10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

KTM ಕಂಪನಿಯು ವಿಶೇಷ ಕೊಡುಗೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ವಿಶೇಷ ಕೊಡುಗೆಗಳು ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ KTM ಮತ್ತು Husqvarna ಬೈಕ್‌ಗಳ ಮೇಲೆ ಮಾನ್ಯವಾಗಿರುತ್ತವೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಕಂಪನಿಯು ಈ ತಿಂಗಳ 18 ರಿಂದ KTM ಅಥವಾ Husqvarna ಬೈಕ್‌ಗಳನ್ನು ಬುಕ್ ಮಾಡುವ ಗ್ರಾಹಕರಿಗೆ ಉಚಿತ ಮೂರು ವರ್ಷದ ವಾರಂಟಿ ವಿಸ್ತರಣೆಯನ್ನು (ಸ್ಟಾಂಡರ್ಡ್ ಎರಡು ವರ್ಷದ ಮೇಲೆ) ನೀಡುತ್ತಿದೆ, ಇದರೊಂದಿಗೆ ಪೂರಕವಾದ ಒಂದು ವರ್ಷದ ರೋಡ್ ಸೈಡ್ ಅಸಿಸ್ಟ್ ಮತ್ತು 50% ರಿಯಾಯಿತಿ ಅನುಭವವನ್ನು ನೀಡುತ್ತದೆ. ವಿಶೇಷ ಪ್ರಯೋಜನಗಳು ಸೀಮಿತ ಅವಧಿಗೆ ಲಭ್ಯವಿರುತ್ತವೆ, ಆದರೂ ಕಂಪನಿಯು ಕೊಡುಗೆಗಳ ಅಂತಿಮ ದಿನಾಂಕವನ್ನು ಘೋಷಿಸಿಲ್ಲ. ಮೇಲೆ ಪಟ್ಟಿ ಮಾಡಲಾದ ಪ್ರಯೋಜನಗಳ ಹೊರತಾಗಿ, ಗ್ರಾಹಕರು ಸಾಲದ ಮೊತ್ತದ ಶೇಕಡಾ 95ರ ವರೆಗಿನ ಚಿಲ್ಲರೆ ಹಣಕಾಸು ಯೋಜನೆಗಳ ಲಾಭವನ್ನು ಪಡೆಯಬಹುದು.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

KTM ಭಾರತದಲ್ಲಿ ಪ್ರಸ್ತುತ 125cc ಯಿಂದ 400cc ವ್ಯಾಪ್ತಿಯಲ್ಲಿ ಹೆಚ್ಚಿನ ಬೈಕ್‌ಗಳನ್ನು ಒಳಗೊಂಡಿದೆ. ಇವುಗಳಲ್ಲಿ125 Duke, RC125, 200 Duke, RC200, 250 Duke, 250 Adventure, 390 Duke, RC390 ಮತ್ತು 390 Adventure ಬೈಕ್‌ಗಳನ್ನು ಸೇರಿವೆ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿHusqvarna Svartpilen 250 ಮತ್ತು Vitpilen 2500 ಅನ್ನು ಸಹ ನೀಡುತ್ತದೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಇನ್ನು KTM ಭಾರತೀಯ ಮಾರುಕಟ್ಟೆಯಲ್ಲಿ ತನ್ನ RC ಸರಣಿಯಲ್ಲಿರುವ ಬೈಕ್‌ಗಳ ನ್ಯೂ ಜನರೇಷನ್ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. KTM RC ಸರಣಿಯಲ್ಲಿ RC390, RC200 ಮತ್ತು RC125 ಬೈಕ್‌ಗಳನ್ನು ಒಳಗೊಂಡಿದೆ. ಇದೀಗ KTM ಕಂಪನಿಯು ನ್ಯೂ ಜನರೇಷನ್ RC ಬೈಕ್‌ಗಳ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಮುಂಬರುವ ವಾರಗಳಲ್ಲಿ ಈ ಬೈಕ್‌ಗಳನ್ನು ಜಾಗತಿಕ ಅನಾವರಣಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಟೀಸರ್ ನಲ್ಲಿ ನ್ಯೂ ಜನರೇಷನ್ RC ಬೈಕ್‌ಗಳ ಕೆಲವು ಭಾಗಶಃ ನೋಟವನ್ನು ಮಾತ್ರ ನೀಡುತ್ತದೆ.ಈಗಿರುವ ಮಾದರಿಗಳಿಗೆ ಹೋಲಿಸಿದರೆ, ನ್ಯೂ ಜನರೇಷನ್ ಮಾದರಿಗಳು ತುಸು ದುಬಾರಿಯಾಗಿರಬಹುದು. ಇವುಗಳಿಗೆ ರೂ.7,000 ದಿಂದ ರೂ.8,000 ವರೆಗೂ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಗಳಿದೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಈ ವರದಿಗಳ ಪ್ರಕಾರ, ಹೊಸ KTM RC390 ಮತ್ತು RC200 ಬುಕ್ಕಿಂಗ್‌ಗಳನ್ನು ಈಗಾಗಲೇ ಡೀಲರ್‌ಶಿಪ್ ಮಟ್ಟದಲ್ಲಿ ಪ್ರಾರಂಭಿಸಿದೆ. ಇದಕ್ಕೆ ರೂ.1,000 ದಿಂದ ರೂ.10,000 ವರೆಗೆ ಟೋಕನ್ ಮೊತ್ತದಲ್ಲಿ ಆರಂಭಿಸಲಾಗಿದೆ. ನಂತರ ಹೊಸ ಬೈಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ಈ ಬುಕ್ಕಿಂಗ್ ಮೊತ್ತವನ್ನು ಮರುಪಾವತಿಸಲಾಗುತ್ತದೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಇನ್ನು ಸ್ಪೈ ಚಿತ್ರಗಳಿಂದ 2021ರ KTM RC ಸರಣಿಯ ಬೈಕ್‌ಗಳ ಹೊಸ ವಿನ್ಯಾಸ ಶೈಲಿಯ ಮಾಹಿತಿಗಳು ಬಹಿರಂಗವಾಗಿವೆ. ಇದು ಫೇರಿಂಗ್ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು ಮತ್ತು ವಿಶಾಲವಾದ ಎಲ್ಇಡಿ ಹೆಡ್‌ಲ್ಯಾಂಪ್‌ನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತದೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಇನ್ನು ತೀಕ್ಷ್ಣವಾದ ಮುಂಭಾಗದ ಫೇರಿಂಗ್, ಎತ್ತರದ ಹ್ಯಾಂಡಲ್‌ಬಾರ್ ಮತ್ತು ಪರಿಷ್ಕೃತ ಸೀಟ್ ನೊಂದಿಗೆ ಸುಧಾರಿತ ಏರೋಡೈನಾಮಿಕ್ ಸ್ಟೈಲಿಂಗ್ ಮತ್ತು ಸೌಕರ್ಯದ ಅಂಶಕ್ಕೆ ಹೆಚ್ಚಿನದನ್ನು ನೀಡುತ್ತದೆ. ಇನ್ನು ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ TFT ಡಿಸ್‌ಪ್ಲೇಯನ್ನು ಸ್ವಲ್ಪ ಮೇಲಕ್ಕೆ ಬದಲಾಯಿಸಲಾಗಿದೆ.ಹೊಸ RC ಸರಣಿಯಲ್ಲಿರುವ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಯುನಿಟ್ ಅನ್ನು ಪಡೆಯುತ್ತದೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಇತರ ಪ್ರಮುಖ ಅಪ್‌ಡೇಟ್‌ಗಳಲ್ಲಿ ಹೊಸ ಬಾಡಿ ಗ್ರಾಫಿಕ್ಸ್, ಸೆಂಟ್ರಲ್ ಎಲ್‌ಇಡಿ ಹೆಡ್‌ಲ್ಯಾಂಪ್, ದೊಡ್ಡ ಇಂಧನ ಟ್ಯಾಂಕ್, ಲಂಬ ಟೈಲ್‌ಲ್ಯಾಂಪ್‌ಗಳು, ಹೊಸ ವ್ಹೀಲ್ ಗಳು ಮತ್ತು ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಸೇರಿವೆ. ಡಿಸ್ಕ್ ಬ್ರೇಕ್‌ಗಳು ಮೊದಲಿಗಿಂತ ದೊಡ್ಡದಾಗಿರಬಹುದು ಮತ್ತು ಹಿಂದಿನ ಫ್ರೇಮ್ ಅನ್ನು ಪರಿಷ್ಕರಿಸಬಹುದು.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

KTM ತನ್ನ 2022ರ RC 8C ಸೂಪರ್‌ಬೈಕ್ ಅನ್ನು ಈ ತಿಂಗಳ ಆರಂಭದಲ್ಲಿ ಅನಾವರಣಗೊಳಿಸಿತು.ಈ ಕೆಟಿಎಂ RC 8C ಟ್ರ್ಯಾಕ್-ಓನ್ಲಿ ಬೈಕ್ ಆಗಿದ್ದು, ಇದರ ಮಾರಾಟವನ್ನು ವಿಶ್ವದಾದ್ಯಂತ ಕೇವಲ 100 ಯುನಿಟ್ ಗಳಿಗೆ ಸಿಮೀತಗೊಳಿಸಿದೆ. ಈ ಹೊಸ KTM RC 8C ಸೂಪರ್‌ಬೈಕ್ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಆರಂಭಿಸಿದ 4 ನಿಮಿಷ 32 ಸೆಕೆಂಡುಗಳ ಅವಧಿಯುಲ್ಲಿ ಸೋಲ್ಡ್ ಆಗಿದೆ. ಕಡಿಮೆ ಅವಧಿಯಲ್ಲಿ ಎಲ್ಲಾ 100 ಯುನಿಟ್ ಗಳು ಕೂಡ ಮಾರಾಟವಾಗಿವೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಇನ್ನು KTM RC 8C ಸೂಪರ್‌ಬೈಕಿಗೆ ನಿರೀಕ್ಷೆಗೂ ಮೀರಿದ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಸೂಪರ್‌ಬೈಕಿಗೆ ಎಂಜಿನ್ ಅನ್ನು ಡ್ಯೂಕ್ 890 ಆರ್ ಮಾದರಿಯಿಂದ ಎರವಲು ಪಡೆಯುವ ನಿರೀಕ್ಷೆಯಿದೆ. ಈ ಹೊಸ KTM ಬೈಕ್ ಏರ್ ಬಾಕ್ಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ 16 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕ್ ಅಗ್ರೇಸಿವ್ ಮತ್ತು ಸ್ಫೋರ್ಟಿ ಲುಕ್ ಅನ್ನು ಹೊಂದಿದೆ. ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕಿನಲ್ಲಿ 899 ಸಿಸಿ ಎಲ್ಸಿ8ಸಿ ಪ್ಯಾರಲಲ್-ಟ್ವಿನ್ ಡಿಒಹೆಚ್ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 128 ಬಿಹೆಚ್‍ಪಿ ಪವರ್ ಮತ್ತು 101 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

10ನೇ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸ್ಪೆಷಲ್ ಆಫರ್ ಘೋಷಿಸಿದ KTM

ಇನ್ನು 390ಸಿಸಿ ನಂತರ 790ಸಿಸಿ ಬೈಕ್ ಮಾದರಿಗಳನ್ನು ಹೊಂದಿರುವ KTM ಬ್ರ್ಯಾಂಡ್ ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ 490ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸುವ ಯೋಜನೆಯಲ್ಲಿದೆ. ಹೊಸ ಯೋಜನೆಗೆ ಪೂರಕವಾಗಿ ಈಗಾಗಲೇ ಪುಣೆಯಲ್ಲಿರುವ ಬಜಾಜ್ ಆಟೋ ಬೈಕ್ ಉತ್ಪಾದನಾ ಘಟಕದಲ್ಲಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸುತ್ತಿರುವ ಕೆಟಿಎಂ ಕಂಪನಿಯು ಹೊಸ ಬೈಕ್ ಮಾದರಿಗಳಿಗೆ ಟ್ವಿನ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಿದೆ.

Most Read Articles

Kannada
Read more on ಕೆಟಿಎಂ ktm
English summary
Ktm india celebrating 10th anniversary with special offer details
Story first published: Saturday, August 28, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X