ಭಾರತದಲ್ಲಿ ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು ಬಿಡುಗಡೆ

ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ ಬಿಎಸ್-6 ಆವೃತ್ತಿಯ 650ಎನ್‌ಕೆ, 650ಜಿಟಿ ಮತ್ತು 650ಎಂಟಿ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕ್‌ಗಳ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ.

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಈ ಹೊಸ ಸಿಎಫ್‌ಮೋಟೋ 650ಎನ್‌ಕೆ, 650ಜಿಟಿ ಮತ್ತು 650ಎಂಟಿ ಬೈಕ್‌ಗಳಲ್ಲಿ ಯಾವುದಾದರೂ ಮಾದರಿಗಳನ್ನು ಖರೀದಿಸಲು ಬಯಸುವವರು ಆನ್‌ಲೈನ್‌ನಲ್ಲಿ ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಬೈಕ್‌ಗಳ ಬೆಲೆಯ ಬಗ್ಗೆ ಹೇಳುವುದಾದರೆ, ಸಿಎಫ್‌ಮೋಟೋ 650ಎನ್‌ಕೆ ಬೈಕಿನ ಬೆಲೆಯು ರೂ.4.29 ಲಕ್ಷ, ಸಿಎಫ್‌ಮೋಟೋ 650ಎಂಟಿ ಬೈಕಿಗೆ ರೂ.5.29 ಲಕ್ಷಗಳಾದರೆ, ಸಿಎಫ್‌ಮೋಟೋ 650ಜಿಟಿ ಬೈಕಿಗೆ ರೂ,5.59 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಇನ್ನು ಈ ಬೈಕ್‌ಗಳ ಬಣ್ಣಗಳ ಬಗ್ಗೆ ಹೇಳುವುದಾದರೆ, ಸಿಎಫ್‌ಮೋಟೋ 650ಎನ್‌ಕೆ,ಪರ್ಲ್ ವೈಟ್ ಮತ್ತು ಅಥೆನ್ಸ್ ಬ್ಲೂ ಬಣ್ಣಗಳಾದರೆ, ಸಿಎಫ್‌ಮೋಟೋ 650ಎಂಟಿ ಬೈಕ್ ರಾಯಲ್ ಬ್ಲೂ ಮತ್ತು ಪರ್ಲ್ ವೈಟ್ ಬಣ್ಣಗಳನ್ನು ಹೊಂದಿದೆ. ಇನ್ನು ಸಿಎಫ್‌ಮೋಟೋ 650ಜಿಟಿ ಬೈಕ್ ಕಾನ್ಸೆಪ್ಟ್ ಬ್ಲ್ಯಾಕ್ ಮತ್ತು ನಿಬೂಲ್ಲ ಬ್ಲೂ ಬಣ್ಣವನ್ನು ಹೊಂದಿದೆ.

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಈ ಸಿಎಫ್‌ಮೋಟೋ ಬೈಕ್‌ಗಳು ಅದೇ ಎಂಜಿನ್‌ ಅನ್ನು ಹೊಂದಿದೆ. ಆದರೆ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರ ಬಿಎಸ್-4 ಆವೃತ್ತಿಗೆ ಎಂಜಿನ್‌ಗೆ ಹೋಲಿಸಿದರೆ ಇದು ಪವರ್ ಅಂಕಿಗಳಲ್ಲಿ ಸುಮಾರು 10 ಬಿಹೆಚ್‌ಪಿ ಕಡಿಮೆಯಾಗಿದೆ.

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಅಲ್ಲದೇ ಬಿಎಸ್4 ಬೈಕ್‌ಗಳು ವಿಭಿನ್ನ ಸ್ವರೂಪದಿಂದಾಗಿ ವಿಭಿನ್ನ ಎಂಜಿನ್ ಟ್ಯೂನಿಂಗ್ ಹೊಂದಿದ್ದವು. ಆದರೆ ಬಿಎಸ್-6 ಬೈಕ್‌ಗಳ ಎಂಜಿನ್ ಗಳನ್ನು ಟ್ಯೂನ್ ಮಾಡಿರುವುದರಿಂದ ಎನ್‌ಕೆ ಮಾದರಿಗಂತ ಜಿಟಿ ಮತ್ತು ಎಂಟಿ ಮಾದರಿಗಳು ಪವರ್ ಕಡಿಮೆಯಾಗಿದೆ,

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಈ ಸಿಎಫ್‌ಮೋಟೋ ಬೈಕ್‌ಗಳಲ್ಲಿ ಅದೇ 650ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಗಳನ್ನು ಹೊಂದಿವೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ,

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಸಿಎಫ್‌ಮೋಟೋ 650ಎಂಟಿ ಬೈಕಿನ ಎಂಜಿನ್ 13.4 ಬಿಹೆಚ್‍ಪಿ ಪವರ್ ಮತ್ತು 8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 650ಜಿಟಿ ಬೈಕಿನ ಎಂಜಿನ್ 5.4 ಬಿಹೆಚ್‌ಪಿ ಪವರ್ ಮತ್ತು 4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೂರನೇ ಮಾದರಿ 650ಎನ್‌ಕೆ ಎಂಜಿನ್ 3.4 ಬಿಹೆಚ್‍ಪಿ ಪವರ್ ಮತ್ತು 2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಈ ಸಿಎಫ್‌ಮೋಟೋ ಬೈಕ್‌ಗಳು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇನ್ನು ಎಂಜಿನ್ ಅನ್ನು ಮಾತ್ರ ನವೀಕರಿಸಿರುವುದನ್ನು ಹೊರತುಪಡಿಸಿ ಉಳಿದಂತೆ ಈ ಬೈಕ್‌ಗಳ ವಿನ್ಯಾಸ ಮತ್ತು ಫೀಚರ್ಸ್ ಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಸಿಎಫ್‌ಮೋಟೋ ಬೈಕ್‌ಗಳ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಸ್ಪ್ಲಿಟ್ ಸೀಟುಗಳು, ಡಿಆರ್‌ಎಲ್‌ಗಳೊಂದಿಗಿನ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಸ್ಲೀಕ್ ಆಗಿ ಕಾಣುವ ಎಕ್ಸಾಸ್ಟ್, ನಂಬರ್ ಪ್ಲೇಟ್ ಹೊಂದಿರುವವರೊಂದಿಗೆ ಟೈಲ್ ವಿಭಾಗವನ್ನು ಹೊಂದಿರುತ್ತದೆ.

ಹೊಸ ಎಫ್‌ಮೋಟೋ 650ಎನ್‌ಕೆ, 650ಜಿಟಿ, 650ಎಂಟಿ ಬೈಕ್‌ಗಳು

ಇನ್ನು ಈ ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕೆವೈಬಿಯ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿರುತ್ತದೆ. ಇನ್ನು ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗುತ್ತದೆ.

Most Read Articles

Kannada
English summary
CFMoto 650NK, 650GT, 650MT BS6 Launched. Read In Kannada.
Story first published: Friday, July 2, 2021, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X