Just In
Don't Miss!
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಕವಾಸಕಿ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ಆಫರ್
ಕವಾಸಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಲಾಗಿದೆ. ಕವಾಸಕಿ ಕಂಪನಿಯು ಈ ಮಾರ್ಚ್ ತಿಂಗಳಲ್ಲಿ ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಒಟ್ಟು ರೂ.50,000ಗಳವರೆಗೆ ಆಫರ್ ಅನ್ನು ಘೋಷಿಸಿದೆ.

ಕವಾಸಕಿ ಇಂಡಿಯಾ ಕಂಪನಿಯು ತನ್ನ ಆಫ್-ರೋಡ್ ಬೈಕ್‌ಗಳ ಮೇಲೆ ಘೋಷಿಸಿರುವ ಆಫರ್ ಗಳ ಮಾಹಿತಿಯನ್ನು ತನ್ನ ಸಾಮಾಜಿಕ ಜಾಲತಾಣಗಳ ಪೇಜ್ ನಲ್ಲಿ ಹಂಚಿಕೊಂಡಿದೆ. ಕವಾಸಕಿ ಕಂಪನಿಯು ತನ್ನ ಕೆಎಲ್‌ಎಕ್ಸ್110, ಕೆಎಲ್‌ಎಕ್ಸ್140 ಮತ್ತು ಕೆಎಕ್ಸ್100 ಬೈಕುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಕವಾಸಕಿ ಕೆಎಲ್‌ಎಕ್ಸ್110 ಬೈಕಿನ ಮೇಲೆ ರೂ.30,000 ರಿಯಾಯಿತಿಯನ್ನು ನೀಡಿದರೆ, ಕೆಎಲ್‌ಎಕ್ಸ್140 ಬೈಕಿನ ಮೇಲೆ ರೂ.40,000 ಮತ್ತು ಕೆಎಕ್ಸ್100 ಬೈಕಿನ ಮೇಲೆ ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಈ ರಿಯಾಯಿತಿ ಕೂಪನ್ ಗಳು ಸೀಮಿತ ಸ್ಟಾಕ್‌ನಲ್ಲಿ ಮಾತ್ರ ಅನ್ವಯವಾಗುತ್ತವೆ ಮತ್ತು ಅವುಗಳು ‘ಫಸ್ಟ್ ಕಮ್ ಫಸ್ಟ್ ಸರ್ವ್' ಆಧಾರದ ಮೇಲೆ ಲಭ್ಯವಿರುತ್ತವೆ. ಗಮನಿಸಿ ಈ ಬೈಕುಗಳ ಎಕ್ಸ್‌ಶೋರೂಂ ಬೆಲೆಯ ಮೇಲೆ ಕೂಪನ್ ಅನ್ನು ಪಡೆದುಕೊಳ್ಳಬಹುದು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ರಿಯಾಯಿತಿಗಳು ದೇಶದಾದ್ಯಂತವಿರುವ ಎಲ್ಲಾ ಕವಾಸಕಿ ಡೀಲರುಗಳ ಬಳಿ ಲಭ್ಯವಿರುತ್ತದೆ. ಆದರೆ ಕವಾಸಕಿ ಕೆಎಕ್ಸ್ ಮತ್ತು ಕೆಎಲ್ಎಕ್ಸ್ ಮಾದರಿಗಳನ್ನು ಸರ್ವಾಜನಿಕ ರಸ್ತೆಗಳಲ್ಲಿ ನಿರ್ಬಂಧಿಸಲಾಗಿದೆ. ಇದು ಕೇವಲ ಟ್ರ್ಯಾಕ್ ನಲ್ಲಿ ಮತ್ತು ಆಫ್-ರೋಡ್ ಪ್ರದೇಶಗಳಲ್ಲಿ ಓಡಿಸುವ ಬೈಕುಗಳಾಗಿವೆ.

ಇನ್ನು ಕೆಎಲ್‌ಎಕ್ಸ್110 ಬೈಕಿನಲ್ಲಿ 112 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 7.3 ಬಿಹೆಚ್‍ಪಿ ಪವರ್ ಮತ್ತು 8.0 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಇದು ಅತ್ಯಂತ ಕಡಿಮೆ ತೂಕದ ತೂಕವನ್ನು ಹೊಂದಿದೆ. ಈ ಕೆಎಲ್‌ಎಕ್ಸ್110 ಬೈಕ್ ಕೇವಲ 76 ಕೆಜಿ ತೂಕವನ್ನು ಹೊಂದಿದ್ದು, ಇದು ಆಫ್-ರೋಡ್ ಭೂಪ್ರದೇಶದಲ್ಲಿ ನಿಭಾಯಿಸಲು ಹೆಚ್ಚು ಸುಲಭಗೊಳಿಸುತ್ತದೆ

ಇನ್ನು ಕೆಎಲ್‌ಎಕ್ಸ್140 ಬೈಕಿನಲ್ಲಿ 144 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಕೆಎಲ್ಎಕ್ಸ್140 ಬೈಕ್ 99 ಕೆಜಿ ತೂಕವನ್ನು ಹೊಂದಿದ್ದು, ಇದು ಆಫ್-ರೋಡ್ ಭೂಪ್ರದೇಶದಲ್ಲಿ ಸುಲಭವಾಗಿ ಸಾಗಲು ಮತ್ತು ಟ್ಯ್ರಾಕ್ ನಲ್ಲಿ ಓಡಿಸುವಾಗ ಸವಾರನಿಗೆ ಹೆಚ್ಚು ಸಹಕಾರಿಯಾಗಿರುತ್ತದೆ. ಇದರ ಬೆಲೆಯು ರೂ.4.06 ಲಕ್ಷಗಳಾಗಿದೆ.

ಕೊನೆಯ ಮಾದರಿ ಕವಾಸಕಿ ಕೆಎಕ್ಸ್100 ಬೈಕಿನಲ್ಲಿ 99ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್, 2-ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಕವಾಸಕಿ ಕೆಎಕ್ಸ್100 ಬೈಕ್ 77ಕೆಜಿ ತೂಕವನ್ನು ಹೊಂದಿದೆ.