಜುಕಿ ಇತ್ತೀಚೆಗೆ ಬರ್ಗ್‌ಮನ್ ಸ್ಟ್ರೀಟ್ 125 ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯೊಂದಿರುವ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪರಿಚಯಿಸಿತು. ಹೊಸ ಎಲೆಕ್ಟ್ರಿಕ್ ಮಾದರಿಯಲ್ಲಿಯು ಅದೇ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾದ ಹೊಸ ಕ್ಲಸ್ಟರ್ ನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಮೆಸೇಜ್ & ಕಾಲ್ ಅಲರ್ಟ್‌ಗಳು ಮತ್ತು ಇತರ ವಾಹನ ಅಂಕಿಅಂಶಗಳನ್ನು ಸಹ ಹೊಂದಿರುತ್ತದೆ.
MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್ ಮೋಟಾರ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇದರ ಮೋಟಾರ್ ತನ್ನ ಪ್ರತಿಸ್ಪರ್ಧಿಗಳಾದ ಬಜಾಜ್ ಚೇತಕ್ ಎಲೆಕ್ಟ್ರಿಕ್, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಮತ್ತು ಅಥರ್ 450 ಎಕ್ಸ್‌ನಂತೆಯೇ ಇರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಹೊಸ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ ಎಲೆಕ್ಟ್ರಿಕ್ ಸ್ಕೂಟರ್ ಸದ್ಯ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸುಜುಕಿ ಕಂಪನಿಯು ಯಾವುದೇ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ. ಮುಂದಿನ ವರ್ಷದ ಕೊನೆಯಲ್ಲಿ ಸುಜುಕಿಯು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಬಹುದೆಂದು ಎಂದು ನಾವು ನಿರೀಕ್ಷಿಸುತ್ತೇವೆ.