ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ನಮ್ಮ ಬೆಂಗಳೂರು ಮೂಲದ ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ಸ್ ಕಂಪನಿಯಾಗಿರುವ ಬೌನ್ಸ್ ತನ್ನ ಬಹುನೀರಿಕ್ಷಿತ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಂಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಯಶಸ್ವಿಯಾಗುತ್ತಿವೆ. ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ಸ್ ಕಂಪನಿಯಾಗಿರುವ ಬೌನ್ಸ್ ಕೂಡಾ ಇದೀಗ ಹೊಸ ಇವಿ ಸ್ಕೂಟರ್ ನಿರ್ಮಾಣ ಮಾಡಿ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಆಕರ್ಷಕ ಬೆಲೆ ಹೊಂದಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಬೌನ್ಸ್ ಕಂಪನಿಯು ಪರಿಚಯಿಸಿರುವ ಹೊಸ ಇನ್ಪಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 45,099(ಬ್ಯಾಟರಿ ಮತ್ತು ಚಾರ್ಜರ್ ರಹಿತ) ಬೆಲೆ ಹೊಂದಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಹೊಸ ಇನ್ಪಿನಿಟಿ ಇ1 ಸ್ಕೂಟರ್ ಮಾದರಿಯನ್ನು ಎರಡು ಮಾದರಿಯಲ್ಲಿ ಮಾರಾಟ ಮಾಡುತ್ತಿರುವ ಬೌನ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್ ಅನ್ನು ಬ್ಯಾಟರಿ ರಹಿತ ಮತ್ತು ಬ್ಯಾಟರಿ ಸಹಿತ ಮಾರಾಟ ಮಾಡುತ್ತಿದ್ದು, ಬ್ಯಾಟರಿ ರಹಿತ ಇವಿ ಸ್ಕೂಟರ್ ಮಾದರಿಯು ರೂ. 45,009 ಬೆಲೆ ಹೊಂದಿದ್ದರೆ ಬ್ಯಾಟರಿ ಜೋಡಣೆ ಹೊಂದಿರುವ ಇವಿ ಸ್ಕೂಟರ್ ಮಾದರಿಯು ರೂ. 68,999 ಬೆಲೆ ಹೊಂದಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಇನ್ಪಿನಿಟಿ ಇ1 ಸ್ಕೂಟರ್ ಖರೀದಿಸಿ ಬೇರೆ ಕಂಪನಿಯ ಬ್ಯಾಟರಿ ಅಳವಡಿಕೆಗೂ ಬೌನ್ಸ್ ಕಂಪನಿಯು ಅವಕಾಶ ನೀಡಿದ್ದು, ಆಸಕ್ತ ಗ್ರಾಹಕರು ಕೇವಲ ಇನ್ಪಿನಿಟಿ ಸ್ಕೂಟರ್ ಖರೀದಿಸಿ ಅಸೆಂಬಲ್ ಬ್ಯಾಟರಿ ಸೌಲಭ್ಯವನ್ನು ಸಹ ಜೋಡಿಸಿಕೊಳ್ಳಬಹುದಾಗಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಬೌನ್ಸ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ 2kWh ಲೀಥಿಯಂ ಅಯಾನ್ ಬ್ಯಾಟರಿ ಅಳಡಿಸಿದ್ದು, ಅತ್ಯುತ್ತಮ ರೈಡಿಂಗ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಹೊಸ ಇವಿ ಸ್ಕೂಟರ್‌ನಲ್ಲಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಮೂಲಕ ಕೇವಲ 8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರತಿ ಗಂಟೆಗೆ ಗರಿಷ್ಠ 65 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಡ್ರ್ಯಾಗ್ ಮತ್ತು ರಿವರ್ಸ್ ರೈಡ್ ಮೋಡ್ ನೀಡಲಾಗಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಜೊತೆಗೆ ಬೌನ್ಸ್ ಕಂಪನಿಯು ಹೊಸ ಸ್ಕೂಟರ್ ಮೇಲೆ ಸ್ಟ್ಯಾಂಡರ್ಡ್ ಆಗಿ 3 ವರ್ಷ ಅಥವಾ 50 ಸಾವಿರ ಕಿ.ಮೀ ತನಕ ವಾರಂಟಿ ಘೋಷಣೆ ಮಾಡಿದ್ದು, ಶೋರೂಂಗಳ ಬದಲಾಗಿ ಕಂಪನಿಯು ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಸ್ಕೂಟರ್ ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸಲಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಇನ್ನು ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, ರೌಂಡ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ರೆಟ್ರೊ-ಶೈಲಿಯ ಫ್ರಂಟ್ ಫೆಂಡರ್, ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸಿಂಗಲ್ ಪೀಸ್ ಸೀಟ್, 12 ಇಂಚಿನ ಸ್ಪೋರ್ಟಿ ಅಲಾಯ್ ವ್ಹೀಲ್ಸ್, ಪ್ರಮುಖ ಗ್ರ್ಯಾಬ್ ರೈಲ್ ಮತ್ತು ಹರಿತವಾದ ಟೈಲ್ ಲ್ಯಾಂಪ್‌ನಂತಹ ವೈಶಿಷ್ಟ್ಯತೆಗಳೊಂದಿಗೆ ಏರೋಡೈನಾಮಿಕ್ ಪ್ರೊಫೈಲ್ ಹೊಂದಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಹಾಗೆಯೇ ಹೊಸ ಇವಿ ಸ್ಕೂಟರ್‌ನಲ್ಲಿ 12 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೊರೇಜ್, ಹೈ ಎಂಡ್ ಸ್ಕೂಟರ್‌ಗಳಲ್ಲಿ ಕಂಡುಬರುವ ಕ್ಯಾನ್ಬಸ್ ಜೊತೆ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಷೆಂಷನ್ ಹಾಗೂ ಹಿಂಬದಿಯಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಹೊಂದಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಬೌನ್ಸ್ ಸ್ಕೂಟರ್‌ನಲ್ಲಿ ಸುರಕ್ಷತೆಗಾಗಿ ಓವರ್/ಅಂಡರ್ ವೊಲ್ಟೇಜ್ ಪ್ರೊಟೆಕ್ಷನ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಬ್ಯಾಟರಿ ಮತ್ತು ಮೋಟಾರ್ ಕಂಟ್ರೋಲರ್, ವಿಸಿಯು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಸ್ಕೂಟರ್ ಚಾಲನೆಯನ್ನು ಸರಳಗೊಳಿಸುವ ಕನೆಕ್ಟೆಡ್ ಫೀಚರ್ಸ್, ಆಂಟಿ ಥೆಪ್ಟ್ ಅಲಾರಾಂ ಸೌಲಭ್ಯ ಹೊಂದಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಇದರೊಂದಿಗೆ ಹೊಸ ಸ್ಕೂಟರ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಸ್ಪೋರ್ಟಿ ರೆಡ್, ಸ್ಪಾರ್ಕಲ್ ಬ್ಲ್ಯಾಕ್, ಪರ್ಲ್ ವೈಟ್, ಡಿಸ್ಯಾಟ್ ಸಿಲ್ವರ್ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಮಾದರಿಯು 2022ರ ಮಾರ್ಚ್ ವೇಳೆಗೆ ಗ್ರಾಹಕರ ಕೈಸೇರಲಿವೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಸದ್ಯ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ರೂ. 499 ಮುಂಗಡ ಪಾವತಿಯೊಂದಿಗೆ ಬುಕ್ಕಿಂಗ್ ಆರಂಭಿಸಿದ್ದು, ಹೊಸ ಸ್ಕೂಟರ್ ಮಾದರಿಯು ಹೆಚ್ಚುವರಿ ಸಬ್ಸಡಿ ಹೊಂದಿರುವ ದೆಹಲಿ, ಗುಜರಾತ್, ಕರ್ನಾಟಕ, ದೆಹಲಿ, ಮಾಹಾರಾಷ್ಟ್ರ ಮತ್ತು ರಾಜಸ್ತಾನ ರಾಜ್ಯಗಳನ್ನು ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ಹೊಸ ಸ್ಕೂಟರ್ ಬೆಲೆಯು ರೂ. 79,999 ದರ ಹೊಂದಿರಲಿದೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಬ್ಯಾಟರಿ ವಿನಿಯಮಕ್ಕಾಗಿ ಪಾರ್ಕ್ ಪ್ಲಸ್ ಜೊತೆ ಪಾಲುದಾರಿಕೆ

ಹೌದು, ಬೌನ್ಸ್ ಕಂಪನಿಯು ದೇಶದ 10ಕ್ಕೂ ಹೆಚ್ಚು ಪ್ರಮುಖ ನಗರಗಳ 3,500 ಪ್ರದೇಶಗಳಲ್ಲಿ ಬ್ಯಾಟರಿ ವಿನಿಮಯ ಹಾಗೂ ಚಾರ್ಜಿಂಗ್ ಸೌಲಭ್ಯ ಒದಗಿಸಲು ಪಾರ್ಕ್ ಪ್ಲಸ್ ಕಂಪನಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಬ್ಯಾಟರಿ ವಿನಿಮಯ ಕೇಂದ್ರಗಳು ಶಾಪಿಂಗ್ ಕಾಂಪ್ಲೆಕ್ಸ್‌, ಮಾಲ್‌, ಕಾರ್ಪೊರೇಟ್ ಕಚೇರಿ, ಮೆಟ್ರೋ ನಿಲ್ದಾಣಗಳು, ಪಾರ್ಕಿಂಗ್ ವಲಯ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಲಭ್ಯವಿರಲಿವೆ.

ಆಕರ್ಷಕ ಬೆಲೆಯ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ

ಇದೇ ಕಾರಣಕ್ಕಾಗಿ ಬೌನ್ಸ್ ಕಂಪನಿಯು ತನ್ನ ಗ್ರಾಹಕರಿಗೆ ಬ್ಯಾಟರಿ ಇಲ್ಲದೆ ಸ್ಕೂಟರ್ ಅನ್ನು ಖರೀದಿಸುವ ಅವಕಾಶ ನೀಡಿದ್ದು, ಬ್ಯಾಟರಿ ಸೌಲಭ್ಯಕ್ಕಾಗಿ ಗ್ರಾಹಕರು ಪ್ರತ್ಯೇಕವಾಗಿ ವಿನಿಯಮ ಕೇಂದ್ರಗಳೊಂದಿಗೆ ಚಂದಾದಾರಿಕೆ ಪಡೆದುಕೊಂಡು ಬ್ಯಾಟರಿ ವಿನಿಯಮ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ಆ್ಯಪ್ ಅಭಿವೃದ್ದಿಪಡಿಸಿರುವ ಬೌನ್ಸ್ ಕಂಪನಿಯು ಬ್ಯಾಟರಿ ವಿನಿಯಮ ಮತ್ತು ಸೇವೆಗಳನ್ನು ಸರಳಗೊಳಿಸಿದ್ದು, ಹೊಸ ಆಯ್ಕೆಯು ಇವಿ ಸ್ಕೂಟರ್‌ ಬೆಲೆಯನ್ನು ಸುಮಾರು ಶೇ.40 ನಷ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ.

Most Read Articles

Kannada
English summary
Bounce infinity e1 electric scooter launched at rs 68 999 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X