ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ಬಿಎಂಡಬ್ಲ್ಯು ಮೋಟರ್‌ರಾಡ್ ಇಂಡಿಯಾ ಕಂಪನಿಯು ತನ್ನ ಹೊಸ ಆರ್18 ಕ್ಲಾಸಿಕ್ ಕ್ರೂಸರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.24 ಲಕ್ಷಗಳಾಗಿದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ಹೊಸ ಆರ್18 ಕ್ಲಾಸಿಕ್ ಕ್ರೂಸರ್ ಈಗ ಬ್ರ್ಯಾಂಡ್‌ನ ಹೆರಿಟೇಜ್ ಸರಣಿಯಲ್ಲಿ ಎರಡನೇ ಮಾದರಿಯಾಗಿದ್ದು, ಕಳೆದ ವರ್ಷ ಭಾರತದಲ್ಲಿ ಪರಿಚಯಿಸಲಾದ ಸ್ಟ್ಯಾಂಡರ್ಡ್ ಆರ್18 ಮಾದರಿಯನ್ನು ಸಹ ಒಳಗೊಂಡಿದೆ. ಹೊಸ ಆರ್ 18 ಕ್ಲಾಸಿಕ್ ಕ್ರೂಸರ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಕ್ರೂಸರ್ ಅನ್ನು ಸಿಬಿಯು (ಕಂಪ್ಲೀಟ್ಲಿ ಬಿಲ್ಟ್ ಯುನಿಟ್) ಮಾರ್ಗದ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು, ಇದರ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭವಾಗುತ್ತವೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಕ್ಲಾಸಿಕ್ ಕ್ರೂಸರ್ ಬೈಕ್ ಹೆಚ್ಚು ಟೂರರ್-ಆಧಾರಿತ ಆವೃತ್ತಿಯಾಗಿದೆ. ಇದು ಸ್ಟ್ಯಾಂಡರ್ಡ್ ಮಾದರಿಯಲ್ಲಿ ಹಲವಾರು ಹೆಚ್ಚುವರಿ ಫೀಚರ್ ಗಳು ಮತ್ತು ಯುನಿಟ್ ಗಳೊಂದಿಗೆ ಬರುತ್ತದೆ. ಇದು ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಹೊಂದಾಣಿಕೆಯ ಸ್ಯಾಡಲ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಕ್ಲಾಸಿಕ್ ಕ್ರೂಸರ್ ಬೈಕಿನ ವಿನ್ಯಾಸವು ಓಲ್ಡ್-ಸ್ಕೂಲ್ ಮಾದರಿಗಳನ್ನು ನೆನಪಿಸುತ್ತದೆ. ಈ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಹೊಸ ಫೀಚರ್ ಗಳು ಮತ್ತು ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ಇದರೊಂದಿಗೆ ಬಿಎಂಡಬ್ಲ್ಯು ಪಾರಂಪರಿಕ ವಿನ್ಯಾಸ ಅಂಶಗಳನ್ನು ಅತ್ಯಾಧುನಿಕ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಸಂಯೋಜಿತ ಡಿಜಿಟಲ್ ಡಿಸ್ ಪ್ಲೇಯನ್ನು ಆಧುನಿಕ ಫೀಚರ್ ಗಳೊಂದಿಗೆ ಸಂಯೋಜಿಸಿದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ವಿನ್ಯಾಸದ ಅಂಶಗಳ ಹೊರತಾಗಿ, ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಮತ್ತು ಸುರಕ್ಷತಾ ಫೀಚರ್ ಗಳನ್ನು ಒಳಗೊಂಡಿದೆ. ಇದರಲ್ಲಿ ರೈನ್, ರೋಲ್ ಮತ್ತು ರಾಕ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ಇನ್ನು ಸುರಕ್ಷತೆಗಾಗಿ ಟ್ರ್ಯಾಕ್ಷನ್ ಕಂಟ್ರೋಲ್, ಡೈನಾಮಿಕ್ ಎಂಜಿನ್ ಬ್ರೇಕ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಹಿಲ್-ಸ್ಟಾರ್ಟ್ ಕಂಟ್ರೋಲ್ ಮತ್ತು ಲೆಕ್ಟ್ರಾನಿಕ್ ಕ್ರೂಸರ್ ಕಂಟ್ರೋಲ್ ನಂತಹ ಫೀಚರ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕಿನಲ್ಲಿ ಅದೇ 1,802 ಸಿಸಿ ಎರಡು ಸಿಲಿಂಡರ್ ಏರ್/ಆಯಿಲ್-ಕೂಲ್ಡ್ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 4750 ಆರ್‌ಪಿಎಂನಲ್ಲಿ 91 ಬಿಹೆಚ್‌ಪಿ ಮತ್ತು 3000 ಆರ್‌ಪಿಎಂನಲ್ಲಿ 158 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬೈಕ್ ಬಿಡುಗಡೆ

ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಕ್ರೂಸರ್ ಬ್ರ್ಯಾಂಡ್‌ನ ಹೆರಿಟೇಜ್ ಸರಣಿಯಲ್ಲಿ ಹೊಸ ಪ್ರಮುಖ ಮಾದರಿಯಾಗಿದೆ. ಇನ್ನು ಈ ಹೊಸ ಬಿಎಂಡಬ್ಲ್ಯು ಆರ್18 ಕ್ಲಾಸಿಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಮತ್ತು ಹಾರ್ಲೆ-ಡೇವಿಡ್ಸನ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
BMW R18 Classic Cruiser Launched. Read In Kannada.
Story first published: Tuesday, February 23, 2021, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X