Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- News
ಅಭಿವೃದ್ಧಿ ಯೋಜನೆಗಳು; ಪರಿಸರವಾದಿಗಳ ವಿರುದ್ಧ ಜನಾಕ್ರೋಶ
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರೀಮಿಯಂ ಬೈಕ್‌ಗಳಿಗೆ ಹೆಚ್ಚಿದ ಬೇಡಿಕೆ- ಬೆನೆಲ್ಲಿ ಶೋರೂಂಗಳ ಸಂಖ್ಯೆ 39ಕ್ಕೆ ಏರಿಕೆ..
ಬೆನೆಲ್ಲಿ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಬೈಕ್ ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಮಾರಾಟ ಮಳಿಗೆಗಳನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿರುವುದು ಹೊಸ ಬೈಕ್ ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ಕರೋನಾ ವೈರಸ್‌ನಿಂದಾದ ಆರ್ಥಿಕ ಸಂಕಷ್ಟದ ನಡುವೆಯೂ ಬೆನೆಲ್ಲಿ ಇಂಡಿಯಾ ಕಂಪನಿಯು ಕಳೆದ ವರ್ಷದ ಬೈಕ್ ಮಾರಾಟದಲ್ಲಿ ಬರೋಬ್ಬರಿ ಶೇ. 103ರಷ್ಟು ಬೆಳವಣಿಗೆ ಸಾಧಿಸಿದ್ದು, ಕ್ಲಾಸಿಕ್ ಬೈಕ್ ಮಾದರಿಯಾದ ಇಂಪೀರಿಯಲ್ 400 ಆವೃತ್ತಿಯು ಬೆನೆಲ್ಲಿ ಬೈಕ್ ಮಾರಾಟದಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಕಂಪನಿಯು ಮತ್ತಷ್ಟು ಹೊಸ ಬೈಕ್ ಮಾದರಿಗಳೊಂದಿಗೆ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದ್ದು, ಛತ್ತಿಸ್‍ಗಢದ ಬಿಲಾಸ್ಪುರ್‌ನಲ್ಲಿ ಇಂದು ತನ್ನ 39ನೇ ಮಾರಾಟ ಮಳಿಗೆಯನ್ನು ಆರಂಭಿಸಿತು.

ಗ್ರಾಹಕರ ಬೇಡಿಕೆ ಬೇಡಿಕೆಗೆ ಅನುಗುಣವಾಗಿ ಈ ಹಿಂದೆ 15ಕ್ಕಿಂತಲೂ ಕಡಿಮೆ ಮಾರಾಟ ಮಳಿಗೆಗಳ ಸೌಲಭ್ಯ ಹೊಂದಿದ್ದ ಬೆನೆಲ್ಲಿ ಇಂಡಿಯಾ ಕಂಪನಿಯು ಹೊಸ ಉತ್ಪನ್ನಗಳ ಜೊತೆಗೆ ಹೂಡಿಕೆ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಕಳೆದ 1 ವರ್ಷದಲ್ಲಿ 24 ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

ಕೇವಲ ಮಾಹಾನಗರಗಳಲ್ಲಿ ಮಾತ್ರವಲ್ಲ ಟೈರ್ 1 ಮತ್ತು ಟೈರ್ 2 ನಗರಗಳಲ್ಲೂ ಮಾರಾಟ ಮಳಿಗೆಗಳನ್ನು ತೆರೆಯುತ್ತಿರುವ ಬೆನೆಲ್ಲಿ ಇಂಡಿಯಾ ಕಂಪನಿಯು ಹೊಸ ಬೈಕ್ ಉತ್ಪನ್ನಗಳನ್ನು ಸಹ ಹೆಚ್ಚಿಸುತ್ತಿದ್ದು, ಬೆನೆಲ್ಲಿ ಕಂಪನಿಯು ಸದ್ಯ ಟಿಆರ್‌ಕೆ 502, ಟಿಆರ್‌ಕೆ 505 ಎಕ್ಸ್, ಲಿಯೊನ್ಸಿನೊ 500, 302 ಎಸ್, 302 ಆರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಇಂಪೀರಿಯರ್ 400 ಬಿಎಸ್-6 ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಬೆನೆಲ್ಲಿ ಹೊಸ ಬೈಕ್ ಮಾದರಿಗಳ ಪೈಕಿ ಇಂಪೀರಿಯರ್ 400 ಕ್ಲಾಸಿಕ್ ಬೈಕ್ ಮಾದರಿಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿರುವ ಹೊಸ ಬೈಕ್ ಮಾದರಿಯು ಹೊಸ ಮಾರಾಟ ಮಳಿಗೆಗಳಿಂದಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಮಾಹಾವೀರ್ ಗ್ರೂಪ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿರುವ ಬೆನೆಲ್ಲಿ ಇಂಡಿಯಾ ಕಂಪನಿಯು ಮಧ್ಯಮ ಕ್ರಮಾಂಕದ ಸ್ಟ್ರೀಟ್ ಬೈಕ್ ಮಾದರಿಗಳೊಂದಿಗೆ ಕ್ಲಾಸಿಕ್ ಬೈಕ್ ಮಾದರಿಗಳ ಮಾರಾಟಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದು, ಇಂಪೀರಿಯಲ್ 400 ನಂತರ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹಾಗೆಯೇ ಬೆನೆಲ್ಲಿ ಇಂಡಿಯಾ ಕಂಪನಿಯು ಹೊಸ ಉತ್ಪನ್ನಗಳೊಂದಿಗೆ ಸ್ಥಳೀಯವಾಗಿ ಲಭ್ಯವಾಗುವ ಬಿಡಿಭಾಗಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಹೊಸ ಯೋಜನೆಯ ಪರಿಣಾಮ ಬೈಕ್ ಉತ್ಪಾದನಾ ವೆಚ್ಚದಲ್ಲಿ ಸಾಕಷ್ಟು ಇಳಿಕೆಯಾಗಿರುವುದನ್ನು ಒಪ್ಪಿಕೊಂಡಿದೆ.

ಆತ್ಮ ನಿರ್ಭರ ಭಾರತ ಯೋಜನೆ ಅಡಿ ಹಲವು ವಾಹನ ಉತ್ಪಾದನಾ ಕಂಪನಿಗಳು ಸ್ಥಳೀಯವಾಗಿ ಲಭ್ಯವಾಗುವ ಆಟೋ ಬಿಡಿಭಾಗಗಳಿಗೆ ಆದ್ಯತೆ ನೀಡುತ್ತಿರುವ ಪರಿಣಾಮ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡುಬರುತ್ತಿದ್ದು, ಬೆನೆಲ್ಲಿ ಇಂಡಿಯಾ ಕಂಪನಿಯು ಸಹ ತನ್ನ ಇಂಪೀರಿಯಲ್ 400 ಕ್ಲಾಸಿಕ್ ಬೈಕಿನ ಬೆಲೆಯಲ್ಲಿ ರೂ.10 ಸಾವಿರ ಇಳಿಕೆ ಮಾಡುವ ಮೂಲಕ ಕೇಂದ್ರದ ಹೊಸ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಬೆನೆಲ್ಲಿ ಕಂಪನಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.99 ಲಕ್ಷ ಬೆಲೆ ಹೊಂದಿದ್ದ ಇಂಪೀರಿಯಲ್ 400 ಕ್ಲಾಸಿಕ್ ಬೈಕಿನ ಬೆಲೆಯನ್ನು ರೂ. 1.89 ಲಕ್ಷಕ್ಕೆ ಇಳಿಕೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಪೂರ್ಣ ಪ್ರಮಾಣ ಉತ್ಪಾದನೆಯಾದ ವಿವಿಧ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.