ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಜಮರ್ನಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯಧಿಕ ಮಾರಾಟವನ್ನು ಈ ವರ್ಷ ಗಳಿಸಿದೆ. ಈ ವರ್ಷ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ 5,000 ಬೈಕ್‌ಗಳನ್ನು ವಿತರಣೆ ಮಾಡಿದ್ದಾರೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

2021ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 100 ಕ್ಕಿಂತ ಹೆಚ್ಚಿನ ಮಾರಾಟದ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗಿದೆ ಬಿಎಂಡಬ್ಲ್ಯು ಮೋಟೊರಾಡ್ ಭಾರತದಲ್ಲಿ ಮಾರಾಟವಾದ 5,000 ಬೈಕ್‌ಗಳಲ್ಲಿ ಸುಮಾರು 90 ಪ್ರತಿಶತದಷ್ಟು ತನ್ನ ಎಂಟ್ರಿ ಲೆವೆಲ್ ಆದ ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳಾಗಿವೆ. ಈ ಎರಡೂ ಎಂಟ್ರಿ ಲೆವೆಲ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷರಾದ ವಿಕ್ರಮ್ ಪವಾಹ್ ಅವರು ಮಾತನಾಡಿ, ಆರಂಭದಿಂದಲೂ, ಬಿಎಂಡಬ್ಲ್ಯು ಮೊಟೊರಾಡ್ ತನ್ನ ಡೈನಾಮಿಕ್ ಉತ್ಪನ್ನ ಶ್ರೇಣಿ ಮತ್ತು ಬೆಸ್ಪೋಕ್ ರೈಡಿಂಗ್ ಅನುಭವಗಳೊಂದಿಗೆ ಭಾರತದಲ್ಲಿ ಪ್ರೀಮಿಯಂ ಮೋಟಾರ್‌ಸೈಕ್ಲಿಂಗ್ ಸನ್ನಿವೇಶವನ್ನು ಮರುವ್ಯಾಖ್ಯಾನಿಸಿದೆ. 2021 ಭಾರತದಲ್ಲಿ ಬಿಎಂಡಬ್ಲ್ಯು ಮೊಟೊರಾಡ್‌ಗೆ ಅಸಾಧಾರಣ ವರ್ಷವಾಗಿದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಪ್ರಕ್ಷುಬ್ಧತೆಯ ಹೊರತಾಗಿಯೂ. ದ್ವಿಚಕ್ರ ವಾಹನ ಉದ್ಯಮದಲ್ಲಿ, ನಾವು ಉತ್ತಮ ಸಾಧನೆ ಮಾಡಿದ್ದೇವೆ ಮತ್ತು ಉತ್ತಮ ಬೆಳವಣಿಗೆಯನ್ನು ಸಾಧಿಸಿದ್ದೇವೆ.ನಮ್ಮ ಪ್ರಯತ್ನದಲ್ಲಿ ನಾವು ಬದ್ಧರಾಗಿದ್ದೇವೆ ಹೊಸ ಬಿಡುಗಡೆಗಳು ಮತ್ತು ಕ್ಯುರೇಟೆಡ್ ಅನುಭವಗಳೊಂದಿಗೆ ಸವಾರಿ ಉತ್ಸಾಹಿಗಳನ್ನು ಉತ್ತೇಜನಗೊಳಿಸಲು ಇದು ನಿಜವಾಗಿಯೂ ನಮ್ಮ 'ಜೀವನವನ್ನು ಸವಾರಿ ಮಾಡಿ' ಎಂಬ ಧ್ಯೇಯವಾಕ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಬಿಎಂಡಬ್ಲ್ಯು ಮೋಟೊರಾಡ್ ದ್ವಿಚಕ್ರ ವಾಹನಗಳಲ್ಲಿ ಸುಮಾರು 90 ಪ್ರತಿಶತದಷ್ಟು ತನ್ನ ಎಂಟ್ರಿ ಲೆವೆಲ್ ಆದ ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳಾಗಿವೆ. ಈ ಬೈಕ್‌ಗಳನ್ನು ಟಿವಿಎಸ್ ಸಹಯೋಗದೊಂದಿಗೆ ತಯಾರಿಸಲಾಗಿದೆ ಎಂದು ಬಹಿರಂಗಪಡಿಸಿದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಇದರಲ್ಲಿ ಮೊದಲಿಗೆ ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ, ಕೆಲವು ನವೀಕರಣಗಳನ್ನು ಮಾಡಲಾಗಿದೆ.ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಹೆಡ್‌ಲ್ಯಾಂಪ್, ಟರ್ನ್ ಸಿಗ್ನಲ್‌ಗಳು ಮತ್ತು ಟೈಲ್ ಲ್ಯಾಂಪ್‌ಗಾಗಿ ಎಲ್ಇಡಿ ಲೈಟಿಂಗ್ ಅನ್ನು ನವೀಕರಿಸಲಾಗಿದೆ. ನವೀಕರಣದ ಭಾಗವಾಗಿ, ಜಿ 310 ಆರ್ ಪ್ಯಾಲೆಟ್‌ಗೆ ಬಿಎಂಡಬ್ಲ್ಯು ಹೊಸ ಬಣ್ಣಗಳನ್ನು ಕೂಡ ಸೇರಿಸಿದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಈ ಬಿಎಂಡಬ್ಲ್ಯು ಜಿ 310 ಆರ್, ಜಿ 310 ಜಿಎಸ್ ಬೈಕ್‌ಗಳಲ್ಲಿ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 34 ಬಿಹೆಚ್ಪಿ ಮತ್ತು 7,700 ಆರ್‌ಪಿಎಂನಲ್ಲಿ 28 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ತನ್ನ ಪ್ರತಿಸ್ಪರ್ಧಿಗ ಬೈಕ್‌ಗಳಿಗಿಂತ ಹೆಚ್ಚಿನ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಬೈಕ್‌ಗಳು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಯುವಗ್ರಾಹಕರನ್ನು ಸೆಳೆಯುತ್ತಿದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಈ ಹೊಸ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗ 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಎರಡು ಹೊಸ ಬೈಕ್‌ಗಳು ಕೇವಲ 7.17 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಇನ್ನು ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ಹೊಸ ಹೆಡ್‌ಲೈಟ್ ಪಡೆಯುತ್ತದೆ, ಇನ್ನು ಎಲ್‌ಇಡಿ ಡೇಟೈಮ್ ರನ್ನಿಂಗ್ ಜೊತೆ ಲೈಟ್ ಸ್ಟ್ರಿಪ್ ಅನ್ನು ಸಹ ಹೊಂದಿದೆ. ಈ ಬೈಕಿನಲ್ಲಿ ಜಿಎಸ್' ಅಕ್ಷರಗಳು ಈಗ ದೊಡ್ಡದಾಗಿದೆ ಮತ್ತು ಎಡಿವಿ ಶೈಲಿಯ ಬೀಕ್ ಅಪ್ ಫ್ರಂಟ್ 'ರ್ಯಾಲಿ' ಸ್ಟಿಕ್ಕರ್ ಅನ್ನು ಕೂಡ ಹೊಂದಿದೆ. ದೊಡ್ಡ ಬಿಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಗಳಿಂದ ಹಲವಾರು ಫೀಚರ್ ಗಳನ್ನು ಎರವಲು ಪಡೆಯಲಾಗಿದೆ. ಇದರಲ್ಲಿ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಯ ವಿಂಡ್‌ಸ್ಕ್ರೀನ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಹೊಸ ಬಿಎಂಡಬ್ಲ್ಯು ಜಿ 310 ಆರ್ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 390, ಬಜಾಜ್ ಡೊಮಿನಾರ್ 400 ಮತ್ತು ಟಿವಿಎಸ್ ಅಪಾಚೆ ಆರ್‌ಆರ್‌310 ಬೈಕುಗಳಿಗೆ ಪೈಪೋಟಿ ನೀಡಿದರೆ, ಜಿ 310 ಜಿಎಸ್ ಮಾದರಿಯು ಕೆಟಿಎಂ 390 ಅಡ್ವೆಂಚರ್ ಮತ್ತು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗಳಿಗೆ ಪೈಪೋಟಿ ನೀಡುತ್ತಿದೆ.

ಭಾರತದಲ್ಲಿ ಒಂದೇ ವರ್ಷ 5,000 ಬೈಕ್‌ಗಳನ್ನು ಮಾರಾಟ ಮಾಡಿದ BMW Motorrad

ಬಿಎಂಡಬ್ಲ್ಯು ಮೋಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು, ಇದೀಗ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ವಿತರಣೆಯನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಬೆಲೆಯು ರೂ.9,95,000 ಆಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಭಾರತದಲ್ಲಿ ಬಿಎಂಡಬ್ಲ್ಯು ಮೊಟೊರಾಡ್‌ನ ಮೊದಲ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಪ್ರೀಮಿಯಂ ಮಿಡ್ ಸೈಜ್ ಸ್ಕೂಟರ್ ಸಿಬಿಯು ಯುನಿಟ್ ಆಗಿ ಲಭ್ಯವಿರುತ್ತದೆ.

Most Read Articles

Kannada
English summary
Bmw motorrad achieves all time sales high 5000 units in 2021 find here more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X