ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಬ್ರಿಟಿಷ್ ಐಕಾನಿಕ್ ಬ್ರಾಂಡ್ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟಿವಿಎಸ್ ಮೋಟಾರ್ ಕಂಪನಿಯು ಹೊಸ ಸಹಭಾಗಿತ್ವದ ಯೋಜನೆಗಾಗಿ ಮಧ್ಯಂತರ ಸಿಇಒ ನೇಮಕ ಮಾಡಿ ಆದೇಶ ಹೊರಡಿಸಿದೆ.

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಹಾರ್ಲೆ ಡೇವಿಡ್ಸನ್ ಯುರೋಪ್ ವಿಭಾಗದ ಮಾಜಿ ಉಪಾಧ್ಯಕ್ಷ ಜಾನ್ ರೂಸೆಲ್ ಅವರನ್ನು ಟಿವಿಎಸ್ ಕಂಪನಿಯು ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯ ಮಧ್ಯಂತರ ಸಿಇಒ ಆಗಿ ನೇಮಕ ಮಾಡಿದ್ದು, ಐಕಾನಿಕ್ ಬ್ರಾಂಡ್‌ಗೆ ಹೊಸ ಚೈತನ್ಯ ತುಂಬಲಿದ್ದಾರೆ. ಸುಮಾರು ರೂ.150 ಕೋಟಿ ನೀಡಿ ನಾರ್ಟನ್ ಕಂಪನಿಯ ಅರ್ಧಕ್ಕೂ ಹೆಚ್ಚು ಷೇರುಗಳನ್ನು ತನ್ನದಾಗಿಸಿಕೊಂಡಿರುವ ಟಿವಿಎಸ್ ಕಂಪನಿಯು ಐಷಾರಾಮಿ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ನಾರ್ಟನ್ ಮೋಟಾರ್‌ಸೈಕಲ್ ಈಗಾಗಲೇ ಭಾರತ ಸೇರಿ ವಿಶ್ವದ ಪ್ರಮುಖ 21 ರಾಷ್ಟ್ರಗಳಲ್ಲಿ ಬೈಕ್ ಮಾರಾಟ ಜಾಲವನ್ನು ಹೊಂದಿದ್ದು, ಇದೀಗ ಟಿವಿಎಸ್ ಮೋಟಾರ್ ನೇತೃತ್ವದಲ್ಲಿ ಮುನ್ನಡೆಯಲಿರುವ ಐಕಾನಿಕ್ ಬೈಕ್ ಬ್ರಾಂಡ್ ಮಾದರಿಯು ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

MOST READ: ಲಾಕ್‌ಡೌನ್ ಎಫೆಕ್ಟ್- ಸದ್ಯಕ್ಕಿಲ್ಲ ಚೇತಕ್ ಇವಿ ಸ್ಕೂಟರ್ ಉತ್ಪಾದನೆ ಮತ್ತು ಮಾರಾಟ

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಯ ಹೊಸ ಕಫೆ ರೇಸರ್ ಬೈಕ್‌ಗಳನ್ನು ಬಿಡುಗಡೆ ಮಾಡಲಿರುವ ನಾರ್ಟನ್ ಮತ್ತು ಟಿವಿಎಸ್ ಕಂಪನಿಗಳು ಮುಂದಿನ ಯೋಜನೆಗಳನ್ನು ಸಿದ್ದಪಡಿಸುತ್ತಿದ್ದು, ಆಟೋ ಉದ್ಯಮದಲ್ಲಿ ನುರಿತ ಜಾನ್ ರೂಸೆಲ್ ಅವರನ್ನೇ ಸಿಇಒ ಆಗಿ ನೇಮಕಗೊಳಿಸಿದೆ.

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಇನ್ನು 1898ರಲ್ಲೇ ಆಟೋ ಉದ್ಯಮಕ್ಕೆ ಕಾಲಿಟ್ಟಿರುವ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯು ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಅನುಭವ ಹೊಂದಿದ್ದರೂ ಇತ್ತೀಚೆಗೆ ಕೆಲವು ಹೊಸ ಯೋಜನೆಗಳಿಂದಾಗಿ ಸಾಕಷ್ಟು ಆರ್ಥಿಕ ಮುಗ್ಗಟ್ಟು ಎದುರಿಸಿತ್ತು.

MOST READ: ಕೆಟಿಎಂ ಡ್ಯೂಕ್ 200 ಬೈಕಿಗೆ ಪೈಪೋಟಿ ನೀಡಲಿದೆ ಹೋಂಡಾ ನಿರ್ಮಾಣದ ಹೊಸ 190ಸಿಸಿ ಬೈಕ್

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಈ ವೇಳೆ ನಾರ್ಟನ್ ಮೋಟಾರ್‌ಸೈಕಲ್ ಕಂಪನಿಯು ಷೇರುಗಳನ್ನು ಖರೀದಿಸಿರುವ ಟಿವಿಎಸ್ ಕಂಪನಿಯು ಐಕಾನಿಕ್ ಬೈಕ್ ಬ್ರಾಂಡ್ ಹೊಸ ಶಕ್ತಿ ತುಂಬಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುವ ಸುಳಿವು ನೀಡಿದೆ.

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಮಾಹಿತಿ ಪ್ರಕಾರ, ಟಿವಿಎಸ್ ಕಂಪನಿಯು ಆರಂಭಿಕವಾಗಿ 500 ಸಿಸಿ ಕಫೆ ರೇಸರ್ ಬೈಕ್‌ಗಳನ್ನು ನಾರ್ಟನ್ ಜೊತೆಗೂಡಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಹೊಸ ಬೈಕ್‌ಗಳ ಬೆಲೆ ಇಳಿಕೆಗಾಗಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಸದ್ಯ ಸಿಕೆಡಿ ಆಮದು ನೀತಿಯಡಿ ಭಾರತದಲ್ಲಿ ಮಾರಾಟವಾಗುತ್ತಿರುವ ನಾರ್ಟನ್ ನಿರ್ಮಾಣದ ಕಮಾಂಡೋ 961 ಮತ್ತು ಡೊಮಿನಾಟರ್ ಬೈಕ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಅನುಕ್ರಮವಾಗಿ ರೂ.20.99 ಲಕ್ಷ ಮತ್ತು 23.70 ಲಕ್ಷ ಬೆಲೆ ಹೊಂದಿವೆ.

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಈ ಎರಡು ಬೈಕ್‌ಗಳಲ್ಲೂ 961 ಸಿಸಿ ಸಾಮರ್ಥ್ಯದ ಎಂಜಿನ್‌ನೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಟಿವಿಎಸ್ ಕಂಪನಿಯು ಕಮಾಂಡೋ 961 ಮತ್ತು ಡೊಮಿನಾಟರ್ ಮಾದರಿಯಲ್ಲೇ 500ಸಿಸಿ ಬೈಕ್‌ಗಳನ್ನು ಸಿದ್ದಪಡಿಸಲಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಟಿವಿಎಸ್ ತೆಕ್ಕೆಗೆ ನಾರ್ಟನ್ ಮೋಟಾರ್‌ಸೈಕಲ್- ಹೊಸ ಯೋಜನೆಗೆ ಮಧ್ಯಂತರ ಸಿಇಒ ನೇಮಕ

ಹೊಸ ಎಂಜಿನ್ ಪ್ರೇರಿತ ನಾರ್ಟನ್ ಮೋಟಾರ್‌ಸೈಕಲ್ ಬೈಕ್‌ಗಳು ಮುಂಬರುವ 2021ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ 500 ಬೈಕ್‌ಗಳ ಬೆಲೆಯು ರೂ. 5 ಲಕ್ಷದಿಂದ ರೂ.7 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
TVS Motor Company Appoints An Interim CEO For Norton Motorcycles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X