ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಇಂಧನ ಚಾಲಿತ ವಾಹನಗಳಿಂದಾಗಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಇಂಧನಗಳ ಬೆಲೆ ಏರಿಕೆ ಪರಿಣಾಮ ಹೊಸ ವಾಹನ ಖರೀದಿದಾರರು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬದಲಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಇವಿ ವಾಹನಗಳು ಸಾಂಪ್ರಾದಾಯಿಕ ವಾಹನಗಳಿಂತಲೂ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಮಾಲಿನ್ಯ ತಡೆಯಲು ಸಾಕಷ್ಟು ಸಹಕಾರಿಯಾಗಿವೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ನಡುವೆಯೂ ಎಥರ್ ಸ್ಕೂಟರ್ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಆಕರ್ಷಕ ಮೈಲೇಜ್, ಹಲವಾರು ಪ್ರೀಮಿಯಂ ಫೀಚರ್ಸ್, ಅತ್ಯುತ್ತಮ ಎಲೆಕ್ಟ್ರಿಕ್ ಎಂಜಿನ್ ಕಾರ್ಯಕ್ಷಮತೆ ಮತ್ತು ತಾಂತ್ರಿಕ ಸೇವೆಗಳ ವಿಚಾರವಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹೊಂದಿದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಪ್ರಸ್ತುತ ಮಾರುಕಟ್ಟೆಯಲ್ಲಿ ಎಥರ್ ಕಂಪನಿಯು ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಹೊಂದಿದ್ದು, ಇವಿ ಸ್ಕೂಟರ್ ಮಾದರಿಗಳು ಸಾಮಾನ್ಯ ಪೆಟ್ರೋಲ್ ಸ್ಕೂಟರ್‌ಗಳಿಂತಲೂ ಏಕೆ ಭಿನ್ನವಾಗಿ ಮತ್ತು ನಿರ್ವಹಣಾ ವಿಚಾರದಲ್ಲಿ ಇವಿ ಸ್ಕೂಟರ್‌ಗಳು ಪೆಟ್ರೋಲ್ ಮಾದರಿಗಳಿಂತಲೂ ವಿಭಿನ್ನತೆ ಹೊಂದಿವೆ ಎನ್ನುವ ಮಾಹಿತಿ ಹಂಚಿಕೊಂಡಿದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಎಥರ್ ಕಂಪನಿಯ ಪ್ರಕಾರ, ಒಂದು 125 ಸಿಸಿ ಪೆಟ್ರೋಲ್ ಸ್ಕೂಟರ್ ಮಾದರಿಯ ಖರೀದಿ ಮತ್ತು ನಿರ್ವಹಣೆಗಾಗಿ ಕನಿಷ್ಠ ಮೂರು ವರ್ಷಗಳಿಗೆ ರೂ. 1.82 ಲಕ್ಷ ಖರ್ಚು ಮಾಡಲಿದ್ದು, ಅದೇ ಎಥರ್ ಕಂಪನಿಯ 450 ಪ್ಲಸ್ ಮಾದರಿಯ ಖರೀದಿಗೆ ಮತ್ತು ನಿರ್ವಹಣೆಗಾಗಿ ಮೂರು ವರ್ಷಗಳ ಅವಧಿಗಾಗಿ ರೂ. 1.59 ಲಕ್ಷ ಖರ್ಚಾಗಲಿದ್ದು, 450ಎಕ್ಸ್ ಮಾದರಿಯ ಖರೀದಿ ಮತ್ತು ನಿರ್ವಹಣೆಗಾಗಿ ರೂ. 1.78 ಲಕ್ಷ ವೆಚ್ಚ ತಗಲುಬಹುದು.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಎಥರ್ ಇವಿ ಸ್ಕೂಟರ್‌ಗಳ ನಿರ್ವಹಣಾ ವೆಚ್ಚವು ಮೊದಲ ಮೂರು ವರ್ಷದಲ್ಲಿ ಪೆಟ್ರೋಲ್ ಮಾದರಿಗಳಿಗೆ ಹೋಲಿಕೆ ಮಾಡಿದರೆ ಯಾವುದೇ ದೊಡ್ಡ ವ್ಯತ್ಯಾಸ ಕಾಣುವುದಿಲ್ಲವಾದರೂ ಇವಿ ಸ್ಕೂಟರ್‌ಗಳ ಐದನೇ ವರ್ಷಗಳ ಅವಧಿಯಲ್ಲಿನ ನಿರ್ವಹಣಾ ವೆಚ್ಚಗಳ ಸರಾಸರಿಯಲ್ಲಿ ಭಾರೀ ಉಳಿತಾಯವಾಗುವುದು ನಿಮ್ಮ ಅನುಭವಕ್ಕೆ ಬರಲಿದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಉದಾಹರಣೆ 125ಸಿಸಿ ಪೆಟ್ರೋಲ್ ಸ್ಕೂಟರ್ ಖರೀದಿ ಮತ್ತು ನಿರ್ವಹಣಾ ವೆಚ್ಚವು 3 ವರ್ಷಗಳಿಗೆ ರೂ. 1.82 ಲಕ್ಷಗಳಾದರೆ ಇದರ ಐದನೇ ವರ್ಷದ ನಿರ್ವಹಣಾ ವೆಚ್ಚವು ರೂ. 2.35 ಲಕ್ಷಗಳಾಗುತ್ತದೆ. ಹಾಗೆಯೇ 450 ಪ್ಲಸ್ ಮಾದರಿಯ ಖರೀದಿಗೆ ಮತ್ತು ನಿರ್ವಹಣೆಯು ಐದು ವರ್ಷಗಳಿಗೆ ರೂ. 1.76 ಲಕ್ಷ ಖರ್ಚಾಗಲಿದ್ದು, 450ಎಕ್ಸ್ ಮಾದರಿಯ ಖರೀದಿ ಮತ್ತು ನಿರ್ವಹಣೆಗಾಗಿ ಐದು ವರ್ಷಗಳಿಗೆ ರೂ. 1.94 ಲಕ್ಷ ವೆಚ್ಚ ತಗಲುಬಹುದು.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಅಂದರೆ ಐದು ವರ್ಷಗಳಿಗೆ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ನಿರ್ವಹಣಾ ವೆಚ್ಚವು 125 ಸಿಸಿ ಪೆಟ್ರೋಲ್ ಸ್ಕೂಟರ್ ನಿರ್ವಹಣಾ ವೆಚ್ಚಕ್ಕಿಂತ ರೂ.40 ಸಾವಿರ ರೂ.60 ಸಾವಿರದಷ್ಟು ಕಡಿಮೆಯಾಗುವುದಲ್ಲದೆ ಪರೋಕ್ಷವಾಗಿ ಇವಿ ಸ್ಕೂಟರ್ ಮಾಲೀಕರಿಗೆ ಉಳಿತಾಯವಾಗುತ್ತದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಜೊತೆಗೆ ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ಇದು ಸಹಕಾರಿಯಾಗಿದ್ದು, ಎಥರ್ ಕಂಪನಿಯು ಸ್ಕೂಟರ್ ನಿರ್ವಹಣಾ ವೆಚ್ಚವನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಪೆಟ್ರೋಲ್ ದರಕ್ಕೆ ಅನುಗುಣವಾಗಿ ಪ್ರತಿ ದಿನ ಸರಾಸರಿ 25 ಕಿ.ಮೀ ಚಾಲನೆ ಆಧಾರದ ಮೇಲೆ ಈ ಲೆಕ್ಕಾಚಾರ ಮಾಡಿದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಸದ್ಯ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ದರ ಆಧಾರದ ಮೇಲೆ ಚಾಲನಾ ವೆಚ್ಚವನ್ನು ಪ್ರತಿ ಕಿ.ಮೀ ಗೆ ರೂ. 3.83 ಪೈಸೆ ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ ಚಾಲನೆಗಾಗಿ ಪ್ರತಿ ಕಿ.ಮೀ ವೆಚ್ಚವನ್ನು ಗರಿಷ್ಠ ರೂ. 1.35 ಪೈಸೆಯೆಂತೆ ಲೆಕ್ಕಾಚಾರ ಮಾಡಲಾಗಿದ್ದು, ಭವಿಷ್ಯದಲ್ಲಿ ಇವಿ ವಾಹನಗಳ ಬಳಕೆಯು ವ್ಯಯಕ್ತಿಕ ಆರ್ಥಿಕತೆ ವೃದ್ದಿಗೆ ಹೇಗೆ ಸಹಕಾರಿಯಾಗಿದೆ ಮತ್ತು ಮಾಲಿನ್ಯ ತಡೆಗೆ ಹೇಗೆಲ್ಲಾ ಸಹಕಾರಿಯಾಗಿದೆ ಎಂಬುವುದನ್ನು ಸ್ಪಷ್ಟವಾಗಿ ವಿವರಿಸಿದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಇನ್ನು ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಸ್ಟ್ಯಾಂಡರ್ಡ್ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, ಹೊಸ ಸಬ್ಸಡಿ ನಂತರ 450ಎಕ್ಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,44,500 ಮತ್ತು 450 ಪ್ಲಸ್ ಬೆಲೆಯನ್ನು ರೂ. 1,25,490 ನಿಗದಿಪಡಿಸಲಾಗಿದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಅತಿ ಹೆಚ್ಚು ಮೈಲೇಜ್ ನೀಡುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಎಥರ್ ಕಂಪನಿಯು ಕಳೆದ ವರ್ಷಕ್ಕಿಂತ 2021ರಲ್ಲಿ 12 ಪಟ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಎಥರ್ ಇವಿ ಸ್ಕೂಟರ್ vs ಪೆಟ್ರೋಲ್ ಸ್ಕೂಟರ್...ಯಾವುದು ಬೆಸ್ಟ್?

ಎಥರ್ ಕಂಪನಿಯು ಇದುವರೆ ಸುಮಾರು 26 ಹೊಸ ಶೋರೂಂಗಳಿಗೆ ಚಾಲನೆ ನೀಡಿದ್ದು, ಕಂಪನಿಯು ಈ ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 27 ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ತೆರೆಯುವ ಗುರಿಹೊಂದಿದೆ. ಕರ್ನಾಟಕದಲ್ಲಿ ಇದುವರೆಗೆ ಕಂಪನಿಯು ನಾಲ್ಕು ಮಾರಾಟ ಮಳಿಗೆಗಳನ್ನು ಹೊಂದಿದಂತಾಗಿದ್ದು, ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳೊಂದಿಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Most Read Articles

Kannada
English summary
Ather electric scooter vs petrol scooters running cost comparison
Story first published: Friday, December 24, 2021, 8:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X