Just In
- 35 min ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 55 min ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 2 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
- 13 hrs ago
ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- News
ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಭೀತಿ; ವಲಸೆ ಕಾರ್ಮಿಕರ ಗುಳೆ
- Finance
ಚಿನ್ನದ ಬೆಲೆ: ಗರಿಷ್ಠ ಮಟ್ಟಕ್ಕಿಂತ 10,000 ರೂ. ಕಡಿಮೆ
- Sports
ರಾಜಸ್ಥಾನ್ ವಿರುದ್ಧ ಗೆದ್ದು ಮುಂಬೈ ಹಿಂದಿಕ್ಕಿದ ಪಂಜಾಬ್ ಕಿಂಗ್ಸ್
- Lifestyle
ಮಂಗಳವಾರದ ದಿನ ಭವಿಷ್ಯ: ಯುಗಾದಿಯಂದು ಹೇಗಿದೆ ನಿಮ್ಮ ರಾಶಿಫಲ
- Movies
ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕವಾಸಕಿ ವರ್ಸಿಸ್ 650 ಬೈಕ್ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್
ಜನಪ್ರಿಯ ದ್ವಿಚಕ್ರ ಕಂಪನಿಯಾದ ಕವಾಸಕಿ ಇಂಡಿಯಾ ಸರಣಿಯಲ್ಲಿರುವ ವರ್ಸಿಸ್ 650 ಬೈಕ್ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಕವಾಸಕಿ ಕಂಪನಿಯು ಈ ವರ್ಸಿಸ್ 650 ಬೈಕಿನ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಲಾಗಿತ್ತು. ಇದೀಗ ಈ ಬೈಕಿನ ಮೇಲೆ ಆಕರ್ಷಕ ಆಫರ್ ಅನ್ನು ಘೋಷಿಸಿದೆ.

ಕವಾಸಕಿ ಇಂಡಿಯಾ ಈ ತಿಂಗಳ ಆರಂಭದಿಂದ ತನ್ನ ಕೆಲವು ಆಯ್ದ ಜನಪ್ರಿಯ ಮಾದರಿಗಳ ಬೆಲೆಗಳನ್ನು ಹೆಚ್ಚಿಸಿದೆ. ಈ ಹೊಸ ಪಟ್ಟಿಯನ್ನು ಆಧರಿಸಿ, ಹಲವಾರು ಕವಾಸಕಿ ಹಲವಾರು ಜನಪ್ರಿಯ ಮಾದರಿಗಳು ದುಬಾರಿಯಾಗಿವೆ. ವರ್ಸಿಸ್ 650 ಬೈಕ್ ಕೂಡ ಇದರಲ್ಲಿ ಒಂದಾಗಿದೆ. ಆದರೆ ಇದೀಗ ಕವಾಸಕಿ ಇದೇ ವರ್ಸಿಸ್ 650 ಬೈಕಿನ ಮೇಲೆ ರೂ.30,000 ವರೆಗೆ ಡಿಸ್ಕೌಂಟ್ ಅನ್ನು ಘೋಷಿಸಿದೆ. ಈ ಆಕರ್ಷಕ ರಿಯಾಯಿತಿಯು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

ಕವಾಸಕಿ ವರ್ಸಿಸ್ 650 ಜಪಾನಿನ ಬ್ರಾಂಡ್‌ನ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಉತ್ತಮ ಅಡ್ವೆಂಚರ್ ಮಾದರಿಯಾಗಿದೆ. ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 649 ಸಿಸಿ, ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಎಂಜಿನ್ 8500 ಆರ್‌ಪಿಎಂನಲ್ಲಿ 65 ಬಿಹೆಚ್‌ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 61 ಎನ್‌ಎಂ ಪೀಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇಂದಿನ ಮಾದರಿಗೆ ಹೋಲಿಸಿದರೆ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕಡಿಮೆಯಾಗಿದೆ.

ಇನ್ನು ವರ್ಸಿಸ್ 650 ಬೈಕಿನಲ್ಲಿ ನಿಂಜಾ 650 ಮಾದರಿಯಲ್ಲಿರುವಂತಹ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಕಲರ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಫೀಚರ್ ಗಳನ್ನು ನೀಡಲಾಗಿಲ್ಲ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು 2020ರ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 145 ಎಂಎಂ ಆಫ್ಸೆಟ್ ಲೇಡೌನ್ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಡ್ಯುಯಲ್-ಪಿಸ್ಟನ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 250 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ನೀಡಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇನ್ನು ಇದೀಗ ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೊಸ ಕವಾಸಕಿ ನಿಂಜಾ 300 ಬೈಕನ್ನು ನವೀಕರಿಸಿ ಬಿಡುಗಡೆಗೊಳಿಸಲಾಗಿದೆ.

ಇನ್ನು ಈ ಹೊಸ ಕವಾಸಕಿ ನಿಂಜಾ 300 ಬೈಕ್ ಡೀಲರುಗಳ ಬಳಿ ತಲುಪಲು ಈಗಾಗಲೇ ಪ್ರಾರಂಭವಾಗಿದೆ. ಕವಾಸಕಿ ಕಂಪನಿಯು ತನ್ನ ಹಲವು ಜನಪ್ರಿಯ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಕವಾಸಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ.

ಇತ್ತೀಚೀಗೆ ಕವಸಾಕಿ ಕಂಪನಿಯು ತನ್ನ ಹಲವು ಜನಪ್ರಿಯ ಬೈಕ್ ಗಳ ಬೆಲೆ ಏರಿಸಲಾಗಿದೆ. ಅದರಲ್ಲಿ ವರ್ಸಿಸ್ 650 ಕೂಡ ಒಂದಾಗಿದೆ. ಆದರೆ ಇದೀಗ ಕಂಪನಿಯು ಈ ಬೈಕಿನ ಮಾರಾಟವನ್ನು ಹೆಚ್ಚಿಸಲು ಆಕರ್ಷಕ ಡಿಸೌಂಟ್ ಅನ್ನು ಘೋಷಿಸಿದೆ.