500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ರಾಯಲ್ ಎನ್‍‍ಫೀಲ್ಡ್ ಕಂಪನಿಯ 500 ಸಿಸಿ ಬೈಕ್‍ಗಳು ಒಂದು ದಶಕಗಳ ಕಾಲ ಭಾರತದಲ್ಲಿ ಪಾರುಪತ್ಯ ಮೆರೆದಿವೆ. ಆದರೆ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಸೆಗ್‍‍ಮೆಂಟ್‍ನ ಬೈಕ್‍ಗಳು ಇತಿಹಾಸ ಪುಟ ಸೇರಲಿವೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ರಾಯಲ್ ಎನ್‍‍‍ಫೀಲ್ಡ್ ಕಂಪನಿಯು ತನ್ನ 500 ಸಿಸಿ ಯು‍ಸಿಇ (ಯುನಿಟ್ ಕನ್‌ಸ್ಟ್ರಕ್ಷನ್ ಎಂಜಿನ್) ಸೆಗ್‍‍ಮೆಂಟ್‍‍ನ ಬೈ‍ಕುಗಳ ಉತ್ಪಾದನೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಸೆಗೆಮೆಂ‍ಟ್‍ನ ಕ್ಲಾಸಿಕ್ 500, ಬುಲೆಟ್ ಮತ್ತು ಥಂಡರ್‍‍ಬರ್ಡ್ 500 ಬೈಕು‍‍ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಆದರೆ ಈ ಸಂದರ್ಭದಲ್ಲಿ 500ಸಿಸಿ ಸೆಗ್‍‍ಮೆಂಟ್‍ ಬೈಕು‍ಗಳ ನೆನಪಿಗಾಗಿ ತಯಾರಕ ಕಂಪನಿಯು ಕ್ಲಾಸಿಕ್ 500 ಟ್ರಿಬ್ಯೂಟ್ ಬ್ಲ್ಯಾಕ್ ಲಿಮೆಟೆಡ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ಫೆಬ್ರವರಿ 10ರಂದು ಮಧಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಈ ಬೈಕ್ ಅನ್ನು ರಾಯಲ್ ಎನ್‍ಫೀಲ್ಡ್ ಅಧಿಕೃತ ವೆಬೆಸೈಟ್‍‍ನಲ್ಲಿ ಮಾರಾಟ ಮಾಡಲಾಗುತ್ತದೆ. ಕಂಪನಿಯ ವೆಬ್‍‍ಸೈಟ್‍‍ನಲ್ಲಿ ಮಾರಾಟಕ್ಕಾಗಿ ನೋಂದಣಿ ಪ್ರಾರಂಭವಾಗಿದೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ಈ ಲಿಮಿಟೆಡ್ ಎಡಿಷನ್ ಬೈಕ್ 500 ಸಿಸಿ ಲಾಂಗ್ ಸ್ಪೋಕ್ ಸಿಂಗಲ್ ಸಿಲಿಂಡರ್ ಯುಸಿ‍ಇ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,250 ಆರ್‍‍ಪಿ‍ಎಂನಲ್ಲಿ 27.2 ಬಿಹೆಚ್‍ಪಿ ಪವರ್ ಮತ್ತು 4,000 ಆರ್‍‍ಪಿಎಂನಲ್ಲಿ 41.3 ಎನ್‍ಎಂ ಟಾಕ್ ಅನ್ನು ಉತ್ಪಾದಿಸುತ್ತದೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ಇದರೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ರಾಯಲ್ ಎನ್‍‍ಫೀಲ್ಡ್ 500 ಸೆಗ್‍‍ಮೆಂಟ್‍‍ನ ನೆನೆಪಿಗಾಗಿ ಬಿಡುಗಡೆಗೊಳಿಸುವುದರಿಂದ ಕೊನೆಯ ಬೈಕ್ ಅನ್ನು ಲಿಮಿಡೆಡ್ ಎಡಿಷನ್ ಆಗಿ ಬಿಡುಗಡೆಗೊಳಿಸಲಿದೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ಇದರಲ್ಲಿ ಪ್ರತಿಯೊಂದು ಬೈಕ್‍‍ಗಳು ವಿಶಿಷ್ಟವಾದ ಎಂಡ್ ಆಫ್ ಬಿಲ್ಡ್ ಸರಣೆ ಸಂಖ್ಯೆಯನ್ನು ಹೊಂದಿರುತ್ತದೆ. ಡ್ಯುಯಲ್ ಟೋನ್ ಮ್ಯಾಟ್ ಅಂಡ್ ಗ್ಲೋಸ್ ಬ್ಲ್ಯಾಕ್ ಬಣ್ಣವನ್ನು ಹೊಂದಿರುತ್ತದೆ. ಈ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದ ಫೆಂಡರ್‍‍ಗಳಲ್ಲಿ, ರಿಮ್ಸ್ ಸುತ್ತಲೂ ಮತ್ತು ಫ್ಯೂಯಲ್ ಟ್ಯಾಂಕಿನಲ್ಲಿ ಆರೇಂಜ್ ಬಣ್ಣ‍ಗಳನ್ನು ಹೊಂದಿರಲಿದೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 500 ಬೈಕ್ ಅನ್ನು 2008ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕ್ ರಾಯಲ್ ಎನ್‍‍ಫೀಲ್ಡ್ ಸರಣಿಯಲ್ಲಿರುವ ಯಶಸ್ವಿ ಬೈಕ್‍‍ಗಳಲ್ಲಿ ಒಂದಾಗಿದೆ. ಮಾಲಿನ್ಯವನ್ನು ತಡೆಗಟ್ಟುವ ದೃಷ್ಠಿಯಲ್ಲಿ ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ಬಿಎಸ್-6 ಮಾಲಿನ್ಯ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿದೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ಇದೇ ಕಾರಣದಿಂದ ರಾಯಲ್ ಎನ್‍‍ಫೀಲ್ಡ್ 500 ಸಿಸಿ ಸರಣಿಯ ಬೈಕ್‍‍ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಯಾಕೆಂದರೆ 500 ಸಿಸಿ ಸೆಗ್‍‍ಮೆಂಟ್‍‍ನ ಬೈಕ್‍ಗಳನ್ನು ಕಟ್ಟು ನಿಟ್ಟಾದ ಬಿಎಸ್-6 ಮಾನದಂಡಗಳಿಗೆ ಅನುಸಾರವಾಗಿ ನವೀಕರಿಸುವುದು ಉತ್ಪಾದಕರಿಗೆ ಕಷ್ಟಕರವಾಗಿದೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ಅಲ್ಲದೇ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಇತ್ತೀಚೆಗೆ ಬಿಎಸ್-6 ಟ್ವಿನ್ ಬೈಕ್‍ಗಳನ್ನು ಬಿಡುಗಡೆಗೊಳಿಸಿದೆ ಈ ಟ್ವಿನ್ ಬೈಕ್‍‍ಗಳು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಇದರಿಂದಾಗಿ ಗ್ರಾಹಕರನ್ನು ಸೆಳೆಯಬಹುದು ಮತ್ತು 500 ಸಿಸಿ ಸೆಗ್‍‍ಮೆಂಟ್‍‍ನ ಸ್ಥಾನವನ್ನು ಇದು ಸರಿಯಾಗಿ ನಿಭಾಹಿಸಬಹುದು ಎಂದು ಕಂಪನಿಯು ನಂಬಿದೆ.

500ಸಿಸಿಯ ಕೊನೆಯ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್

ಪ್ರಸುತ 500 ಸಿಸಿ ಬೈಕ್‍‍ಗಳ ಮಾರಾಟವು ಮುಂದಿನ ಮಾರ್ಚ್ 31 ಕ್ಕೆ ಕೊನೆಗೊಳ್ಳುತ್ತದೆ. ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ಮೊದಲು ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳು ಲಭ್ಯವಿರುತ್ತವೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಈ ಬೈಕಿನ ಸ್ಥಳೀಯ ಸೇವೆ ಮತ್ತು ಬಿಡಿಭಾಗಗಳು ಲಭ್ಯವಿರಲಿವೆ.

Most Read Articles

Kannada
English summary
Royal Enfield Classic 500 Tribute Black Announced; Launch On Feb 10. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X