ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ಬಹುನಿರೀಕ್ಷಿತ ಬಿಎಸ್-6 ನಿಂಜಾ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಕವಾಸಕಿ ಕಂಪನಿಯು ತನ್ನ ಹೊಸ ನಿಂಜಾ 300 ಬೈಕನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು.

ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಬಿಎಸ್-6 ಕವಾಸಕಿ ನಿಂಜಾ 300 ಬೈಕಿನ ಖರೀದಿಗಾಗಿ ಬುಕ್ಕಿಂಗ್ ಆರಂಭವಾಗಿದೆ. ಬಿಎಸ್-6 ಕವಾಸಕಿ ನಿಂಜಾ 300 ಬೈಕ್ ಇದರ ಹಿಂದಿನ ಬಿಎಸ್ 4 ಮಾದರಿಯನ್ನು ಹೋಲುತ್ತದೆ. ಆದರೆ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಬಿಎಸ್-6 ಕವಾಸಕಿ ನಿಂಜಾ 300 ಬೈಕ್ ಕೆಆರ್‌ಟಿ ಎಡಿಷನ್ ಎಡಿಷನ್ ಇದು ದೊಡ್ಡ ಸಾಮರ್ಥ್ಯದ ಮಾದರಿಗಳಲ್ಲಿ ಲಭ್ಯವಿರುವ ಕೆಆರ್‌ಟಿ ಆವೃತ್ತಿಯಿಂದ ಇದು ಸ್ಫೂರ್ತಿ ಪಡೆದಿದೆ. ಇನ್ನು ಯಲ್ ಟೋನ್ ಲೈಮ್ ಗ್ರೀನ್ ಜೊತೆ ಎಬೊನಿ ಮತ್ತು ಎಬೊನಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಹೊಸ ಬೈಕಿನಲ್ಲಿ ಅದೇ ಲಿಕ್ವೀಡ್ ಕೋಲ್ಡ್ ಪ್ಯಾರಲಲ್-ಟ್ವಿನ್ 296ಸಿ ಎಂಜಿನ್ ಅನ್ನು ಹೊಂದಿರುತ್ತದೆ. ಆದರೆ ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.ಈ ಎಂಜಿನ್ 11,000 ಆರ್‌ಪಿಎಂನಲ್ಲಿ ಗರಿಷ್ಠ 38.5 ಬಿಹೆಚ್‌ಪಿ ಪವರ್ ಮತ್ತು 10,000 ಆರ್‌ಪಿಎಂನಲ್ಲಿ 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್-ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಬಿಎಸ್-6 ಕವಾಸಕಿ ನಿಂಜಾ 300 ಬೈಕ್ ಒಟ್ಟಾರೆ ವಿನ್ಯಾಸವು ಅದರ ಬಿಎಸ್-4 ಮಾದರಿಯಂತೆ ಬದಲಾಗದೆ ಉಳಿಯುವ ನಿರೀಕ್ಷೆಯಿದೆ. ಅಗ್ರೇಸಿವ್ ಕಾಣುವ ಫ್ರಂಟ್ ಎಂಡ್ ವಿನ್ಯಾಸಕ್ಕಾಗಿ ಇದು ಟ್ವಿನ್-ಹೆಡ್‌ಲ್ಯಾಂಪ್ ವಿನ್ಯಾಸವನ್ನು ಮುಂದುವರಿಸಲಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಇನ್ನು ಈ ಹೊಸ ಕವಾಸಕಿ ಬೈಕಿನಲ್ಲಿ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ವಿಂಡ್‌ಸ್ಕ್ರೀನ್, ಮೌಂಟಡ್ ಫ್ರಂಟ್ ಟರ್ನ್-ಸಿಗ್ನಲ್ ಇಂಡೀಕೆಟರ್ ಪೂರ್ಣ-ಫೇರಿಂಗ್, ಪೈಲಟ್ ಲ್ಯಾಂಪ್‌ಗಳು, ಸ್ಪ್ಲಿಟ್-ಸೀಟುಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೊಂದಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಕವಾಸಕಿ ನಿಂಜಾ 300 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರುತ್ತದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಇನ್ನು ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಕವಾಸಕಿ ನಿಂಜಾ 300 ಬೈಕಿನ ಮುಂಭಾಗ 290 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಇನ್ನು ಹೊಸ ಕವಾಸಕಿ ನಿಂಜಾ 300 ಬೈಕಿನಲ್ಲಿ ಮಸ್ಕಲರ್ ಲುಕ್ ಹೊಂದಿರುವ ಎಕ್ಸಾಸ್ಟ್ ಅನ್ನು ಹೊಂದಿದೆ. ಇನ್ನು ಈ ಹೊಸ ನಿಂಜಾ 300 ಬೈಕಿನಲ್ಲಿ ಅದೇ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ವಿನ್ಯಾಸವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬಿಡುಗಡೆಯ ಸನಿಹದಲ್ಲಿ ಹೊಸ ಕವಾಸಕಿ ನಿಂಜಾ 300 ಬೈಕ್

ಬಹುನಿರೀಕ್ಷಿತ ಬಿಎಸ್-6 ಕವಾಸಕಿ ನಿಂಜಾ 300 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಹೊಸ ಕವಾಸಕಿ ನಿಂಜಾ 300 ಸೂಪರ್ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್​ಆರ್310 ಬೈಕಿಗೆ ನೇರವಾಗಿ ಪೈಪೋಟಿ ನೀಡುತ್ತದೆ.

More from DriveSpark

Article Published On: Saturday, February 27, 2021, 9:47 [IST]
English summary
BS6 Kawasaki Ninja 300 Colours Revealed Ahead of Launch. Read In kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+