ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ 2022ರ ವಲ್ಕನ್ ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ವಲ್ಕನ್ ಎಸ್ ಕ್ರೂಸರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.10 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

2022ರ ಕವಾಸಕಿ ವಲ್ಕನ್ ಎಸ್ ಕ್ರೂಸರ್ ಬೈಕ್ ಮೆಟಾಲಿಕ್ ಮ್ಯಾಟ್ ಗ್ರಾಫ್ನಸ್ಟೀಲ್ ಗ್ರೇ' ಎಂಬ ಹೊಸ ಏಕೈಕ ಬಣ್ಣದೊಂದಿಗೆ ಬಿಡುಗಡೆಯಾಗಿದೆ. ಈ ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಕ್ರೂಸರ್ ಬೈಕನ್ನು ಖರೀದಿಸಲು ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹು. ಇನ್ನು ಈ ಬೈಕಿನ ವಿತರಣೆಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭಿಸಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಮೆಟಾಲಿಕ್ ಮ್ಯಾಟ್ ಗ್ರಾಫ್ನೆಸ್ಟೀಲ್ ಗ್ರೇ ಬಣ್ಣಕ್ಕೆ ಸಂಬಂಧಿಸಿದಂತೆ, ಇಂಧನ ಟ್ಯಾಂಕ್ ಹೊಸ ಬೂದು ಮತ್ತು ಬೆಳ್ಳಿ ಬಣ್ಣಗಳನ್ನು ಜೊತೆಗೆ ಹಸಿರು ಪಿನ್-ಸ್ಟ್ರಿಪಿಂಗ್ ಅನ್ನು ಆಕರ್ಷಕ ಲುಕ್ ಅನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಹಸಿರು ಬಣ್ಣದ ಲೈನ್ ರೇಡಿಯೇಟರ್ ಸೈಡ್ ಕವರ್‌ಗಳ ಮೇಲೆ ಚಲಿಸುತ್ತದೆ ಮತ್ತು ವೀಲ್ ರಿಮ್‌ಗಳು ಅದನ್ನು ಟರ್ನರ್ ಮುಂದೆ ಮಾಡುತ್ತದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಈ ಬೈಕಿನಲ್ಲಿ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ 649ಸಿಸಿ ಪ್ಯಾರೆಲಲ್ ಲಿಕ್ವಿಡ್-ಟ್ವಿನ್ ಎಂಜಿನ್ ಹೊಂದಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 60 ಬಿಹೆಚ್‍ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 62.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಕವಾಸಕಿ ಝಡ್650 ಮತ್ತು ನಿಂಝಾ 650 ಬೈಕಿನಲ್ಲಿರುವಂತಹ ಅದೇ ಮಾದರಿಯ ಫೀಚರ್ ಗಳನ್ನು ಹೊಸ ವಲ್ಕನ್ ಬೈಕಿನಲ್ಲಿ ಲಭ್ಯವಿದೆ. ಆದರೆ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಇನ್ಸ್ ಟ್ರೂಮೆಂಟ್ ಕನ್ಸೋಲ್ ಫೀಚರ್ ಈ ವಲ್ಕನ್ ಬೈಕಿನಲ್ಲಿ ನೀಡಲಾಗಿಲ್ಲ. ಈ ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ ರೆಟ್ರೋ ವಿನ್ಯಾಸದ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಇದರೊಂದಿಗೆ ಬ್ಲ್ಯಾಕ್ ಕೌಲ್, ಎರಡು ಕಡೆಗಳಲ್ಲಿ ದುಂಡಗಿನ ಆಕಾರದ ಫೆಂಡರ್‌ಗಳು ಮತ್ತು ಹಿಂಭಾಗದಲ್ಲಿ ಸೆಟ್ ಟರ್ನ್ ಸಿಗ್ನಲ್ ಇಂಡಿಕೇಟರ್ ಗಳನ್ನು ಹೊಂದಿದೆ. ಹೊಸ ಕವಾಸಕಿ ವಲ್ಕನ್ ಎಸ್ ಬೈಕ್ 1575 ಎಂಎಂ ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಈ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 130 ಎಂಎಂ ಟ್ರಾವೆಲ್ ನೊಂದಿಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಆಫ್ಸೆಟ್ ಲೇಡೌನ್ ಶಾಕ್ 80 ಎಂಎಂ ಟ್ರಾವೆಲ್ ಪ್ರಿ-ಲೋಡ್ ಹೊಂದಾಣಿಗೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ 250 ಎಂಎಂ ಯುನಿಟ್ ಅನ್ನು ನೀಡಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಕವಾಸಕಿ ತನ್ನ 2022ರ ಝಡ್650 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಕವಾಸಕಿ ಝಡ್650 ಮಿಡ್ ವೈಟ್ ಸ್ಟ್ರೀಟ್-ನೇಕೆಡ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.24 ಲಕ್ಷವಾಗಿದೆ. 2022ರ ಕವಾಸಕಿ ಝಡ್650 ಬೈಕ್ ಹೊಸ ಕ್ಯಾಂಡಿ ಲೈಮ್ ಗ್ರೀನ್ ಟೈಪ್ 3 ಬಣ್ಣಕ್ಕೆ ಸಂಬಂಧಿಸಿದಂತೆ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳ ಸಂಯೋಜನೆಯಾಗಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಬೈಕಿನ ಚಾಸಿಸ್ ಅನ್ನು ಮ್ಯಾಟ್ ಗ್ರೀನ್ ಬಣ್ಣದಲ್ಲಿದೆ. ಬೈಕಿನ ಉಳಿದ ಬಾಡಿಯ ಭಾಗಗಳು ಬ್ಲ್ಯಾಕ್ ಬಣ್ಣದಲ್ಲಿ ಫ್ಯೂಯೆಲ್ ಟ್ಯಾಂಕ್, ಹೆಡ್ ಲ್ಯಾಂಪ್ ಕೌಲ್ ಮತ್ತು ಹಿಂಬದಿ ಟ್ರಿಮ್ ಮೇಲೆ ಗ್ರೀನ್ ಅಸ್ಸೆಂಟ್ ಗಳನ್ನು ಹೊಂದಿದೆ. ಇದರೊಂದಿಗೆ ಗ್ರೀನ್ ಪಿನ್ ಸ್ಟ್ರಿಪಿಂಗ್ ಅನ್ನು ಹೊಂದಿವೆ. ಹೊಸ ಬಣ್ಣವನ್ನು ಹೊರತುಪಡಿಸಿ, 2022ರ ಕವಾಸಕಿ ಝಡ್650 ಬೈಕಿನಲ್ಲಿ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ,

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

ಈ ಹೊಸ ಬೈಕ್ ಜಪಾನಿನ 'ಸುಗೊಮಿ' ವಿನ್ಯಾಸವನ್ನು ಹೊಂದಿದೆ. ಈ ಬೈಕ್ ನೇರವಾದ ನಿಲುವು, ಅಗ್ರೇಸಿವ್ ಕಾಣುವ ಮುಂಭಾಗ, ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಅನ್ನು ಹಿಂದಿನ ಮಾದರಿಯಿಂದಲೂ ಸಾಗಿಸಲಾಗಿದೆ. ಈ 2022ರ ಕವಾಸಕಿ ಝಡ್650 ಬೈಕಿನಲ್ಲಿ 649 ಸಿಸಿ ಪ್ಯಾರಲಲ್-ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರೊಂದಿಗೆ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ 2022ರ ಕವಾಸಕಿ ವಲ್ಕನ್ ಎಸ್ ಬೈಕ್

2022ರ ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ 14-ಲೀಟರ್ ಫೇರ್ಡ್ ಫ್ಯೂಯಲ್ ಟ್ಯಾಂಕ್, ಅಪ್-ರೈಟ್ ಹ್ಯಾಂಡಲ್‌ಬಾರ್ ಮತ್ತು ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಹೊಂದಿವೆ. ಇನ್ನು ಈ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಕವಾಸಕಿ ವಲ್ಕನ್ ಎಸ್ ಬೈಕ್ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮತ್ತು ಸ್ಟ್ರೀಟ್ ರಾಡ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Kawasaki launched 2022 vulcan s middle weight motorcycle in india details
Story first published: Saturday, August 14, 2021, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X