ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಇಂಡಿಯನ್ ಬೈಕ್ ವೀಕ್ ಪ್ರಸಕ್ತ ವರ್ಷದ ಆವೃತ್ತಿಯು ಪುಣೆ ಬಳಿಯಿರುವ ಆ್ಯಂಬಿ ವ್ಯಾಲಿಯಲ್ಲಿ ಆರಂಭಗೊಂಡಿದ್ದು, 2021ರ ಐಬಿಡಬ್ಲ್ಯು ಆವೃತ್ತಿಯ ಹಲವಾರು ಹೊಸ ಬೈಕ್ ಮಾದರಿಗಳು ಅನಾವರಣಗೊಂಡಿವೆ. ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪ್ರಮುಖ ಬೈಕ್ ಮಾದರಿಗಳನ್ನು ಅನಾವರಣಗೊಳಿಸಿದ್ದು, ಹೈನೆಸ್ ಸಿಬಿ350 ಮಾದರಿಯ ಆ್ಯನಿವರ್ಸರಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದ್ದ ಹೈನೆಸ್ ಸಿಬಿ350 ಮಾದರಿಯು ಯಶಸ್ವಿ ಒಂದು ವರ್ಷ ಪೂರೈಸಿದ್ದು, ಕಂಪನಿಯು ಇದೀಗ ಮೊದಲ ಸಂಭ್ರಮಕ್ಕಾಗಿ ಹೆಚ್ಚುವರಿ ಫೀಚರ್ಸ್ ಹೊಂದಿರುವ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2.03 ಲಕ್ಷ ಬೆಲೆ ಹೊಂದಿದ್ದು, ಬೈಕ್ ಬಿಡುಗಡೆಯೊಂದಿಗೆ ಇಂದಿನಿಂದ ಅಧಿಕೃತ ಬುಕ್ಕಿಂಗ್ ಆರಂಭಿಸಿದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಹೈನೆಸ್ ಸಿಬಿ350 ಆ್ಯನಿವರ್ಸರಿ ಮಾದರಿಯು ಪರ್ಲ್ ಇಗ್ನಿಯಸ್ ಬ್ಲಾಕ್ ಮತ್ತು ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಹೊಸ ಬಣ್ಣ ಮತ್ತು ಆ್ಯನಿವರ್ಸರಿ ಬ್ಯಾಡ್ಜ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಸ್ಟ್ಯಾಂಡರ್ಡ್ ಹೈನೆಸ್ ಸಿಬಿ350 ಮಾದರಿಗಿಂತಲೂ ಆ್ಯನಿವರ್ಸರಿ ಎಡಿಷನ್ ಬೆಲೆ ರೂ. 4 ಸಾವಿರದಷ್ಟು ಹೆಚ್ಚಳವಾಗಿದ್ದು, ವಿವಿಧ ಬಣ್ಣದ ಆಯ್ಕೆಗಳೊಂದಿಗೆ ಸಿಂಕ್ರೊನೈಸ್ ಮಾಡಲಾದ ಕ್ರೋಮ್ ಹ್ಯಾಂಡಲ್ ಹೊಸ ಬೈಕ್ ಆಕರ್ಷಣೆಗೆ ಕಾರಣವಾಗಿದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಹೊಸ ಬೈಕ್ ಮಾದರಿಯನ್ನು ಹೋಂಡಾ ಕಂಪನಿಯು ತನ್ನ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಯಾದ ಬಿಗ್‌ವಿಂಗ್ ಮೂಲಕ ಮಾರಾಟ ಮಾಡುತ್ತಿದ್ದು, ಸ್ಟ್ಯಾಂಡರ್ಡ್ ಹೈನೆಸ್ ಸಿಬಿ350 ಮಾದರಿಯು ಈ ಹಿಂದಿನಂತೆ ಡಿಎಲ್ಎಕ್ಸ್ ಮತ್ತು ಡಿಎಲ್ಎಕ್ಸ್ ಪ್ರೊ ಮಾದರಿಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.94 ಲಕ್ಷ ಮತ್ತು ರೂ. 1.99 ಲಕ್ಷ ಬೆಲೆ ಹೊಂದಿದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಹೈನೆಸ್ ಸಿಬಿ350 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯ ನಂತರ ಇದುವರೆಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಕ್ಲಾಸಿಕ್ 350 ಮತ್ತು ಬೆನೆಲ್ಲಿ ನಿರ್ಮಾಣದ ಇಂಪಿರಿಯಲ್ 400 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಿದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಇದೀಗ ಆ್ಯನಿವರ್ಸರಿ ಎಡಿಷನ್ ಮಾದರಿಯು ಮತ್ತಷ್ಟು ಬೇಡಿಕೆ ತಂದುಕೊಡಲಿದ್ದು, ಆ್ಯನಿವರ್ಸರಿ ಮಾದರಿಯು ಮುಂದಿನ ಕೆಲ ತಿಂಗಳ ತನಕ ಮಾತ್ರವೇ ಖರೀದಿಗೆ ಲಭ್ಯವಿದೆ. ನಿಗದಿತ ಸಂಖ್ಯೆಯ ಬೈಕ್ ಮಾರಾಟದ ನಂತರ ಸ್ಥಗಿತಗೊಳ್ಳಲಿದ್ದು, ಸ್ಟ್ಯಾಂಡರ್ಡ್ ಮಾದರಿಗಳ ಮಾರಾಟದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಹೊಸ ಬೈಕ್ ಮಾದರಿಯು ಆಕರ್ಷಕ ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹೈನೆಸ್ ಸಿಬಿ 350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ ಸಿಬಿ ಬೈಕ್ ಸರಣಿಯನ್ನು ನೆನಪಿಸುತ್ತದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್ ಕ್ರೋಮ್ ಫ್ರಂಟ್ ಫೆಂಡರ್‌ ಹಾಗೂ ಫೋರ್ಕ್‌ಗಳನ್ನು ಪಡೆದುಕೊಂಡಿದ್ದು, 15-ಲೀಟರಿನ ಫ್ಯೂಯಲ್ ಟ್ಯಾಂಕ್ ಜೋಡಣೆಯೊಂದಿಗೆ ಹೊಂಡಾ ಬ್ಯಾಡ್ಜಿಂಗ್ ಅಳವಡಿಸಲಾಗಿದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಎಂಜಿನ್ ಕವರ್, ಎಕ್ಸಾಸ್ಟ್ ಸೇರಿದಂತೆ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದ್ದು, ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ. ಬೈಕ್ ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಹೊಸ ಬೈಕ್ ಮಾದರಿಯು 350ಸಿಸಿ ಸೆಗ್ಮೆಂಟಿನಲ್ಲಿ ಮೊದಲ ಬಾರಿಗೆ ರಿಂಗ್-ಟೈಪ್ ವಿಂಕರ್ ಗಳನ್ನು ನೀಡಲಾಗಿದ್ದು, ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಬೇಸ್ ಮಾದರಿಯನ್ನು ಪ್ರೆಷಿಯಸ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಹಾಗೂ ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಎಂಬ ಮೂರು ಸಿಂಗಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಟಾಪ್-ಎಂಡ್ ಡಿಎಲ್ಎಕ್ಸ್ ಪ್ರೊ ಮಾದರಿಯನ್ನು ಮ್ಯಾಟ್ ಗ್ರೇ ಮೆಟಾಲಿಕ್, ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್, ವರ್ಚುವಸ್ ವೈಟ್ ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಹಾಗೂ ಸ್ಪಿಯರ್ ಸಿಲ್ವರ್ ಮೆಟಾಲಿಕ್ ಪರ್ಲ್ ನೈಟ್ ಸ್ಟಾರ್ ಮೆಟಾಲಿಕ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಇಂಡಿಯನ್ ಬೈಕ್ ವೀಕ್ 2021: ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ಬಿಡುಗಡೆ

ಈ ಬೈಕ್ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.8-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Honda h ness cb350 anniversary edition launched in india priced at 2 03 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X