ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಯಮಹಾ ಇಂಡಿಯಾ ಕಂಪನಿಯು ವಿವಿಧ ದ್ವಿಚಕ್ರ ವಾಹನಗಳ ಆಕ್ಸೆಸರಿಸ್ ಖರೀದಿಗಾಗಿ ಇ-ಕಾರ್ಮರ್ಸ್ ಕಂಪನಿಯಾದ ಅಮೆಜಾನ್ ಜೊತೆ ಕೈಜೋಡಿಸಿದ್ದು, ತನ್ನ ಅಧಿಕೃತ ಆಕ್ಸೆಸರಿಸ್ ಮಾದರಿಗಳನ್ನು ಇನ್ಮುಂದೆ ಇ-ಕಾಮರ್ಸ್ ಮಳಿಗೆ ಮೂಲಕ ಮಾರಾಟ ಮಾಡಲಿದೆ.

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಇ-ಕಾರ್ಮಸ್ ಉದ್ಯಮದಲ್ಲಿ ಮುಂಚೂಣಿಯಲ್ಲಿ ಅಮೆಜಾನ್ ಕಂಪನಿಯು ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದು, ಹೊಸ ಆಕ್ಸೆಸರಿಸ್‌ಗಳನ್ನು ದೇಶಾದ್ಯಂತ ಒದಗಿಸುವ ಸರಳವಾಗುವಂತೆ ಅಮೆಜಾನ್ ಜೊತೆಗೂಡಿ ಆಕ್ಸೆಸರಿಸ್‌ಗಳನ್ನ ಮಾರಾಟ ಮಾಡುತ್ತಿದೆ. ಅಮೆಜಾನ್ ಇ-ಕಾಮರ್ಸ್ ಜಾಲತಾಣದಲ್ಲಿ ಯಮಹಾ ಕಂಪನಿಯ ವಿವಿಧ ಆಕ್ಸೆಸರಿಸ್‌ಗಳು ಆಕರ್ಷಕ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಗ್ರಾಹಕರು ಹಲವು ಆಫರ್‌ಗಳೊಂದಿಗೆ ಹೊಸ ಆಕ್ಸೆಸರಿಸ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಯಮಹಾ ಕಂಪನಿಯು ತನ್ನ ಗ್ರಾಹಕರಿಗೆ ಬ್ರಾಂಡ್ ಲೊಗೊ ಹೊಂದಿರುವ ಟಿ-ಶರ್ಟ್, ಜೀನ್ಸ್, ಹ್ಯಾಂಡ್ ಬ್ಯಾಗ್, ರೈಡಿಂಗ್ ಗ್ಲೌಸ್, ಬ್ಯಾಗ್, ಕ್ಯಾಪ್ ಸೇರಿದಂತೆ ಯುಎಸ್‌ಬಿ ಚಾರ್ಜರ್, ಹೆಲ್ಮೆಟ್, ಎಂಜಿನ್ ಗಾರ್ಡ್, ಸ್ಕಿಡ್ ಪ್ಲೇಟ್, ಫ್ರೇಮ್ ಸ್ಲೈಡರ್, ಸ್ಕೂಟರ್ ಗಾರ್ಡ್ ಸೆಟ್ ಕೂಡಾ ಲಭ್ಯವಿವೆ.

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಇದರಲ್ಲದೇ ವಿವಿಧ ಬೈಕ್‌ ಮಾದರಿಗಳಿಗಾಗಿ ಚೈನ್‌ ಮತ್ತು ಸ್ಟಿಕ್ಕರ್‌ಗಳನ್ನು ಸಹ ಒದಗಿಸುತ್ತಿದ್ದು, ವಿವಿಧ ಆಫರ್‌ಗಳ ಅಡಿಯಲ್ಲಿ ಯಮಹಾ ಆಕ್ಸೆಸರಿಸ್‌ಗಳು ಆಕರ್ಷಕ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿವೆ. ಆಸಕ್ತ ಗ್ರಾಹಕರು ಅಮೆಜಾನ್ ಜಾಲತಾಣದಲ್ಲಿ ಮತ್ತಷ್ಟು ಮಾಹಿತಿ ಪಡೆಯಬಹುದಾಗಿದ್ದು, ಆಕರ್ಷಕ ಬೆಲೆ ಹೊಂದಿವೆ.

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಇನ್ನು ಯಮಹಾ ಕಂಪನಿಯ ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಫ್‌ಜೆಡ್ಎಸ್ ಬೈಕಿನಲ್ಲಿ ನೈಟ್ ಎಡಿಷನ್ ಮಾದರಿಯ ಬಿಡುಗಡೆ ಮೂಲಕ ಮೊದಲ ಬ್ಲೂಟೂತ್ ಟೆಕ್ನಾಲಜಿ ಹೊಂದಿರುವ ಬೈಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಎಫ್‌ಜೆಡ್ಎಸ್ ಡಾರ್ಕ್ ನೈಟ್ ಎಡಿಷನ್‌ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.07 ಲಕ್ಷ ಬೆಲೆ ಹೊಂದಿದ್ದು, ಯಮಹಾ ಕಂಪನಿಯು ಬಿಡುಗಡೆಗೊಳಿಸಿರುವ ಬ್ಲೂಟೂತ್ ಟೆಕ್ನಾಲಜಿಯನ್ನು 'ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್' ಎಂದು ಕರೆಯಲಾಗಿದೆ. ಯಮಹಾ ಕಂಪನಿಯು ಬ್ಲ್ಯೂಟೂತ್ ತಂತ್ರಜ್ಞಾನ ಹೊಂದಿರುವ ಎಫ್‌ಜೆಡ್ಎಸ್ ಡಾರ್ಕ್ ನೈಟ್ ಮಾದರಿಯನ್ನು ನವೆಂಬರ್ 1ರಿಂದ ಮಾರಾಟ ಮಾಡಲಿದ್ದು, ಹೊಸ ಬೈಕ್ ಖರೀದಿಗೆ ಈಗಾಗಲೇ ಬುಕ್ಕಿಂಗ್ ಆರಂಭಿಸಿದೆ.

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಬ್ಲ್ಯೂಟೂತ್ ಟೆಕ್ನಾಲಜಿ ಮೂಲಕ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಮಾಡಿಕೊಳ್ಳುವ ಬೈಕ್ ಸವಾರರು ಸ್ಮಾರ್ಟ್ ಫೋನ್ ಮೂಲಕ ಬೈಕಿನ ಪ್ರಮುಖ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ನ್ಯಾವಿಗೇಷನ್ ಬಳಕೆಗೂ ಇದು ಸಾಕಷ್ಟು ಸಹಕಾರಿಯಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಹೊಸ ಬ್ಲೂಟೂತ್ ಟೆಕ್ನಾಲಜಿ ನಂತರ ಎಫ್‌ಜೆಡ್ಎಸ್ ಬೈಕ್ ಮಾದರಿಯ ಬೆಲೆಯಲ್ಲಿ ರೂ. 2,500 ದಷ್ಟು ಹೆಚ್ಚಳವಾಗಿದ್ದು, ಬ್ಲೂಟೂತ್ ಇಲ್ಲದ ಸಾಮಾನ್ಯ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1,05,200 ಮತ್ತು ಹೊಸ ಬ್ಲೂಟೂಥ್ ಹೊಂದಿರುವ ಮಾದರಿಯು 1,07,700 ಬೆಲೆ ಹೊಂದಿದೆ.

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಬ್ಲೂಟೂತ್ ಟೆಕ್ನಾಲಜಿಯನ್ನು ಬಳಕೆ ಮಾಡುವ ಗ್ರಾಹಕರು 'ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್' ಮೊಬೈಲ್ ಆ್ಯಪ್ ಹೊಂದಿರಬೇಕಿದ್ದು, ಆ್ಯಪ್ ಮೂಲಕವೇ ಬೈಕಿನ ತಾಂತ್ರಿಕ ಅಂಶಗಳ ಡೇಟಾ ಸಂಗ್ರಹಿಸಿಕೊಳ್ಳಬಹುದಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಆಕ್ಸೆಸರಿಸ್‌ಗಳನ್ನು ಅಮೆಜಾನ್‌ನಲ್ಲಿ ಮಾರಾಟ ಮಾಡಲಿದೆ ಯಮಹಾ ಇಂಡಿಯಾ

ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್ ಆ್ಯಪ್ ಮೂಲಕ ಬಳಕೆದಾರರು ಬೈಕ್ ನಿರ್ವಹಣೆ, ರೈಡಿಂಗ್ ಹಿಸ್ಟರಿ, ಬೈಕ್ ನಿಲುಗಡೆಯ ಸ್ಥಳ, ಇ-ಲಾಕ್ ಸೌಲಭ್ಯ, ಪಾರ್ಕಿಂಗ್ ರೆಡಾರ್ಡ್ ಜೊತೆಗೆ ರೈಡಿಂಗ್ ವೇಳೆ ಅಪಾಯದ ಮುನ್ಸೂಚನೆಗಳನ್ನು ತಿಳಿಸುವ ಫೀಚರ್ಸ್‌ಗಳಿವೆ.

Most Read Articles

Kannada
Read more on ಯಮಹಾ yamaha
English summary
Yamaha partners with Amazon to offer apparels and accessories online. Read in Kannada.
Story first published: Saturday, October 31, 2020, 20:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X