ಬಿದಿರಿನಿಂದ ತಯಾರಾದ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಲೈಟ್‌ಸ್ಪೀಡ್ ಮೊಬಿಲಿಟಿ

ಅಹಮದಾಬಾದ್ ಮೂಲದ ಇ-ಬೈಸಿಕಲ್ ತಯಾರಕ ಕಂಪನಿಯಾದ ಲೈಟ್‌ಸ್ಪೀಡ್ ಮೊಬಿಲಿಟಿ, ಎಲೆಕ್ಟ್ರಿಕ್ ಹಾಗೂ ಪೆಡಲ್ ಚಾಲಿತ ಮೊಪೆಡ್‌ಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈಗ ಕಂಪನಿಯು ಭಾರತದಲ್ಲಿ ಬಂಬುಚಿ ಎಂಬ ಹೊಸ ಇ-ಬೈಸಿಕಲ್ ಅನ್ನು ಬಿಡುಗಡೆಗೊಳಿಸಿದೆ.

ಬಿದಿರಿನಿಂದ ತಯಾರಾದ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಲೈಟ್‌ಸ್ಪೀಡ್ ಮೊಬಿಲಿಟಿ

ಈ ಇ-ಬೈಸಿಕಲ್'ನಲ್ಲಿರುವ ಫ್ರೇಮ್ ಪೂರ್ತಿಯಾಗಿ ಬಿದಿರಿನಿಂದ ತಯಾರಿಸಲ್ಪಟ್ಟಿದೆ. ಈ ಕಾರಣಕ್ಕಾಗಿಯೇ ಈ ಇ-ಬೈಸಿಕಲ್'ಗೆ ಬಂಬುಚಿ ಎಂದು ಹೆಸರಿಡಲಾಗಿದೆ. ಬಿದಿರಿಗೆ ಇಂಗ್ಲೀಷ್'ನಲ್ಲಿ ಬಂಬು ಎಂದು ಕರೆಯಲಾಗುತ್ತದೆ. ಅಲ್ಯೂಮಿನಿಯಂ ಬದಲಿಗೆ ಬಿದಿರನ್ನು ಬಳಸಿರುವುದರಿಂದ ಈ ಇ-ಬೈಸಿಕಲ್ ತೂಕವು ಹಗುರವಾಗಿದೆ.

ಬಿದಿರಿನಿಂದ ತಯಾರಾದ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಲೈಟ್‌ಸ್ಪೀಡ್ ಮೊಬಿಲಿಟಿ

ಅಲ್ಯೂಮಿನಿಯಂ ಬದಲಿಗೆ ಬಿದಿರನ್ನು ಬಳಸಿರುವುದರಿಂದ ಈ ಬೈಸಿಕಲ್ ಹೆಚ್ಚು ಕಾಲ ಬಾಳಿಕೆ ಬರಲಿದೆ ಎಂದು ಲೈಟ್‌ಸ್ಪೀಡ್ ಮೊಬಿಲಿಟಿ ಕಂಪನಿಯು ತಿಳಿಸಿದೆ. ಬಿದಿರಿನಿಂದ ತಯಾರಾದ ಈ ಬೈಸಿಕಲ್ ಅಲ್ಯೂಮಿನಿಯಂಗಿಂತ ಬಲಶಾಲಿಯಾಗಿದೆ ಎಂದು ಹೇಳಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬಿದಿರಿನಿಂದ ತಯಾರಾದ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಲೈಟ್‌ಸ್ಪೀಡ್ ಮೊಬಿಲಿಟಿ

ವರದಿಗಳ ಪ್ರಕಾರ, ಲೈಟ್‌ಸ್ಪೀಡ್ ಮೊಬಿಲಿಟಿ ಕಂಪನಿಯು ಈ ಬೈಸಿಕಲ್ ಅನ್ನು ಬುಕ್ಕಿಂಗ್ ಗಳನ್ನು ಪಡೆದು ತಯಾರಿಸಲಿದೆ. ಬುಕ್ಕಿಂಗ್ ಮಾಡುವಾಗ ಈ ಬೈಸಿಕಲ್ ಎಷ್ಟು ತೂಕವನ್ನು ಹೊಂದಿರಬೇಕು ಎಂಬುದನ್ನು ತಿಳಿಸಬೇಕಾಗುತ್ತದೆ.

ಬಿದಿರಿನಿಂದ ತಯಾರಾದ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಲೈಟ್‌ಸ್ಪೀಡ್ ಮೊಬಿಲಿಟಿ

ನಂತರ ಈ ಬೈಸಿಕಲ್ ಅನ್ನು ಬಲಶಾಲಿಯಾದ ಬಿದಿರಿನಿಂದ ತಯಾರಿಸಲಾಗುತ್ತದೆ. ಕಂಪನಿಯು ತನ್ನ ಗ್ರಾಹಕರ ಇಚ್ಚೆಗೆ ಅನುಸಾರವಾಗಿ ಕಾರ್ಬನ್ ಫೈಬರ್ ಫ್ರೇಮ್‌ಗಳನ್ನು ನೀಡಲಿದೆ ಎಂದು ವರದಿಯಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಿದಿರಿನಿಂದ ತಯಾರಾದ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಲೈಟ್‌ಸ್ಪೀಡ್ ಮೊಬಿಲಿಟಿ

ಲೈಟ್‌ಸ್ಪೀಡ್ ಮೊಬಿಲಿಟಿ ಕಂಪನಿಯು ಈ ಬೈಸಿಕಲ್'ನಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಅಳವಡಿಸಲಿದೆ. ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಬೈಸಿಕಲ್ 70 ಕಿ.ಮೀಗಳವರೆಗೆ ಚಲಿಸುತ್ತದೆ.

ಬಿದಿರಿನಿಂದ ತಯಾರಾದ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಲೈಟ್‌ಸ್ಪೀಡ್ ಮೊಬಿಲಿಟಿ

ಕೇವಲ 15 ಕೆ.ಜಿ ತೂಕವನ್ನು ಹೊಂದಿರುವ ಈ ಬೈಸಿಕಲ್'ನ ಬೆಲೆ ರೂ.1.5 ಲಕ್ಷಗಳಾಗಿದೆ. ಕಂಪನಿಯು ತನ್ನ ಸಾಮಾನ್ಯ ಸ್ಮಾರ್ಟ್ ಬೈಕ್‌ಗಳನ್ನು ರೂ.13 ಸಾವಿರದಿಂದ ರೂ.25 ಸಾವಿರಗಳವರೆಗೆ ಮಾರಾಟ ಮಾಡುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಿದಿರಿನಿಂದ ತಯಾರಾದ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಲೈಟ್‌ಸ್ಪೀಡ್ ಮೊಬಿಲಿಟಿ

ಲೈಟ್‌ಸ್ಪೀಡ್ ಮೊಬಿಲಿಟಿ ಕಂಪನಿಯು ಇದೇ ಮೊದಲ ಬಾರಿಗೆ ಬಿದಿರಿನಿಂದ ಬೈಸಿಕಲ್ ತಯಾರಿಸಿ ಮಾರಾಟ ಮಾಡುತ್ತಿದೆ. ಈ ಹಿಂದೆ ಕಂಪನಿಯು ತಯಾರಿಸಿದ ಎಲ್ಲಾ ಬೈಸಿಕಲ್‌ಗಳು ಅಲ್ಯೂಮಿನಿಯಂ ಫ್ರೇಮ್‌ನಿಂದ ತಯಾರಿಸಲ್ಪಟ್ಟಿದ್ದವು.

Most Read Articles

Kannada
English summary
Lightspeed mobility launches e bicycle made with bamboo frame. Read in Kannada.
Story first published: Friday, January 1, 2021, 12:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X