ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 2022ರ ಆರ್‌ಸಿ 8ಸಿ ಸೂಪರ್‌ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಕೆಟಿಎಂ ಆರ್‌ಸಿ 8ಸಿ ಟ್ರ್ಯಾಕ್-ಓನ್ಲಿ ಬೈಕ್ ಆಗಿದ್ದು, ಇದನ್ನು ವಿಶ್ವದಾದ್ಯಂತ ಕೇವಲ 100 ಯುನಿಟ್ ಗಳಾಗಿ ಬಿಡುಗಡೆಗೊಳಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಈ ಹೊಸ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಮುಂದಿನ ತಿಂಗಳಿನಲ್ಲಿ 22 ರಂದು ಪ್ರಾರಂಭವಾಗಲಿದೆ. ಈ ಹೊಸ ಕೆಟಿಎಂ ಆರ್‌ಸಿ 8ಸಿ ಬೈಕಿನ ಎಂಜಿನ್ ಅನ್ನು ಡ್ಯೂಕ್ 890 ಆರ್ ಮಾದರಿಯಿಂದ ಎರವಲು ಪಡೆಯುವ ನಿರೀಕ್ಷೆಯಿದೆ. ಇದು 899 ಸಿಸಿ ಎಲ್ಸಿ8ಸಿ ಪ್ಯಾರಲಲ್-ಟ್ವಿನ್ ಡಿಒಹೆಚ್ಸಿ ಎಂಜಿನ್ ಆಗಿದೆ. ಈ ಎಂಜಿನ್ 128 ಬಿಹೆಚ್‍ಪಿ ಪವರ್ ಮತ್ತು 101 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಈ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್ ಏರ್ ಬಾಕ್ಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ 16 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕ್ ಅಗ್ರೇಸಿವ್ ಮತ್ತು ಸ್ಫೋರ್ಟಿ ಲುಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಬ್ಲ್ಯೂಪಿ ಅಪೆಕ್ಸ್ ಪ್ರೊ ಅಪ್ ಸೈಡ್ ಪೋರ್ಕ್ ಸಸ್ಪೆಂಕ್ಷನ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದನ್ನು ಸಂಪೂರ್ಣವಾಗಿ ಅಡಜೆಸ್ಟ್ ಮಾಡಬಹುದು. ಇನ್ನು ರಿಬೌಂಡ್ ಸೆಟ್ಟಿಂಗ್‌ಗಳು ಸೇರಿವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಇನ್ನು ಈ ಸೂಪರ್‌ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ. ಇದರ ಬ್ರೇಕಿಂಗ್ ಅನ್ನು ಮೋಟೋ ಜಿಪಿ-ಪಡೆದ ಬ್ರೆಂಬೊ ಸಿಸ್ಟಮ್ ನಿರ್ವಹಿಸುತ್ತದೆ. ರೈಡರ್ಸ್ ಮೂರು ಬ್ರೇಕಿಂಗ್ ಮೋಡ್‌ಗಳ ನಡುವೆ ಆಯ್ಕೆ ಮಾಡಬಹುದು. ಇದು ನಾರ್ಮಲ್, ಸ್ಪೋರ್ಟ್ ಮತ್ತು ರೇಸ್ ಆಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್ ಫುಟ್‌ರೆಸ್ಟ್‌ಗಳು, ಹ್ಯಾಂಡಲ್‌ಬಾರ್‌ಗಳು ಮತ್ತು ಫೋರ್ಕ್ ಸೆಟ್‌ನಲ್ಲಿ 2 ಎಂಎಂ ವ್ಯತ್ಯಾಸಗಳು ಪ್ರಸ್ತಾಪದಲ್ಲಿರುವ ಇತರ ವೈಶಿಷ್ಟ್ಯಗಳಾಗಿವೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ-ಎಲ್‌ಸಿಡಿ ಡಿಸ್ ಪ್ಲೇಯನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಇನ್ನು ಈ ಸೂಪರ್‌ಬೈಕಿನಲ್ಲಿ ಎಂಜಿನ್ ಕಾರ್ಯಕ್ಷಮತೆ, ಇಸಿಯು ಸೆಟ್ಟಿಂಗ್‌ಗಳು ಮತ್ತು ಲ್ಯಾಪ್ ಟೈಮಿಂಗ್‌ಗಳನ್ನು ಲಾಗ್ ಮಾಡಲು ಅನುಮತಿಸುತ್ತದೆ. ಡಿಸ್ ಪ್ಲೇಯಲ್ಲಿ ಸ್ಪೀಡ್, ಟ್ರ್ಯಾಕ್‌ನಲ್ಲಿ ಸ್ಥಾನ, ಲ್ಯಾಪ್ ಸಮಯಗಳು, ಥ್ರೊಟಲ್ ಸ್ಥಾನಗಳು ಮತ್ತು ಹೆಚ್ಚಿನವುಗಳಂತಹ ಮಾಹಿತಿಯನ್ನು ಸಹ ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ತನ್ನ 790 ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಈ ಹೊಸ 790 ಅಡ್ವೆಂಚರ್ ಬೈಕನ್ನು ಕೆಟಿಎಂ ಬಿಡುಗಡೆಗೊಳಿಸಲು ಮುಂದಾಗಿದೆ. ಇನ್ನು ಹೊಸ ಕೆಟಿಎಂ 790 ಅಡ್ವೆಂಚರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಅಡ್ವೆಂಚರ್ ಬೈಕ್‌ಗಳಲ್ಲಿ ಒಂದಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕ್

2022ರ ಕೆಟಿಎಂ ಆರ್‌ಸಿ 8ಸಿ ಸೂಪರ್‌ಬೈಕನ್ನು ಖರೀದಿಸುವ 25 ವಿಶೇಷ ಗ್ರಾಹಕರು ಸ್ಪೇನ್‌ನ ಜೆರೆಜ್ ಸರ್ಕ್ಯೂಟ್‌ನಲ್ಲಿ ಡ್ಯಾನಿ ಪೆಡ್ರೊಸಾ ಮತ್ತು ಮಿಕಾ ಕ್ಯಾಲಿಯೊ ಅವರೊಂದಿಗೆ ವಿಶೇಷ ಕಾರ್ಯಕ್ರಮದಲ್ಲಿ ರೈಡ್ ಮಾಡುವ ಅವಕಾಶವನ್ನು ಆರಿಸಿಕೊಳ್ಳಬಹುದು.

Most Read Articles

Kannada
Read more on ಕೆಟಿಎಂ ktm
English summary
2022 KTM RC 8C Track-only Superbike Unveiled. Read In Kannada.
Story first published: Thursday, July 22, 2021, 12:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X