ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯಾದ ಒಕಿನಾವ ತನ್ನ ಮಾರಾಟ ವ್ಯಾಪ್ತಿಯನ್ನು ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೂ ವಿಸ್ತರಣೆ ಮಾಡುತ್ತಿದ್ದು, ಕರೋನಾ ವೈರಸ್ ಅಬ್ಬರದ ನಡುವೆಯೂ ನಮ್ಮ ಬೆಂಗಳೂರಿನಲ್ಲೂ ಇದೀಗ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಇವಿ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ಶೌರ್ಯ ಮೋಟಾರ್ಸ್ ಸಹಭಾಗೀತ್ವದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿರುವ ಒಕಿನಾವ ಕಂಪನಿಯು ಕರೋನಾ ವೈರಸ್ ಹಿನ್ನಲೆಯಲ್ಲಿ ಆನ್‌ಲೈನ್ ವಹಿವಾಟಿಗೆ ಹೆಚ್ಚು ಒತ್ತು ನೀಡುವ ಮೂಲಕ ಅತಿ ಕಡಿಮೆ ಸಂಪರ್ಕದೊಂದಿಗೆ ಗ್ರಾಹಕರ ಮನೆ ಬಾಗಿಲಿಗೆ ಇವಿ ಸ್ಕೂಟರ್ ಉತ್ಪನ್ನಗಳನ್ನು ತಲುಪಿಸುತ್ತಿದ್ದು, ಮನೆ ಬಾಲಿಗೆ ಇವಿ ಸ್ಕೂಟರ್ ಉತ್ಪನ್ನಗಳನ್ನು ತಲುಪಿಸಲು ಯಾವುದೇ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿಲ್ಲ.

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ವೈರಸ್ ಹೆಚ್ಚುತ್ತಿವುದರಿಂದ ಗ್ರಾಹಕರು ಮತ್ತು ಸಿಬ್ಬಂದಿ ಆರೋಗ್ಯ ದೃಷ್ಠಿಯಿಂದ ಮನೆ ಬಾಗಿಲಿಗೆ ಹೊಸ ಇವಿ ಸ್ಕೂಟರ್ ಉತ್ಪನ್ನಗಳನ್ನು ತಲುಪಿಸಲಾಗುತ್ತಿದ್ದು, ಮನೆ ಬಾಗಿಲ ಬಳಿ ಹೊಸ ವಾಹನ ವಿತರಣೆ ವೇಳೆಯೂ ಸ್ಯಾನಿಟೈಜ್ ನಂತರವೇ ಹಸ್ತಾಂತರ ಮಾಡಲಾಗುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ಅಗಸ್ಟ್ 15ರಿಂದಲೇ ನಮ್ಮ ಬೆಂಗಳೂರಿನಲ್ಲಿ ಒಕಿನಾವ ಹೊಸ ಇವಿ ಸ್ಕೂಟರ್ ಉತ್ಪನ್ನಗಳನ್ನು ವಿತರಣೆ ಆರಂಭಿಸಲಾಗಿದ್ದು, ಗ್ರಾಹಕರ ಸೇವೆಗಳನ್ನು ಸರಳಗೊಳಿಸಲು ಆನ್‌ಲೈನ್ ಮೂಲಕವೇ ಎಲ್ಲಾ ಹಂತದ ಮಾರಾಟ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಒಕಿನಾವ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಹೊಸ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದೆ.

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಮಾರಾಟದ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದತ್ತ ಮುಖ ಮಾಡುತ್ತಿವೆ. ಕೇಂದ್ರ ಸರ್ಕಾರವು ಸಹ ಈ ನಿಟ್ಟಿನಲ್ಲಿ ಇವಿ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಫೇಮ್ 2 ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಭಾಗವಾಗಿ ಒಕಿನಾವ ಕಂಪನಿಯು ತನ್ನ ಉದ್ಯಮ ಕ್ಷೇತ್ರದ ವಿಸ್ತರಣೆ ಮಾಡುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ಸದ್ಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಒಕಿನಾವ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಇದೀಗ ಮಾರಾಟ ಮಳಿಗೆಗಳನ್ನು ಸಹ ವಿಸ್ತರಣೆ ಮಾಡುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ದೇಶದ ಕೆಲವೇ ಮೊಟ್ರೊ ನಗರಗಳಲ್ಲಿ ಮಾತ್ರ ಮಾರಾಟ ಮಳಿಗೆಗಳನ್ನು ಹೊಂದಿರುವ ಒಕಿನಾವ ಕಂಪನಿಯು ಶೀಘ್ರದಲ್ಲೇ 150 ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲಿದ್ದು, ಹೊಸ ಯೋಜನೆಗಾಗಿ ಈಗಾಗಲೇ ಬರೋಬ್ಬರಿ ರೂ. 200 ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಿದೆ.

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

2015ರಲ್ಲಿ ಮೊದಲ ಬಾರಿಗೆ ಆರಂಭಗೊಂಡ ಒಕಿನಾವ ಕಂಪನಿಯು ಸದ್ಯ ರಾಜಸ್ತಾನದ ಆಳ್ವಾರ್‌ನಲ್ಲಿ ಒಂದು ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕವನ್ನು ಹೊಂದಿದ್ದು, ಈ ಘಟಕದಲ್ಲಿ ವಾರ್ಷಿಕವಾಗಿ ಆರಂಭದಲ್ಲಿ 5 ಲಕ್ಷದಿಂದ ಇದೀಗ 10 ಲಕ್ಷ ಯುನಿಟ್ ಸ್ಕೂಟರ್ ಉತ್ಪಾದನೆಗೆ ಉನ್ನತೀಕರಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುತ್ತಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ನಮ್ಮ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದ ಒಕಿನಾವ

ಮುಂಬರುವ ದಿನಗಳಲ್ಲಿ ಚಾಲನೆಗೊಳ್ಳುವ ಹೊಸ ಸ್ಕೂಟರ್ ಮಾರಾಟ ಮಳಿಗೆಗಳಿಂದ ಮಾರಾಟ ಪ್ರಮಾಣವು ಮತ್ತಷ್ಟು ಹೆಚ್ಚಳವಾಗಲಿದ್ದು, ಎಥರ್, ರಿವೋಲ್ಟ್ ಸೇರಿದಂತೆ ಪ್ರಮುಖ ಇವಿ ಉತ್ಪಾದನಾ ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Most Read Articles

Kannada
English summary
Okinawa Begins Doorstep Delivery Service In Bangalore. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X