Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- News
ಅಭಿವೃದ್ಧಿ ಯೋಜನೆಗಳು; ಪರಿಸರವಾದಿಗಳ ವಿರುದ್ಧ ಜನಾಕ್ರೋಶ
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೆಕ್ಸಿಕೋ ಮಾರುಕಟ್ಟೆಗೆ ಕಾಲಿಡಲಿದೆ ಹೀರೋ ಮೋಟೊಕಾರ್ಪ್
ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಮೆಕ್ಸಿಕೋ ಮಾರುಕಟ್ಟೆಗೆ ಕಾಲಿಡಲು ಗ್ರೂಪೋ ಸಲಿನಾಸ್ ಜೊತೆ ಪಾಲುಗಾರಿಕೆಯನ್ನು ಮಾಡಿಕೊಂಡಿದೆ. ಶೀಘ್ರದಲ್ಲೇ ಮೆಕ್ಸಿಕೋ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

ಹೀರೋ ಮೊಟೊಕಾರ್ಪ್ ತನ್ನ ಮಾದರಿಗಳನ್ನು ಮಧ್ಯ ಅಮೆರಿಕದ ದೇಶದಲ್ಲಿ ಮಾರಾಟ ಮಾಡಲು ಗ್ರೂಪೋ ಸಲಿನಾಸ್ ಜೊತೆ ಪಾಲುಗಾರಿಕೆ ಮಾಡಿ ವಿಶ್ವದ ಅತಿದೊಡ್ಡ ವಿತರಣಾ ಜಾಲಗಳಲ್ಲಿ ಒಂದಾಗಲಿದೆ. "ಹೀರೋನ ಜಾಗತಿಕ ಪರಿಣತಿ ಮತ್ತು ನೂತನ ತಂತ್ರಜ್ಞಾನದ ಜೊತೆ ಗ್ರೂಪೋ ಸಲಿನಾಸ್‌ನ ಸ್ಥಳೀಯ ಮಾರುಕಟ್ಟೆ ಜ್ಞಾನದಿಂದ, ಮುಂದಿನ ಮೂರು ವರ್ಷಗಳಲ್ಲಿ ಹೀರೋ ಬ್ರ್ಯಾಂಡ್ ಅನ್ನು ವಿಸ್ತರಿಸುವ ಗುರಿ ಹೊಂದಿದ್ದೇವೆ" ಎಂದು ಹೀರೋ ಮೊಟೊಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ ಪವನ್ ಮುಂಜಾಲ್ ಹೇಳಿದ್ದಾರೆ.

ತಮ್ಮ ಮಾತನ್ನು ಮುಂದುವರೆಸಿ, ಮೆಕ್ಸಿಕೋ ಮಾರುಕಟ್ಟೆಯಲ್ಲಿ ಎಲ್ಲಾ ವಿಭಾಗಗಳ ಮಾದರಿಗಳನ್ನು ಬಿಡುಗಡೆಗೊಳಿಸುತ್ತೇವೆ. ಇದರಿಂದಾಗಿ ಮೆಕ್ಸಿಕೋದಲ್ಲಿನ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಿರುತ್ತದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ವರದಿಗಳ ಪ್ರಕಾರ, ಮೊದಲ ಹಂತದ ಕಾರ್ಯಾಚರಣೆಯಲ್ಲಿ, ಹೀರೋ ಮೊಟೊಕಾರ್ಪ್ ಬೈಕುಗಳನ್ನು ಒಳಗೊಂಡಂತೆ ಒಂಬತ್ತು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಇದು ಹೀರೋ ಮೊಟೊಕಾರ್ಪ್ 100ಸಿಸಿ ಯಿಂದ 160ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಮಾದರಿಗಳಾಗಿರುತ್ತದೆ.

ಮೊದಲ ಹಂತದಲ್ಲಿ ಸ್ಕೂಟರ್ ಮತ್ತು ಡ್ಯುಯಲ್ ಪರ್ಪಸ್ ಬೈಕ್‌ಗಳನ್ನು ಸಹ ಬಿಡುಗಡೆಗೊಳಿಸಲು ಯೋಜಿಸಿದೆ. ಇತ್ತೀಚಿನ ಬೆಳವಣಿಗೆ ಕಂಪನಿಯ ಜಾಗತಿಕ ವಿಸ್ತರಣಾ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ಹೇಳಬಹುದು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಮಾದರಿಗಳನ್ನು ಭಾರತ ಮತ್ತು ಜರ್ಮನಿಯ ಹೀರೋನ ಅತ್ಯಾಧುನಿಕ ಆರ್&ಡಿ ಹಬ್‌ಗಳಲ್ಲಿ ವಿನ್ಯಾಸಗೊಳಿಸಲಾಗುತ್ತದೆ ಮತ್ತು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಹೀರೋ ಮೊಟೊಕಾರ್ಪ್ ಈಗ ಏಷ್ಯಾ, ಆಫ್ರಿಕಾ, ದಕ್ಷಿಣ ಮತ್ತು ಮಧ್ಯ ಅಮೆರಿಕ ಮತ್ತು ಮಧ್ಯಪ್ರಾಚ್ಯದಾದ್ಯಂತ ತನ್ನ ಅಸ್ತಿತ್ವವನ್ನು ಹೊಂದಿದೆ. ಪಸ್ತುತ, ಕಂಪನಿಯು ಎಂಟು ವಿಶ್ವ ದರ್ಜೆಯ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ, ಇದರಲ್ಲಿ ಭಾರತದಲ್ಲಿ ಆರು ಮತ್ತು ಬಾಂಗ್ಲಾದೇಶ ಮತ್ತು ಕೊಲಂಬಿಯಾದಲ್ಲಿ ತಲಾ ಒಂದು ಆಗಿದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಇನ್ನು ಇತ್ತೀಚೆಗೆ ಹೀರೋ ಮೋಟೊಕಾರ್ಪ್ ಕಂಪನಿಯು ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ ತನ್ನ ಪ್ರಬಲ್ಯವನ್ನು ಮುಂದುರಿಸಿದೆ. ಅದೇ ರೀತಿ ಹೀರೋ ಮೋಟೊಕಾರ್ಪ್ ಜಾಗತಿಕವಾಗಿ ವಿಸ್ತರಿಸಲು ಪ್ರಯತ್ನಸುತ್ತಿದೆ. ಹೀರೋ ತನ್ನ ಸರಣಿಯಲ್ಲಿ ಜನಪ್ರಿಯ ಸ್ಕೂಟರ್ ಗಳು ಮತ್ತು ಬೈಕುಗಳನ್ನು ಒಳಗೊಂಡಿದೆ.