ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ದೇಶಿಯ ಮಾರುಕಟ್ಟೆಯ ಅತಿ ದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಮತ್ತು ಅತಿ ದೊಡ್ಡ ದ್ಚಿಚಕ್ರ ತಯಾರಕರಾದ ಹೀರೋ ಮೋಟಾರ್ಕರ್ಪ್ ಕಂಪನಿಗಳು ಬೆಲೆ ಏರಿಕೆಯನ್ನು ಘೋಷಿಸಿದೆ. ಈ ಬೆಲೆ ಏರಿಕೆಯು ಮುಂದಿನ ತಿಂಗಳಿನಿಂದ ಜಾರಿಯಾಗಲಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಇದೀಗ ಕವಾಸಕಿ ಕಂಪನಿಯು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬೈಕ್‌ಗಳ ಬೆಲೆ ಏರಿಕೆಯನ್ನು ಘೋಷಿಸಿದೆ. ಆದರೆ ಕವಾಸಕಿ ನಿಂಜಾ 300, ಝಡ್ ಹೆಚ್2 ಮತ್ತು ಕವಾಸಕಿ ಝಡ್ಎಕ್ಸ್-10ಆರ್ ನಂತಹ ಕೆಲವು ಮಾದರಿಗಳು ಈ ಬೆಲೆ ಏರಿಕೆ ಪಡೆಯುವುದಿಲ್ಲ. ಆದರೆ ಉಳಿದ ಮಾದರಿಗಳಿಗೆ ರೂ.18,000 ವರೆಗೆ ಬೆಲೆ ಏರಿಕೆಯಾಗುತ್ತದೆ. ಹೊಸದಾಗಿ ಬಿಡುಗಡೆಯಾದ ಬಿಎಸ್ 6 ನಿಂಜಾ 300, ಈಗಾಗಲೇ ಬಿಎಸ್ 4 ಮಾದರಿಗಿಂತ ರೂ.20,000 ಹೆಚ್ಚು ದುಬಾರಿಯಾಗಿದೆ

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಇನ್ನು ಝಡ್ ಹೆಚ್2 ಮತ್ತು ಕವಾಸಕಿ ಝಡ್ಎಕ್ಸ್-10ಆರ್ ಬೈಕುಗಳು ತನ್ನ ಹಿಂದಿನ ಮಾದರಿಗಳಿಗಿಂತ ಸುಮಾರು ರೂ.1 ಲಕ್ಷ ಹೆಚ್ಚು ದುಬಾರಿಯಾಗಿದೆ, ಝಡ್ ಹೆಚ್2, ಝಡ್ ಹೆಚ್2 ಎಸ್ಇ ಮತ್ತು ಕೆಎಲ್ಎಕ್ಸ್ 110 ಮತ್ತು ಕೆಎಲ್ಎಕ್ಸ್ 140 ಜಿ ಯಂತಹ ಡರ್ಟ್ ಬೈಕುಗಳು ಕೂಡ ಯಾವುದೇ ಬೆಲೆ ಏರಿಕೆ ಪಡೆಯುವುದಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಇನ್ ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ವಾಹನಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ. ಇದರಿಂದ ಹೆಚ್ಚುವರಿ ವೆಚ್ಚವು ಖರೀದಿಸುವ ಗ್ರಾಹಕರ ಮೇಲೆ ಬೀಳುತ್ತದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಕವಾಸಕಿ ಕೊನೆಗೂ ತನ್ನ 2021ರ ನಿಂಜಾ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. 2021ರ ಕವಾಸಕಿ ನಿಂಜಾ 300 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.18 ಲಕ್ಷಗಳಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಇನ್ನು ಈ ಕವಾಸಕಿ ನಿಂಜಾ 300 ಬೈಕ್ ಖರೀದಿಗೆ ಪ್ರಿ-ಬುಕ್ಕಿಂಗ್ ಈಗ ಅಮೇಜಾನ್ ಇಂಡಿಯಾದಲ್ಲಿ ಲಭ್ಯವಿದೆ. ಆಸಕ್ತ ಖರೀದಿದಾರರು ಅಮೇಜಾನ್ ಇಂಡಿಯಾದಲ್ಲಿ ರೂ.3,000 ಮೌಲ್ಯದ ಪ್ರಿ-ಬುಕ್ಕಿಂಗ್ ಕೂಪನ್ ವೋಚರ್ ಅನ್ನು ಖರೀದಿಸಬಹುದು ಮತ್ತು ಅದನ್ನು ಕವಾಸಕಿಯ ಅಧಿಕೃತ ಡೀಲರುಗಳಲ್ಲಿ ಪಡೆದುಕೊಳ್ಳಬಹುದು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಈ ವೋಚರ್ ಅನ್ನು ಕವಾಸಕಿ ಡೀಲರ್ ಗಳ ಬಳಿ ನೀಡಿದಾಗ ಅಂತಿಮ ಪಾವತಿಯಿಂದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಈ ಕವಾಸಕಿ ನಿಂಜಾ 300 ಬೈಕನ್ನು ಬಿಎಸ್6 ಮಾಲಿನ್ಯ ನಿಯಮ ಜಾರಿಯಾಗುವ ಮುನ್ನವೇ 2019ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಿತ್ತು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಇದೀಗ ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೊಸ ಕವಾಸಕಿ ನಿಂಜಾ 300 ಬೈಕನ್ನು ನವೀಕರಿಸಿ ಬಿಡುಗಡೆಗೊಳಿಸಲಾಗಿದೆ. ಇನ್ನು ಈ ಹೊಸ ಕವಾಸಕಿ ನಿಂಜಾ 300 ಬೈಕ್ ಡೀಲರುಗಳ ಬಳಿ ತಲುಪಲು ಈಗಾಗಲೇ ಪ್ರಾರಂಭವಾಗಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಈ ಕವಾಸಕಿ ನಿಂಜಾ 300 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಅತ್ಯಂತ ಒಳ್ಳೆಯ ಮಾದರಿಯಾಗಿದೆ. ಬಿಎಸ್6 ಕವಾಸಕಿ ನಿಂಜಾ 300 ಬೈಕಿನಲ್ಲಿ ಎಂಜಿನ್ ಅನ್ನು ಬದಲಾಯಿಸಲಾಗಿಲ್ಲ. ಆದರೆ ಈ ಎಂಜಿನ್ ಅನ್ನು ನವೀಕರಿಸಲಾಗಿದೆ. ಇದು 296ಸಿಸಿ ಪ್ಯಾರೆಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಆಗಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಈ ಎಂಜಿನ್ 38.4 ಬಿಹೆಚ್‌ಪಿ ಪವರ್ ಮತ್ತು 27 ಎನ್‌ಎಂ ಪೀಕ್ ಟಾರ್ಕ್ ಅಭಿವೃದ್ಧಿಪಡಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಇದರೊಂದಿಗೆ ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಅನ್ನು ಪಡೆಯುತ್ತದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಇನ್ನು ಈ ಹೊಸ ಕವಾಸಕಿ ನಿಂಜಾ 300 ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿರುವುದರಿಂದ ಶೀಘ್ರದಲ್ಲೇ ವಿತರಣೆಯನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸುತ್ತೇವೆ. 2021ರ ಕವಾಸಕಿ ನಿಂಜಾ 300 ಬೈಕನ್ನು ಖರೀದಿಸಲು ಬಯಸುವವರು ಅಮೇಜಾನ್ ಮೂಲಕ ಕೂಡ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಏಪ್ರಿಲ್ ತಿಂಗಳಿಂದ ದುಬಾರಿಯಾಗಲಿವೆ ಜನಪ್ರಿಯ ಕವಾಸಕಿ ಬೈಕ್‌ಗಳು

ಮುಂದಿನ ತಿಂಗಳಿಂದ ಆಯ್ದ ಕವಾಸಕಿ ಸೂಪರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಲಿದೆ. ಬೆಲೆ ಏರಿಕೆಯು ಕವಾಸಕಿ ಬೈಕ್‌ಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Most Read Articles

Kannada
English summary
Kawasaki India To Increase Prices Of Its Motorcycles. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X