ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

ಜಾವಾ ಮೋಟಾರ್‌ಸೈಕಲ್‌ ಕಂಪನಿಯು ತನ್ನ 2021ರ ಜಾವಾ 42 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಜಾವಾ 42 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.1.84 ಲಕ್ಷಗಳಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

2021ರ ಜಾವಾ 42 ಬೈಕ್ ಹೊಸ ಫೀಚರ್ ಗಳು ಮತ್ತು ಸ್ವಲ್ಪ ಕಾಸ್ಮೆಟಿಕ್ ನವೀಕರಣಗಳು ಮತ್ತು ಮೂರು ಹೊಸ ಬಣ್ಣದ ಆಯ್ಕೆಗಳೊಂದಿಗೆ ಬಿಡುಗಡೆಗೊಂಡಿದೆ. ಮೊದಲಿಗೆ ಕಾಸ್ಮೆಟಿಕ್ ನವೀಕರಣಗಳ ಬಗೆ ಹೇಳುವುದಾದರೆ, ಹೊಸ ಜಾವಾ 42 ಬೈಕ್ ಸಿರಿಯಸ್ ವೈಟ್, ಆಲ್-ಸ್ಟಾರ್ ಬ್ಲ್ಯಾಕ್ ಮತ್ತು ಓರಿಯನ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿವೆ. ಇನ್ನು ಈ ಬೈಕಿನ ಫ್ಯೂಯಲ್ ಟ್ಯಾಂಕ್ ನಲ್ಲಿ ‘42' ಮತ್ತು ‘ಕ್ಲಾಸಿಕ್ ಲೆಜೆಂಡ್ಸ್' ಗ್ರಾಫಿಕ್ಸ್‌ ಎಂಬ ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

ಇನ್ನು 2021ರ ಜಾವಾ 42 ಬೈಕಿನಲ್ಲಿ ಈಗ ಬಾರ್-ಎಂಡ್ ಮೀರರ್, ರೈಡರ್ ಮತ್ತು ಪಿಲಿಯನ್ ಎರಡಕ್ಕೂ ವಿಶಾಲವಾದ ಮತ್ತು ಹೆಚ್ಚು ಆರಾಮದಾಯಕವಾದ ಸೀಟ್, ಮರುವಿನ್ಯಾಸಗೊಳಿಸಲಾದ ಸೈಡ್ ಸ್ಟ್ಯಾಂಡ್, ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ಅಲಾಯ್ ವ್ಹೀಲ್ ಮತ್ತು ಹೆಚ್ಚಿನ ಫೀಚರ್ ಗಳು ಸ್ಟ್ಯಾಂಡರ್ಡ್ ಆಗಿ ನೀಡಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

ಇನ್ನು ಈ ಬೈಕಿಗೆ ಹೆಡ್‌ಲ್ಯಾಂಪ್ ಗ್ರಿಲ್ ಮತ್ತು ಫ್ಲೈ-ಸ್ಕ್ರೀನ್ ಅನ್ನು ಬಿಡಿಭಾಗಗಳಾಗಿ ನೀಡಲಿವೆ. 2021ರ ಜಾವಾ 42 ಬೈಕಿನಲ್ಲಿ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ನೀಡಲು ಸಸ್ಪೆಂಕ್ಷನ್ ಸೆಟಪ್ ಅನ್ನು ರಿ-ಟ್ಯೂನ್ ಮಾಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

ಹೊಸ ಜಾವಾ 42 ಬೈಕಿನಲ್ಲಿ ಅದೇ 293ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಈಗ ಕ್ರಾಸ್-ಪೋರ್ಟ್ ಹರಿವಿನೊಂದಿಗೆ ಬರುತ್ತದೆ, ಇದು ಉತ್ತಮ ಮೈಲೇಜ್, ಬಲವಾದ ಎಕ್ಸ್ ಲೇರಷನ್ ಮತ್ತು ಅದರ ಡ್ಯುಯಲ್ ಪೈಪ್‌ಗಳಿಂದ ಥ್ರೋಟಿಯರ್ ಎಕ್ಸಾಸ್ಟ್ ನೋಟ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

2021ರ ಜಾವಾ 42 ಬೈಕಿನಲ್ಲಿ ನವೀಕರಿಸಿದ 293ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, ಇದು 6800 ಆರ್‌ಪಿಎಂನಲ್ಲಿ 27 ಬಿಹೆಚ್‌ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 27 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

2021ರ ಜಾವಾ 42 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾವಾ ಬೈಕ್ 2 ಕೆಜಿ ಹಗುರವಾಗಿದೆ. ಇದು ಒಟ್ಟು 172 ಕೆಜೆ ತೂಕವನ್ನು ಹೊಂದಿದೆ. ಅಲ್ಲದೇ 2021ರ ಜಾವಾ 42 ಬೈಕಿನಲ್ಲಿ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

2021ರ ಜಾವಾ 42 ಬೈಕ್ ಗಾಗಿ ಶೀಘ್ರದಲ್ಲೇ ಬುಕ್ಕಿಂಗ್ ಅನ್ನು ಪ್ರಾರಂಭಿಸುತ್ತದೆ. ಅಲ್ಲದೇ ಈ ಹೊಸ ಬೈಕಿನ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು. 2021ರ ಜಾವಾ 42 ಬೈಕಿನ ಖರೀದಿಗಾಗಿ ಗ್ರಾಹಕರು ಆನ್‌ಲೈನ್ ಮೂಲಕ ಅಥವಾ ದೇಶಾದ್ಯಂತ ಇರುವ ಯಾವುದೇ ಜಾವಾ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಜಾವಾ 42 ಬೈಕ್

ಪ್ರಮುಖ ಬದಲಾವಣೆಗಳೊಂದಿಗೆ 2021ರ ಜಾವಾ 42 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಹೊಸ ಜಾವಾ 42 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

Most Read Articles

Kannada
English summary
2021 Jawa Forty-Two Motorcycle Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X