ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

Hop ಎಲೆಕ್ಟ್ರಿಕ್ ಮೊಬಿಲಿಟಿ ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ವೇಗವಾಗಿ ಬೆಳೆಯುತ್ತಿರುವ Hop ಎಲೆಕ್ಟ್ರಿಕ್ ಶೀಘ್ರದಲ್ಲೇ ತನ್ನ ಟಾಪ್ ಎಂಡ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಈ ಎಲೆಕ್ಟ್ರಿಕ್ ಬೈಕಿಗೆ Hop ಕಂಪನಿಯು Oxo ಎಂದು ಹೆಸರಿಟ್ಟಿದೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ Hop Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನು ಆರಂಭಿಸಲಾಗಿದೆ. ಪೆಟ್ರೋಲ್ ಬೈಕ್ ಗಳಂತೆ ಎಲೆಕ್ಟ್ರಿಕ್ ಬೈಕ್ ಗಳು ವೇಗವಾಗಿ ಚಲಿಸುವುದಿಲ್ಲ ಎಂಬುದು ಹಲವರ ಅಭಿಪ್ರಾಯ. ಪೆಟ್ರೋಲ್ ಬೈಕ್ ಗಳು, ಎಲೆಕ್ಟ್ರಿಕ್ ಬೈಕ್ ಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಜೊತೆಗೆ ಎಲೆಕ್ಟ್ರಿಕ್ ಬೈಕ್ ಗಳ ವಿನ್ಯಾಸ ಉತ್ತಮವಾಗಿರುವುದಿಲ್ಲ ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ಆದರೆ ಇವೆಲ್ಲವೂ ಎಲೆಕ್ಟ್ರಿಕ್ ವಾಹನಗಳ ಬಗೆಗಿರುವ ತಪ್ಪು ಕಲ್ಪನೆಗಳಾಗಿವೆ. ಎಲೆಕ್ಟ್ರಿಕ್ ಬೈಕುಗಳು ಸಮತೋಲನವನ್ನು ಕಾಯ್ದು ಕೊಳ್ಳಲು ತುಂಬಾ ಹಗುರವಾಗಿರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಇವೆಲ್ಲವೂ ಸಂಪೂರ್ಣವಾಗಿ ಸುಳ್ಳು ಸಂಗತಿಗಳಾಗಿವೆ. ಎಲೆಕ್ಟ್ರಿಕ್ ಬೈಕುಗಳ ಕುರಿತಾಗಿ ಇರುವ ಈ ಸಂಗತಿಗಳನ್ನು ಸುಳ್ಳು ಎಂದು ಸಾಬೀತು ಪಡಿಸಲು Hop Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷಾರ್ಥ ಚಾಲನೆಯನ್ನು ನಡೆಸಲಾಗುತ್ತಿದೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ಪರೀಕ್ಷೆಯ ಸಂದರ್ಭದಲ್ಲಿ ಈ ಎಲೆಕ್ಟ್ರಿಕ್ ಬೈಕ್ ಪ್ರತಿ ಗಂಟೆಗೆ 80 - 90 ಕಿ.ಮೀ ವೇಗದಲ್ಲಿ ಚಲಿಸಿದೆ. ಅದೂ ಸಹ ಈ ಎಲೆಕ್ಟ್ರಿಕ್ ಬೈಕ್ ಕೇವಲ ಅರ್ಧ ನಿಮಿಷದಲ್ಲಿ ಈ ವೇಗವನ್ನು ತಲುಪಿದೆ ಎಂಬುದು ಗಮನಾರ್ಹ. ಪರೀಕ್ಷಾ ಸಮಯದಲ್ಲಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಮರೆ ಮಾಚಲಾಗಿತ್ತು. ಈ ಎಲೆಕ್ಟ್ರಿಕ್ ಬೈಕಿನ ವಿನ್ಯಾಸವನ್ನು ಬಹಿರಂಗಪಡಿಸಿದ ನಂತರ ಖಚಿತವಾಗಿ ಜನರನ್ನು ಆಕರ್ಷಿಸುವ ನಿರೀಕ್ಷೆಗಳಿವೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ಈ ಬೈಕ್ ಯಾವುದೇ ವಿಶೇಷ ಶಬ್ದವನ್ನು ಉಂಟು ಮಾಡುವುದಿಲ್ಲ. ಜೊತೆಗೆ ಪರಿಸರವನ್ನು ಕಲುಷಿತಗೊಳಿಸುವುದಿಲ್ಲ ಎಂಬುದು ವಿಶೇಷ. ಈ ಬೈಕಿನ ಆಕ್ಸಲರೇಷನ್ ವೇಗವಾಗಿರಲಿ ಹಾಗೂ ಉತ್ತಮವಾಗಿರಲಿ ಎಂಬುದು ಜನರ ಆಶಯ. ವೇಗದ ಈ ಹೈಟೆಕ್ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ಪೆಟ್ರೋಲ್ ಬಳಸದೇ ಬ್ಯಾಟರಿ ಮೂಲಕವೇ ಬೈಕುಗಳು ಶಕ್ತಿಯುತ ಆಕ್ಸಲರೇಷನ್ ನೀಡಲು ಸಾಧ್ಯವಾದರೆ ಜನರು ಎಲೆಕ್ಟ್ರಿಕ್ ಬೈಕುಗಳನ್ನೇ ಖರೀದಿಸುವುದು ಖಚಿತ. ಈ ಎಲೆಕ್ಟ್ರಿಕ್ ಬೈಕುಗಳು ಭವಿಷ್ಯದಲ್ಲಿ ಪರಿಸರವನ್ನು ಸಂರಕ್ಷಿಸುತ್ತವೆ. ಸಾಮಾನ್ಯವಾಗಿ ಬೈಕ್ ಉತ್ಸಾಹಿಗಳು, ಬೈಕುಗಳ ವಿನ್ಯಾಸವು ಉತ್ತಮವಾಗಿರಬೇಕು, ಆರಾಮದಾಯಕ ಪ್ರಯಾಣವನ್ನು ನೀಡಬೇಕೆಂದು ಬಯಸುತ್ತಾರೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ಇದರ ಜೊತೆಗೆ ಇಂಧನದ ವೆಚ್ಚವನ್ನು ನಿಭಾಯಿಸಲು ಬೈಕುಗಳು ಉತ್ತಮ ಮೈಲೇಜ್ ನೀಡಬೇಕೆಂದು ಹಾಗೂ ಸಾಕಷ್ಟು ವೇಗದಲ್ಲಿ ಚಲಿಸಬೇಕೆಂದು ಬಯಸುತ್ತಾರೆ. ಎಲೆಕ್ಟ್ರಿಕ್ ಬೈಕಿನಲ್ಲಿ ಈ ಎಲ್ಲವೂ ಲಭ್ಯವಾದರೆ ಜನರು ದುಬಾರಿ ಬೆಲೆಯ ಪೆಟ್ರೋಲ್ ಬೈಕುಗಳ ಬದಲು ಎಲೆಕ್ಟ್ರಿಕ್ ಬೈಕುಗಳನ್ನೇ ಖರೀದಿಸುತ್ತಾರೆ. ಈಗಿನ ಯುವ ಜನತೆ ಬಯಸುವ ಬಹುತೇಕ ಎಲ್ಲಾ ಫೀಚರ್ ಗಳನ್ನು Oxo ಬೈಕ್ ಹೊಂದಿದೆ ಎಂದು Hop ಕಂಪನಿ ಹೇಳಿದೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

Hop ಕಂಪನಿಯ ವಾಹನಗಳು ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳನ್ನು ಆಕರ್ಷಿಸುವ ಸಾಧ್ಯತೆಗಳಿವೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ಯುವ ಜನರು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಹಾಗೂ ವೇಗವಾಗಿ ಚಲಿಸುವ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುತ್ತಾರೆ. ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳಿಗೆ ಪರ್ಯಾಯವಾಗಬಲ್ಲವು.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

Hop ಎಲೆಕ್ಟ್ರಿಕ್ ಕಂಪನಿ ಬಗ್ಗೆ:

Hop ಎಲೆಕ್ಟ್ರಿಕ್ ಕಂಪನಿಯನ್ನು ಪರಿಸರ ಸ್ನೇಹಿಯಾದ, ಆರ್ಥಿಕವಾದ ಹಾಗೂ ದಕ್ಷ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಪೂರೈಸಿ ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ದ್ವಿ ಚಕ್ರ ಪೂರೈಕೆದಾರನಾಗುವ ಕನಸಿನೊಂದಿಗೆ ಆರಂಭಿಸಲಾಯಿತು. ಸದ್ಯಕ್ಕೆ Hop ಕಂಪನಿಯು ಮೂರು ಎಲೆಕ್ಟ್ರಿಕ್ ವಾಹನಗಳನ್ನು ಸಿದ್ಧಪಡಿಸಿದೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ಇವುಗಳಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳಾದರೆ, ಮತ್ತೊಂದು ಎಲೆಕ್ಟ್ರಿಕ್ ಬೈಕ್ ಆಗಿದೆ. Hop ಎಲೆಕ್ಟ್ರಿಕ್ ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ 10 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ Hop ಕಂಪನಿಯು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳ ಅಗತ್ಯಗಳನ್ನು ಪೂರೈಸುವ ನಿರೀಕ್ಷೆಗಳಿವೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ಭಾರತದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ರೂ. 100 ಗಳ ಗಡಿ ದಾಟಿದೆ. ಕೆಲವು ನಗರಗಳಲ್ಲಿ ಡೀಸೆಲ್ ಬೆಲೆಯೂ ಸಹ ರೂ. 100 ಗಳ ಗಡಿ ದಾಟಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಕಂಗಾಲಾಗಿದ್ದಾರೆ. ಈ ಕಾರಣಕ್ಕೆ ವಾಹನ ಸವಾರರು ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿಲ್ಲದೇ ಇರುವುದರಿಂದ ಹಲವಾರು ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ವೇಗವಾಗಿ ಚಲಿಸುವ Oxo ಎಲೆಕ್ಟ್ರಿಕ್ ಬೈಕಿನ ಪರೀಕ್ಷೆಯನ್ನಾರಂಭಿಸಿದ Hop ಕಂಪನಿ

ಎಲೆಕ್ಟ್ರಿಕ್ ವಾಹನಗಳು ಪೂರ್ತಿಯಾಗಿ ಚಾರ್ಜ್ ಆದ ನಂತರ ಹೆಚ್ಚು ದೂರ ಚಲಿಸುವುದಿಲ್ಲ ಎಂಬ ಸಂಗತಿಯು ಸಹ ವಾಹನ ಸವಾರರನ್ನು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದೆ. ಎಲೆಕ್ಟ್ರಿಕ್ ವಾಹನ ಸವಾರರ ನೆರವಿಗೆ ಧಾವಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಮುಂದಾಗಿವೆ.

ಗಮನಿಸಿ: ಮೊದಲ ಚಿತ್ರವನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Hop electric mobility starts testing of oxo electric bike details
Story first published: Monday, October 4, 2021, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X