ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಜನಪ್ರಿಯ ದ್ವಿಚಕ್ರ ಕಂಪನಿಯಾದ ಕವಾಸಕಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬೈಕ್‌ಗಳ ಬೆಲೆಯನ್ನು ಈ ವರ್ಷ ಮೂರನೇ ಬಾರಿಗೆ ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯು 2021ರ ಆಗಸ್ಟ್ ತಿಂಗಳಿನಿಂದ ಜಾರಿಯಾಗಲಿದೆ. ಇದರಿಂದ ಕವಾಸಕಿ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಲಿದೆ.

ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಕವಾಸಕಿ 650 ಸಿಸಿ ಲೈನ್-ಅಪ್ ನಲ್ಲಿರುವ ಝಡ್650, ನಿಂಜಾ 650, ವಲ್ಕನ್ ಎಸ್ ಮತ್ತು ವರ್ಸಿಸ್ 650 ಇವೆಲ್ಲವೂ ಬೆಲೆ ಏರಿಕೆಯನ್ನು ಪಡೆದಿವೆ. ಝಡ್650 ಜೊತೆಗೆ ವಲ್ಕನ್ ಎಸ್ ಕನಿಷ್ಠ ಬೆಲೆ ಏರಿಕೆಯು ರೂ.6,000 ಗಳಾದರೆ, ವರ್ಸಿಸ್ 650 ಬೈಕಿನ ಬೆಲೆಯು ಮುಂದಿನ ತಿಂಗಳಿನಿಂದ ರೂ.7,000 ವರೆಗೆ ಹೆಚ್ಚಳವಾಗಲಿದೆ. ಲೀಟರ್-ಕ್ಲಾಸ್ ನೇಕೆಡ್ ಬೈಕ್‌ಗಳಾದ ಕವಾಸಕಿ ಝಡ್900 ಬೈಕ್ ರೂ.8,000 ಗಳವರೆಗೆ ಹೆಚ್ಚಳವನ್ನು ಪಡೆಯುತ್ತದೆ. ಇನ್ನು ವರ್ಸಿಸ್ 1000 ಮತ್ತು ನಿಂಜಾ 1000 ಎಸ್‌ಎಕ್ಸ್ ಬೈಕ್‌ಗಳ ಬೆಲೆಯು ರೂ.11,000 ಗಳವರೆಗೆ ಹೆಚ್ಚಿಸಲಾಗಿದೆ.

ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಇದರಲ್ಲಿ ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್ ಬೈಕ್ ಅತಿ ಹೆಚ್ಚು ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಈ ಬೈಕ್ ರೂ.15,000 ಗಳವರೆಗೂ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಕವಾಸಕಿ ಮಿಡ್ ವೇಟ್ ರೆಟ್ರೊ-ರೋಡ್ಸ್ಟರ್ ಡಬ್ಲ್ಯು800 ಬೈಕ್ ರೂ.7,000 ಗಳವರೆಗೂ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಮುಂದಿನ ತಿಂಗಳಿನಿಂದ ಕವಾಸಕಿ ಡಬ್ಲ್ಯು800 ಬೈಕಿನ ಬೆಲೆಯು ರೂ,7.26 ಲಕ್ಷಗಳಾಗಲಿದೆ.

ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಬ್ರ್ಯಾಂಡ್ ಮಾರಾಟ ಮಾಡುವ ಕೆಲವು ಮಾದರಿಗಳು ಇತ್ತೀಚಿನ ಬೆಲೆ ಏರಿಕೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ನಿಂಜಾ ಎಚ್2ಆರ್ ಮತ್ತು ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಮಾದರಿಯಾದ ನಿಂಜಾ 300 ಅನ್ನು ಒಳಗೊಂಡಿದೆ. ಇನ್ನು ಝಡ್ಎಚ್2, ಕೆಎಕ್ಸ್ ಮತ್ತು ಕೆಎಲ್ಎಕ್ಸ್ ಸರಣಿಗಳು ಸೇರಿವೆ.

ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಅತಿ ಹೆಚ್ಚು ಬೆಲೆ ಏರಿಕೆ ಪಡೆದುಕೊಂಡ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಲೀಟರ್-ಕ್ಲಾಸ್ ಬೈಕ್‌ಗಳಲ್ಲಿ ಒಂದಾಗಿದೆ.2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಈ ಹೊಸ ಪ್ರೀಮಿಯಂ ಸೂಪರ್‌ಸ್ಪೋರ್ಟ್ ಬೈಕನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಪಡೆದುಕೊಂಡಿದೆ.

ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಹೊಸ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ 998 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,200 ಆರ್‌ಪಿಎಂನಲ್ಲಿ 200 ಬಿಹೆಚ್‌ಪಿ ಪವರ್ ಮತ್ತು 11,400 ಆರ್‌ಪಿಎಂನಲ್ಲಿ 114 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಆಗಸ್ಟ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಇನ್ ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಕವಾಸಕಿ ದ್ವಿಚಕ್ರ ವಾಹನಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಹೆಚ್ಚುವರಿ ವೆಚ್ಚವು ಖರೀದಿಸುವ ಗ್ರಾಹಕರ ಮೇಲೆ ಬೀಳುತ್ತದೆ. ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಬೈಕ್‌ಗಳು ಸಿಕೆಡಿ ಮೂಲಕ ಬರುತ್ತವೆ, ಆದ್ದರಿಂದ ಕವಾಸಕಿ ಬೆಲೆ ಏರಿಕೆಗೆ ಇದು ಕೂಡ ಕಾರಣವಿರಬಹುದು.

Most Read Articles

Kannada
English summary
Kawasaki Bike Prices Hiked For The Third Time This Year. Read In Kannada.
Story first published: Saturday, July 24, 2021, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X