ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಭಾರತೀಯರಿಗೆ ಕಾರುಗಳಿಗಿಂತ ದ್ವಿಚಕ್ರ ವಾಹನಗಳ ಮೇಲೆ ಹೆಚ್ಚು ಪ್ರೀತಿ. ಈ ಕಾರಣಕ್ಕೆ ಕಾರುಗಳಿಗಿಂತ ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈಗ ಮಾರಣಾಂತಿಕ ಕರೋನಾ ವೈರಸ್ ನಿಂದಾಗಿ ಪರಿಸ್ಥಿತಿ ಬದಲಾಗಿದೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಕರೋನಾ ವೈರಸ್ ಕಾರಣಕ್ಕೆ ಪ್ರಪಂಚದಲ್ಲಿರುವ ಎಲ್ಲಾ ವಾಹನ ಕಂಪನಿಗಳು ಹಿಂದೆಂದೂ ಕಾಣದ ಮಟ್ಟಕ್ಕೆ ಕುಸಿತವನ್ನು ಕಂಡಿವೆ. ಎಲ್ಲಾ ವಾಹನ ತಯಾರಕ ಕಂಪನಿಗಳು ಉತ್ಪಾದನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಟಾಟಾ ಗ್ರೂಪ್ ಸಹ ಭಾರಿ ಕುಸಿತವನ್ನು ಅನುಭವಿಸಿದೆ. ಅದರ ಉತ್ಪಾದನೆ ಹಾಗೂ ಮಾರಾಟ ಪ್ರಮಾಣವು ತೀವ್ರವಾಗಿ ಕುಸಿದಿದೆ. ಆದರೆ ದೇಶಿಯ ಮಾರುಕಟ್ಟೆಯಲ್ಲಿರುವ ಕೆಲವು ಕಂಪನಿಗಳು ಈ ಅವಧಿಯಲ್ಲೂ ಹೊಸ ಮೈಲಿಗಲ್ಲು ಸಾಧಿಸಿವೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಕೆಲದಿನಗಳ ಹಿಂದಷ್ಟೇ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಮೈಲಿಗಲ್ಲನ್ನು ಸ್ಥಾಪಿಸಿತ್ತು. ಈಗ ಮತ್ತೊಂದು ದ್ವಿಚಕ್ರ ವಾಹನ ಕಂಪನಿಯು ಇದೇ ಮೈಲಿಗಲ್ಲನ್ನು ಸ್ಥಾಪಿಸಿದೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯೇ ಆ ಮೈಲಿಗಲ್ಲನ್ನು ಸ್ಥಾಪಿಸಿರುವ ಕಂಪನಿ. ಅಂದ ಹಾಗೆ ಸುಜುಕಿ ಮೋಟಾರ್‌ಸೈಕಲ್ ಈ ಬೆಳವಣಿಗೆಯನ್ನು ಸಾಧಿಸುತ್ತಿರುವುದು ಇದೇ ಮೊದಲಲ್ಲ. ಸುಜುಕಿ ಕಂಪನಿಯ ಮಾರಾಟವು ಹಲವು ಇದು ತಿಂಗಳುಗಳಿಂದ ಹೆಚ್ಚಾಗಿದೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಹೊಸ ತಲೆಮಾರಿನ ಜಿಕ್ಸರ್ ಸರಣಿಯ ಬೈಕುಗಳನ್ನು ಬಿಡುಗಡೆಗೊಳಿಸಿದ ನಂತರ ಸುಜುಕಿ ಕಂಪನಿಯ ಮಾರಾಟವು ಹೆಚ್ಚಾಗಿದೆ. 2019ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಸುಜುಕಿ ಕಂಪನಿಯ ಮಾರಾಟವು 2020ರ ಹಣಕಾಸು ವರ್ಷದಲ್ಲಿ 5.7%ನಷ್ಟು ಹೆಚ್ಚಾಗಿದೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

2019ರ ಮಾರ್ಚ್ ತಿಂಗಳಿನ ವೇಳೆಗೆ ಸುಜುಕಿ ಕಂಪನಿಯು 7,47,506 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 7,90,397 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಸುಜುಕಿ ಕಂಪನಿಯ ಬೈಕುಗಳನ್ನು ಅತಿ ಹೆಚ್ಚು ಮಾರಾಟವಾಗುವ ಹೊಸ ಸ್ಟೈಲಿಶ್ ದ್ವಿಚಕ್ರ ವಾಹನಗಳೆಂದು ಪರಿಗಣಿಸಲಾಗುತ್ತದೆ. ಮಾರ್ಚ್ 2020ರಲ್ಲಿ ಮಾರಾಟವಾದ 40,636 ದ್ವಿಚಕ್ರ ವಾಹನಗಳಿಂದ ಇದು ದೃಢಪಟ್ಟಿದೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಈ ಪ್ರಮಾಣವನ್ನು ಮಾರ್ಚ್ 22ರವರೆಗೆ ಮಾತ್ರ ಪರಿಗಣಿಸಲಾಗಿದೆ. ಮಾರ್ಚ್ 22ರ ನಂತರ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಸುಜುಕಿ ಮೋಟಾರ್ಸ್ ಸೈಕಲ್ ಕಂಪನಿಯ ಮಾರಾಟ ಸ್ಥಗಿತಗೊಂಡಿದೆ.

ಕರೋನಾ ಭೀತಿಯ ಮಧ್ಯೆಯೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಸುಜುಕಿ

ಸುಜುಕಿ ಕಂಪನಿಯ ಈ ಹೊಸ ಮೈಲಿಗಲ್ಲು ಬೇರೆ ಕಂಪನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ. ಕರೋನಾ ವೈರಸ್ ನಿಂದ ಬೇರೆ ಕಂಪನಿಗಳು ತತ್ತರಿಸಿದ್ದರೆ, ಸುಜುಕಿ ಮೋಟಾರ್ಸ್ ಸೈಕಲ್ ಕಂಪನಿ ಮಾತ್ರ ತನ್ನ ಹೊಸ ಮೈಲಿಗಲ್ಲಿನಿಂದ ಸಂಭ್ರಮಿಸುತ್ತಿದೆ.

Most Read Articles

Kannada
English summary
Suzuki Motorcycle posts 5.7 percent rise in 2020 FY. Read in Kannada.
Story first published: Saturday, April 4, 2020, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X