ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಹೋಂಡಾ ಕಂಪನಿಯು ಹೊಸ 'ಎನ್‌ಎಕ್ಸ್200' ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದೆ. ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಗಾಗಿ ಹೊಸ ಅಡ್ವೆಂಚರ್ ಬೈಕನ್ನು ಅಭಿವೃದ್ದಿ ಪಡಿಸುತ್ತಿದೆ. ಇದು ಹೋಂಡಾ ಹಾರ್ನೆಟ್ 2.0 ಆಧಾರಿತ ಅಡ್ವೆಂಚರ್ ಮಾದರಿಯಾಗಿರಬಹುದು.

ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಎನ್‌ಎಕ್ಸ್200 ಎಂಬ ಹೆಸರಿನ ಟ್ರೇಡ್‌ಮಾರ್ಕ್ ಸಲ್ಲಿಸಿರುವುದರಿಂದ ಇದು ಅಡ್ವೆಂಚರ್ ಬೈಕ್ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಇದು ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹೋಂಡಾ ಸಿಬಿ 190ಎಕ್ಸ್ ಅಡ್ವೆಂಚರ್ ಬೈಕಿನ ವಿನ್ಯಾಸ ಸ್ಫೂರ್ತಿ ಪಡೆಯಬಹುದು. ಇನ್ನು ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ಗ್ರಾಹಕರನ್ನು ಪ್ರೀಮಿಯಂ ಬೈಕ್‌ಗಳ ಕಡೆ ಗ್ರಾಹಕರನ್ನು ಸೆಳೆಯುವಂತೆ ಮಾಡುತ್ತಿದೆ.

ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಇನ್ನು ಹೋಂಡಾ ಕಂಪನಿಯು ಪ್ರೀಮಿಯಂ ಬೈಕ್‌ಗಳನ್ನು ಬಿಗ್ ವ್ಹೀಂಗ್ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಹೀರೋ ಎಕ್ಸ್‌ಪಲ್ಸ್ 200 ಬೈಕಿಗೆ ಪೈಪೋಟಿ ನೀಡಲು ಹೋಂಡಾ ಕಂಪನಿಯು ಹೊಸ 200 ಸಿಸಿ ಅಡ್ವೆಂಚರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಹಾರ್ನೆಟ್ 2.0 ಬೈಕ್ ಆಧಾರಿತ 200 ಸಿಸಿ ಅಡ್ವೆಂಚರ್-ಟೂರಿಂಗ್ ಬೈಕ್ ಉತ್ತಮ ಆಫ್-ರೋಡಿಂಗ್ ಸಾಮರ್ಥ್ಯವನ್ನು ಹೊಂದಿರಬಹುದು. ನ್ನು ಚೀನಾದಲ್ಲಿ ಮಾರಾಟವಾಗುತ್ತಿರುವ ಹೋಂಡಾ ಸಿಬಿ 190 ಎಕ್ಸ್ ಬೈಕಿನ ಹಲವು ಅಂಶಗಳು ಈ ಹೊಸ 200 ಸಿಸಿ ಅಡ್ವೆಂಚರ್ ಹಂಚಿಕೊಳ್ಳಬಹುದು.

ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಹೋಂಡಾ ಸಿಬಿ -190 ಎಕ್ಸ್ ಬೈಕ್ ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸಿಬಿ 190ಆರ್ ಮಾದರಿಯನ್ನು ಆಧರಿಸಿದೆ. ಇನ್ನು ಈ ಹೋಂಡಾ ಸಿಬಿ 190ಆರ್ ಬೈಕಿನಲ್ಲಿ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 15.8 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಇನ್ನು ಭಾರತದಲ್ಲಿ ಮಾರಾಟವಾಗುವ ಹೋಂಡಾ ಹಾರ್ನೆಟ್ 2.0 ಬೈಕಿನಲ್ಲಿ 184 ಸಿಸಿ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 17.27 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಆದರೆ ಅಡ್ವೆಂಚರ್ ಬೈಕಿಗೆ ಹೊಸ ಎಂಜಿನ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಇನ್ನು ಈ ಹೊಸ ಮಾದರಿಯು ಹೋಂಡಾ ಸಿಬಿ 190 ಎಕ್ಸ್ ಬೈಕಿನಲ್ಲಿರುವ ಕೆಲವು ಫೀಚರ್ ಗಳನ್ನು ಹೊಂದಿರುತ್ತದೆ. ಇದು ವಿಂಡ್ ಶಿಲ್ಡ್, ಎಂಜಿನ್ ಬ್ಯಾಷ್ ಪ್ಲೇಟ್, ನಕಲ್ ಗಾರ್ಡ್ ಮತ್ತು ಇತರ ಅಂಶಗಳನ್ನು ಒಳಗೊಂಡಿರುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಇನ್ನು ಹೋಂಡಾ ಮೋಟಾರ್‌ಸೈಕಲ್ ತನ್ನ ಎರಡು ಹೊಸ ಪ್ರೀಮಿಯಂ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿವೆ. ಇದು ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್‌ಗಳಾಗಿವೆ.

ಭಾರತದಲ್ಲಿ ಎನ್‌ಎಕ್ಸ್200 ಹೆಸರಿನ ಟ್ರೇಡ್‌ಮಾರ್ಕ್ ನೋಂದಾಯಿಸಿದ ಹೋಂಡಾ

ಭಾರತದಲ್ಲಿ ಹೋಂಡಾ ಕಂಪನಿಯು ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಹೋಂಡಾ ಹೆಚ್ಚಾಗಿ ಪ್ರೀಮಿಯಂ ಬೈಕ್‌ಗಳ ವಿಭಾಗವವನ್ನು ಗುರಿಯಾಗಿಸಿ ಹಲವು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿದೆ. ಈ ಹೊಸ ಎನ್‌ಎಕ್ಸ್200 ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲೇ ಬಹಿರಂಗವಾಗಬಹುದು.

Most Read Articles

Kannada
English summary
Honda NX200 Name Trademarked. Read In kananda.
Story first published: Wednesday, April 28, 2021, 20:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X