Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 3 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನಪ್ರಿಯ ಕವಾಸಕಿ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಕವಾಸಕಿ ತನ್ನ ಆಯ್ದಾ ಮಾದರಿಗಳ ಮೇಲೆ ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.

ಕವಾಸಕಿ ತನ್ನ ಕೆಎಲ್‌ಎಕ್ಸ್ 110, ಕೆಎಲ್‌ಎಕ್ಸ್ 140, ಕೆಎಕ್ಸ್ 100, ಡಬ್ಲ್ಯು 800, ಝಡ್650, ವರ್ಸಿಸ್ 650, ಮತ್ತು ವಲ್ಕನ್ ಎಸ್ ಬೈಕುಗಳ ಮೇಲೆ ನ್ಯೂ ಇಯರ್ ರಿಯಾಯಿತಿಯನ್ನು ನೀಡಲಾಗಿದೆ. ಕಂಪನಿಯು ಎಲ್ಲಾ ಅರ್ಹ ಮಾದರಿಗಳಿಗೆ ರಿಯಾಯಿತಿ ಕೂಪನ್ ನೀಡುತ್ತಿದೆ, ಇದನ್ನು ಬೈಕಿನ ಖರೀದಿ ವೆಚ್ಚವನ್ನು ಕಡಿಮೆ ಮಾಡಲು ಬಳಸಬಹುದು. ಗ್ರಾಹಕರು ತಾವು ಖರೀದಿಸುತ್ತಿರುವ ಬೈಕ್ ಗಾಗಿ ಆಫ್ಟರ್ ಮಾರ್ಕೆಟ್ ಅಕ್ಸೆಸರೀಸ್ ಅನ್ನು ಖರೀದಿಸಲು ಕೂಪನ್ ಅನ್ನು ಸಹ ಬಳಸಬಹುದು.

ಇನ್ನು ಗ್ರಾಹಕರು ಅವರು ಕಂಪನಿ ನೀಡುವ ಅಕ್ಸೆಸರೀಸ್ ಅನ್ನು ಕೂಡ ಆಯ್ಕೆ ಮಾಡಬಹುದು. ಈ ಎಲ್ಲಾ ಆಫರ್ ಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ದೇಶಾದ್ಯಂತದ ಯಾವುದೇ ಕವಾಸಕಿ ಡೀಲರುಗಳ ಬಳಿ ಈ ಆಫರ್ ಲಭ್ಯವಿರುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಕವಾಸಕಿ ತನ್ನ ವರ್ಸಿಸ್ 650 ಮತ್ತು ವರ್ಸಿಸ್ 1000 ಅಡ್ವೆಂಚರ್-ಟೂರಿಂಗ್ ಬೈಕುಗಳನ್ನು ಕ್ರಮವಾಗಿ ರೂ.50,000 ಮತ್ತು ರೂ.30,000 ಮೌಲ್ಯದ ‘ಅಡ್ವೆಂಚರ್ ವೋಚರ್' ಎಂಬ ರಿಯಾಯಿತಿಯೊಂದಿಗೆ ನೀಡಲಾಗುತ್ತದೆ. ಗ್ರಾಹಕರು ಈ ವೋಚರ್ ಅನ್ನು ವೆಚ್ಚವನ್ನು ಕಡಿಮೆ ಮಾಡಲು ಅಥವಾ ಅಕ್ಸೆಸರೀಸ್ ಗಳಿಗಾಗಿ ಬಳಸಬಹುದು.

ಕವಾಸಕಿ ಕಂಪನಿಯು ವಲ್ಕನ್ ಎಸ್ ಮತ್ತು ಝಡ್650 ಬೈಕುಗಳಿಗೆ ಕ್ರಮವಾಗಿ ರೂ.20,000 ಮತ್ತು ರೂ.30,000 ಮೌಲ್ಯದ ವೋಚರ್ ಅನ್ನು ಸಹ ನೀಡುತ್ತಿದೆ. ಇನ್ನು ಡಬ್ಲ್ಯು800 ಬ್ರ್ಯಾಂಡ್‌ನ ರೆಟ್ರೊ ಶೈಲಿಯ ಬೈಕ್ ಆಗಿದ್ದು. ಇದು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಕ್ಕೆ ರೂ.30,000 ಮೌಲ್ಯದ ರಿಯಾಯಿತಿ ವೋಚರ್' ಸಹ ನೀಡಲಾಗುತ್ತಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬ್ರ್ಯಾಂಡ್‌ನ ಕೆಎಕ್ಸ್ 100, ಕೆಎಲ್‌ಎಕ್ಸ್ 140 ಮತ್ತು ಕೆಎಲ್‌ಎಕ್ಸ್ 110 ಎಂಬ ಆಫ್-ರೋಡ್ ಬೈಕುಗಳಿಗೆ ರಿಯಾಯಿತಿಯನ್ನು ಘೋಷಿಸಿದೆ. ಈ ಮಾದರಿಗಳಿಗೆ ಕ್ರಮವಾಗಿ ರೂ. 50,000, ರೂ.40,000 ಮತ್ತು ರೂ.30,000 ಗಳವರೆಗೆ ರಿಯಾಯಿತಿಯನ್ನು ನೀಡಿದೆ.

ಕವಾಸಕಿ ಕಂಪನಿಯು ತನ್ನ ಹೊಸ ಝಡ್650 ಮತ್ತು ವರ್ಸಿಸ್ 1000 ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಕವಾಸಕಿ ಕಂಪನಿಯು ತನ್ನ ಝಡ್650 ಮತ್ತು ವರ್ಸಿಸ್ 1000 ಬೈಕುಗಳಲ್ಲಿ ಕೆಲವು ಹೊಸ ಅಪ್ಡೇಟ್ ಗಳನ್ನು ನಡೆಸಿದ್ದಾರೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಝಡ್650 ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‍ಪಿಎಂನಲ್ಲಿ 67.3 ಬಿಹೆಚ್‍ಪಿ ಪವರ್ ಹಾಗೂ 6,700 ಆರ್‍ಪಿಎಂನಲ್ಲಿ 64 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

ಹೊಸ ಕವಾಸಕಿ ವರ್ಸಿಸ್ 1000 ಬೈಕಿನಲ್ಲಿ 1,043 ಸಿಸಿ, ಲಿಕ್ವಿಡ್-ಕೂಲ್ಡ್, ಇನ್-ಲೈನ್-ನಾಲ್ಕು ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9000 ಆರ್‍ಪಿಎಂನಲ್ಲಿ ಗರಿಷ್ಠ 118 ಬಿಹೆಚ್ಪಿ ಮತ್ತು 7500 ಆರ್‍ಪಿಎಂನಲ್ಲಿ 102 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್-ಅಸಿಸ್ಟ್ ಕ್ಲಚ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಕವಾಸಕಿ ಇಂಡಿಯಾ ತನ್ನ ಆಯ್ದಾ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗಿದೆ. ಇದರಲ್ಲಿ ಆಫ್-ರೋಡ್, ಅಡ್ವೆಂಚರ್ ಮತ್ತು ಸೂಪರ್ ಬೈಕುಗಳು ಒಳಗೊಂಡಿದೆ. ಕವಾಸಕಿ ಬೈಕುಗಳನ್ನು ಖರೀದಿಸಲು ಬಯಸುವ ಗ್ರಾಹಾಕರಿಗೆ ಉತ್ತಮ ಅವಕಾಶವಾಗಿದೆ.