ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ಖ್ಯಾತ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಒಕಿನಾವ ದ್ವಿಚಕ್ರ ವಾಹನ ವಿನಿಮಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಕಂಪನಿಯು ಹಳೆಯ ಪೆಟ್ರೋಲ್ ದ್ವಿಚಕ್ರ ವಾಹನ ಪೆಟ್ರೋಲ್ ವಾಹನಗಳನ್ನು ಖರೀದಿಸಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ರಿಯಾಯಿತಿ ನೀಡಲಿದೆ.

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ಒಕಿನಾವ ಕಂಪನಿಯು ಈ ಯೋಜನೆಯನ್ನು ಬೆಂಗಳೂರು, ಅಹಮದಾಬಾದ್, ದೆಹಲಿ ಎನ್‌ಸಿಆರ್, ಹೈದರಾಬಾದ್, ಜೈಪುರ, ಹಾಗೂ ಪುಣೆ ನಗರಗಳಲ್ಲಿ ಜಾರಿಗೊಳಿಸಿದೆ. ಈ ಕೊಡುಗೆಯನ್ನು ಶೀಘ್ರದಲ್ಲೇ ಇತರ ನಗರಗಳಲ್ಲಿಯೂ ಜಾರಿಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ಹಳೆಯ ದ್ವಿಚಕ್ರ ವಾಹನಗಳ ಖರೀದಿ ಬೆಲೆಯನ್ನು ನಿಗದಿಪಡಿಸಲು ಒಕಿನಾವ ಕ್ರೆಡಿಟ್ಆರ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಹಳೆಯ ಬೈಕ್ ಹಾಗೂ ಸ್ಕೂಟರ್‌ಗಳ ರೀ ಸೇಲ್ ಮೌಲ್ಯವನ್ನು ಕಂಡುಹಿಡಿಯಲು ಒಕಿನಾವ ಕಂಪನಿಯ ವೆಬ್‌ಸೈಟ್‌ಗೆ ಹೋಗಿ ದ್ವಿಚಕ್ರ ವಾಹನಗಳ ಮಾಹಿತಿಯನ್ನು ನಮೂದಿಸಬೇಕು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ನಂತರ ಕಂಪನಿಯು ಹಳೆಯ ದ್ವಿಚಕ್ರ ವಾಹನಗಳ ರೀ ಸೇಲ್ ಮೌಲ್ಯಕ್ಕೆ ಉಲ್ಲೇಖವನ್ನು ನೀಡುತ್ತದೆ. ಆದರೆ ಅಂತಿಮ ರೀ ಸೇಲ್ ಮೌಲ್ಯವನ್ನು ಕಂಡುಹಿಡಿಯಲು ಗ್ರಾಹಕರು ತಮ್ಮ ಹಳೆಯ ದ್ವಿಚಕ್ರ ವಾಹನವನ್ನು ಒಕಿನಾವ ಶೋರೂಂಗೆ ಕೊಂಡೊಯ್ಯ ಬೇಕಾಗುತ್ತದೆ.

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ವಾಹನಗಳನ್ನು ಪರಿಶೀಲಿಸಿದ ನಂತರ ರೀ ಸೇಲ್ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಕರೋನಾ ಅವಧಿಯಲ್ಲಿ ವಾಹನಗಳ ಮಾರಾಟದಲ್ಲಿ ಹೆಚ್ಚಿನ ಏರಿಕೆ ದಾಖಲಾಗಿದೆ ಎಂದು ಒಕಿನಾವ ಕಂಪನಿ ಹೇಳಿದೆ. ಅದರಂತೆ ಇ-ಸ್ಕೂಟರ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ಬಸ್, ಮೆಟ್ರೋಗಳಂತಹ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿದ್ದ ಜನರು ಈಗ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಗಳು ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳಿಗೆ ಪರ್ಯಾಯವನ್ನು ಒದಗಿಸುತ್ತೇವೆ ಎಂದು ಕಂಪನಿ ತಿಳಿಸಿದೆ.

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ಒಕಿನಾವ ಕಂಪನಿಯ ಸ್ಕೂಟರ್‌ಗಳು ಹೆಚ್ಚಿನ ಮೈಲೇಜ್‌ನೊಂದಿಗೆ ಗುಣಮಟ್ಟವನ್ನು ಸಹ ಹೊಂದಿವೆ. ಒಕಿನಾವ ತನ್ನ ಹೆಚ್ಚಿನ ಸ್ಕೂಟರ್ ಬಿಡಿಭಾಗಗಳನ್ನು ಭಾರತದಲ್ಲಿ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ಒಕಿನಾವ ಕಂಪನಿಯು ಸದ್ಯಕ್ಕೆ ದೇಶಾದ್ಯಂತ 350ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದ್ದು, ಈ ವರ್ಷದ ಅಂತ್ಯದ ವೇಳೆಗೆ 150 ಹೊಸ ಶೋರೂಂಗಳನ್ನು ಹೊಂದುವ ಗುರಿಯನ್ನು ಹೊಂದಿದೆ.

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ಒಕಿನಾವ ಕಂಪನಿಯು ಪೂರ್ವ ಹಾಗೂ ಈಶಾನ್ಯ ರಾಜ್ಯಗಳಾದ ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿಯೂ ಶೋರೂಂಗಳನ್ನು ತೆರೆಯುವ ಯೋಜನೆಯನ್ನು ಹೊಂದಿದೆ. ಶೋರೂಂಗಳನ್ನು ತೆರೆಯುವುದರ ಜೊತೆಗೆ, ಸ್ಕೂಟರ್‌ಗಳ ಮಾರಾಟದ ಬಗ್ಗೆಯೂ ಕಂಪನಿಯು ಗಮನ ಹರಿಸುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೆಟ್ರೋಲ್ ಸ್ಕೂಟರ್ ಪಡೆದು ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಈ ಕಂಪನಿ

ಪ್ರಧಾನಿ ನರೇಂದ್ರ ಮೋದಿಯವರು ಸ್ವಾವಲಂಬಿ ಭಾರತಕ್ಕಾಗಿ ಕರೆ ನೀಡಿದ ನಂತರ ಒಕಿನಾವ ಕಂಪನಿಯು ಸ್ಥಳೀಕರಣ ನೀತಿಯನ್ನು ಉತ್ತೇಜಿಸುತ್ತದೆ. 100% ಸ್ಥಳೀಯವಾಗಿ ತಯಾರಿಸಿದ ಬಿಡಿಭಾಗಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸುವುದಾಗಿ ತಿಳಿಸಿದೆ.

Most Read Articles

Kannada
English summary
Okinawa company launches petrol scooter exchange offer. Read in Kannada.
Story first published: Wednesday, November 18, 2020, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X