ಹೊಸದಾಗಿ ಆರಂಭವಾಗುತ್ತಿರುವ ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

vಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಇವಿ ವಾಹನ ಉತ್ಪನ್ನಗಳೊಂದಿಗೆ ಭಾರತೀಯ ಆಟೋ ಉದ್ಯಮದಲ್ಲೇ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಕಂಪನಿಯು ಶೀಘ್ರದಲ್ಲೇ ಬಹುನೀರಿಕ್ಷಿತ ಸೀರಿಸ್ ಎಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೂ ಮುನ್ನ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿದ್ದು, ರೂ. 499 ಮುಂಗಡ ಪಾವತಿ ಮಾಡಿ ಹೊಸ ಸ್ಕೂಟರ್ ಖರೀದಿಗೆ ಹೆಸರು ನೋಂದಾಯಿಸಬಹುದಾಗಿದೆ. ಸದ್ಯ ಬುಕ್ಕಿಂಗ್ ಪ್ರಕ್ರಿಯೆ ಚಾಲನೆ ನೀಡಿದರು ಕೂಡಾ ಯಾವೆಲ್ಲಾ ನಗರಗಳಲ್ಲಿ ಓಲಾ ಸ್ಕೂಟರ್ ಖರೀದಿಗೆ ಲಭ್ಯವಿರಲಿದೆ ಎನ್ನುವ ಮಾಹಿತಿ ಇನ್ನು ಬಿಡುಗಡೆಗೊಳ್ಳಬೇಕಿದ್ದು, ಶೀಘ್ರದಲ್ಲೇ ಹೊಸ ವಾಹನ ಮಾರಾಟ ಮಳಿಗೆಗಳನ್ನು ಮಾಹಿತಿಯು ಪ್ರಕಟಗೊಳ್ಳಲಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಮೊದಲ ಹಂತದಲ್ಲಿ ಕಂಪನಿಯು ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ ಟೈರ್ 1 ಮತ್ತು ಟೈರ್ 2 ನಗರಗಳಲ್ಲೂ ಡೀಲರ್‌ಶಿಪ್ ತೆರೆಯುತ್ತಿದ್ದು, ಆಸಕ್ತರಿಂದ ಅರ್ಜಿ ಸ್ವಿಕಾರ ಮಾಡುತ್ತಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಮೊದಲ ಹಂತದಲ್ಲಿ ಸ್ಕೂಟರ್ ಮಾರಾಟಗೊಳ್ಳುವ ನಗರಗಳನ್ನು ಆಧಾರ ಮೇಲೆ ಅರ್ಜಿಗಳನ್ನು ಪರಿಶೀಲಿಸುತ್ತಿರುವ ಓಲಾ ಕಂಪನಿಯು ವಿವಿಧ ಮಾನದಂಡಗಳನ್ನು ಆಧರಿಸಿ ಡೀಲರ್ ಅಥವಾ ಫ್ರಾಂಚೈಸಿ ನೀಡುವ ಕುರಿತು ಪರೀಶಿಲನೆ ನಡೆಸುತ್ತಿದ್ದು, ಮಾರಾಟ ಮಳಿಗೆಗಳ ಕುರಿತಾಗಿ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತಷ್ಟು ಮಾಹಿತಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಡೀಲರ್‌ಶಿಪ್ ಆರಂಭಿಸಲು ಈಗಾಗಲೇ ಸಾಕಷ್ಟು ಅರ್ಜಿಗಳು ಇಮೇಲ್ ಮೂಲಕವಾಗಿ ಕಂಪನಿಗೆ ರವಾನೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಓಲಾ ಉತ್ಪನ್ನಗಳಿಂದ ಉತ್ತಮ ಆದಾಯ ನೀರಿಕ್ಷೆಯಿರುವ ಹಿನ್ನಲೆಯಲ್ಲಿ ಹೆಚ್ಚಿನ ಮಟ್ಟದ ಮಾರಾಟ ಮಳಿಗೆಗಳು ಆರಂಭಗೊಳ್ಳುವ ಸಾಧ್ಯತೆಗಳಿವೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಹೊಸ ವಾಹನ ಮಾರಾಟ ಮಳಿಗೆ ಆರಂಭಿಸಲು ಕಂಪನಿಯ ಮಾರುಕಟ್ಟೆ ವಿಭಾಗವು ಈಗಾಗಲೇ ವಿವಿಧ ಹಂತದ ಮಾರುಕಟ್ಟೆ ಅಧ್ಯಯನದ ನಂತರ ಆರಂಭಿಕವಾಗಿ ದೇಶದ ಪ್ರಮುಖ 50 ನಗರಗಳನ್ನು ವಾಹನ ಮಾರಾಟ ಆರಂಭಿಸುವ ಸಿದ್ದತೆಯಲ್ಲಿದ್ದು, ಹೆಚ್ಚಿನ ಮಾಹಿತಿಗಾಗಿ ನೀವು www.olaelectric.com ಇಲ್ಲಿ ಸಂಪರ್ಕಿಸಬಹುದಾಗಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಮಾರಾಟ ಮಳಿಗೆ ಆರಂಭಿಸಲು ಪ್ರಮುಖ ಮಾನದಂಡಗಳಾದ ವ್ಯವಹಾರದ ಕೌಶಲ್ಯತೆ, ಬಂಡವಾಳ, ಸ್ಥಳಾವಾಶಕದ ಲಭ್ಯತೆ ಮತ್ತು ಮಳಿಗೆ ಆರಂಭವಾಗುವ ಪ್ರದೇಶದಲ್ಲಿನ ಗ್ರಾಹಕರ ಬೇಡಿಕೆ ಆಧರಿಸಿ ಡೀಲರ್‌ಶಿಪ್‌ಗೆ ಅವಕಾಶ ದೊರೆಯಲಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಇನ್ನು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸೀರಿಸ್ ಎಸ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಗಳಿದ್ದು, ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ಪ್ರತಿ ಚಾರ್ಜ್‌ಗೆ 150 ಕಿ.ಮೀ 240 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾದ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರಲಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ತ್ರಿ ಚಕ್ರ ವಾಹನಗಳು ಮತ್ತು ಇವಿ ಕಾರುಗಳನ್ನು ಸಹ ಅಭಿವೃದ್ದಿಪಡಿಸಲಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಓಲಾ ಕಂಪನಿಯು ಹೊಸ ವಾಹನ ಉತ್ಪಾದನಾ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ತಮಿಳುನಾಡಿನ ಹೊಸರಿನಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿರುವ ಓಲಾ ಕಂಪನಿಯು ಬರೋಬ್ಬರಿ 500 ಎಕರೆ ವ್ಯಾಪ್ತಿಯಲ್ಲಿ ಹೊಸ ವಾಹನ ಉತ್ಪಾದನಾ ಘಟಕ ತೆರೆಯುತ್ತಿದ್ದು, ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಬಹುದಾದ ಸಾಮರ್ಥ್ಯ ಹೊಂದಿದೆ.

ಓಲಾ ಇವಿ ಸ್ಕೂಟರ್ ಡೀಲರ್‌ಶಿಪ್ ಪಡೆಯುವುದು ಹೇಗೆ?

ಏಷ್ಯಾದಲ್ಲಿಯೇ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಘಟಕವಾಗಿರುವ ಓಲಾ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದಲ್ಲಿ ಪ್ರತಿ 2 ಸೆಕೆಂಡುಗಳಲ್ಲಿ 1 ಎಲೆಕ್ಟ್ರಿಕ್ ಸ್ಕೂಟರ್ ಅಸ್ಲೆಂಬಿಗೊಳ್ಳಲಿದ್ದು, ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವಜ್ಞಾನದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದೆ.

Most Read Articles

Kannada
English summary
Apply Online For Ola Electric Scooter Dealership. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X