ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಅಭಿವೃದ್ಧಿಪಡಿಸಿದ ಬೆಂಗಳೂರಿನ ಮಂತ್ರ ರೇಸಿಂಗ್

ಬೆಂಗಳೂರು ಮೂಲದ ಮಂತ್ರ ರೇಸಿಂಗ್ ಹೈಸ್ಪೀಡ್ ಬೈಕ್ ಮತ್ತು ಟ್ಯೂನಿಂಗ್‌ನಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದು, ಮಂತ್ರ ರೇಸಿಂಗ್ ತಂಡವು ಇದೀಗ ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿ ಹೊಸ ಸಂಚಲವನ್ನು ಮೂಡಿಸಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಮಂತ್ರ ರೇಸಿಂಗ್ ಅಭಿವೃದ್ಧಿಪಡಿಸಿರುವ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಡ್ರೈವ್‌ಸ್ಪಾರ್ಕ್ ತಂಡ ಭಾಗಿಯಾಗಿತ್ತು. ಈ ವೇಳೆ ಅನುಭವಿ ಡ್ರ್ಯಾಗ್ ರೇಸರ್ ಮತ್ತು ಹಿಲ್ ಕ್ಲೈಂಬ್ ಚಾಂಪಿಯನ್ ಬಾಬಾ ಸತಾಗೋಪನ್ ಮತ್ತು ನಾಲ್ಕು ಬಾರಿ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ ಆದ ಹೇಮಂತ್ ಮುದ್ದಪ್ಪ ಕೂಡಾ ಹೊಸ ದಾಖಲೆಗೆ ಸಾಕ್ಷಿಯಾದರು.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನ ಕಾರ್ಯಕ್ಷಮತೆ ಪರೀಕ್ಷಿಸಲು ಮಂತ್ರ ರೇಸಿಂಗ್‌ನ ಹಂತ II ಸ್ಪೋರ್ಟ್ ಪ್ಯಾಕೇಜ್ ಮತ್ತು ವೇಗವನ್ನು ಅಧಿಕೃತವಾಗಿ ಪರಿಶೀಲಿಸಲು ಬೈಕ್‌ನಲ್ಲಿ ಅಳವಡಿಸಲಾದ ಕ್ಯಾಮೆರಾಗಳೊಂದಿಗೆ ಡೇಟಾ-ಲಾಗಿಂಗ್ ಉಪಕರಣಗಳನ್ನು ಅಳವಡಿಸಲಾಗಿತ್ತು.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಜಿಪಿಎಸ್ ಆಧಾರಿತ ಕಾರ್ಯಕ್ಷಮತೆ-ಮೀಟರ್‌ಗಳು - ಡ್ರ್ಯಾಗಿ, ವೇಲೆನ್ಸ್ ಮತ್ತು ಜಿ-ಟೆಕ್ ಪ್ರೊ ಅನ್ನು ಬೈಕಿನಲ್ಲಿ ಅಳವಡಿಸಿ ಆನ್‌ಬೋರ್ಡ್ ಕ್ಯಾಮೆರಾಗೆ ಸಿಂಕ್ ಮಾಡಲಾಗಿದೆ. ಇದು ಡೇಟಾ ಲಾಗರ್ ನಿರ್ಣಾಯಕ ಫಲಿತಾಂಶವನ್ನು ತಲುಪಲು ಸಾಕಷ್ಟು ಡೇಟಾವನ್ನು ಸೆರೆಹಿಡಿದಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಕೇವಲ 5.53 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕ್ವಾರ್ಟರ್ ಮೈಲಿ 13.93 ಸೆಕೆಂಡುಗಳಲ್ಲಿ 174 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಮಂತ್ರ ರೇಸಿಂಗ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಗಾಗಿ ಹಲವಾರು ಕಾರ್ಯಕ್ಷಮತೆಯ ಭಾಗಗಳನ್ನು ಅಭಿವೃದ್ಧಿಪಡಿಸಿದೆ. ಭಾಗಗಳನ್ನು ಪ್ಯಾಕೇಜ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಟೇಜ್ I ಸ್ಟ್ರೀಟ್, ಸ್ಟೇಜ್ I ಸ್ಟ್ರೀಟ್ ಪ್ಲಸ್, ಸ್ಟೇಜ್ II ಸ್ಪೋರ್ಟ್, ಸ್ಟೇಜ್ II ಸ್ಪೋರ್ಟ್ ಪ್ಲಸ್ ಎಂಬ ನಾಲ್ಕು ಪ್ಯಾಕೇಜ್‌ಗಳನ್ನು ಮಂತ್ರ ರೇಸಿಂಗ್ ನೀಡುತ್ತದೆ

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಸ್ಟೇಜ್ I ಸ್ಟ್ರೀಟ್

ಸ್ಟೇಜ್ I ಸ್ಟ್ರೀಟ್ ಪ್ಯಾಕೇಜ್ ನಲ್ಲಿ (ಟಿಬಿಎಂ) ಕಾರ್ಯಕ್ಷಮತೆ ಏರ್ ಫಿಲ್ಟರ್, ಡಿ-ರೆಸ್ಟ್ರಕ್ಟರ್ ಪ್ಲೇಟ್ ಮತ್ತು ಹೆಚ್ಚಿನ ಗಾಳಿಯ ಹರಿವನ್ನು ಹೊಂದಿಸಲು ಇಸಿಯು ಒಳಗೊಂಡಿರುವ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಗಳ ಮೂಲ ಕಾರ್ಯಕ್ಷಮತೆ ಪ್ಯಾಕೇಜ್ ಆಗಿದೆ ಸ್ಟೇಜ್ ಐ ಸ್ಟ್ರೀಟ್ ಪ್ಯಾಕೇಜ್ ಹೊಂದಿರುವ ಬೈಕ್ ಗಳು ಸ್ಟಾಕ್ ಎಕ್ಸಾಸ್ಟ್ ಸಿಸ್ಟಂ ಅನ್ನು ಬಳಸಿಕೊಳ್ಳುತ್ತವೆ ಮತ್ತು ಎಂಜಿನ್ ವೇಗವು 7,400 ಆರ್ಪಿಎಂನಲ್ಲಿ ಸ್ಟಾಕ್ ಆಗಿ ಉಳಿದಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಈ ಟ್ಯೂನ್ ನಲ್ಲಿ 45.59 ಬಿಹೆಚ್‍ಪಿ ಪವರ್ ಮತ್ತು 56.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 0.4 ಬಿಹೆಚ್‍ಪಿ ಮತ್ತು 0.1 ಎನ್ಎಂ ಸ್ಟಾಕ್ ಬೈಕ್ ಗಿಂತ ಹೆಚ್ಚಾಗಿದೆ. ಇನ್ನು ಎಂಜಿನ್ 2.2 ಬಿಹೆಚ್‍ಪಿ ಮತ್ತು 3.2 ಎನ್ಎಂ ಟಾರ್ಕ್ ಓವರ್ ಸ್ಟ್ಯಾಂಡರ್ಡ್ ಅನ್ನು ಉತ್ಪಾದಿಸುತ್ತದೆ. 4,000 ರಿಂದ 6,000 ಆರ್ಪಿಎಂ ನಡುವೆ ಇದು 6.39 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಮಾದರಿಯು ಸ್ಟಾಕ್ ಬೈಕ್ ಗಿಂತ ಕ್ವಾರ್ಟರ್ ಮೈಲಿ ವೇಗವನ್ನು 14.85 ಸೆಕೆಂಡುಗಳಲ್ಲಿ ಪಡೆದುಕೊಳ್ಳುತ್ತದೆ. ಇದು ಸ್ಟಾಕ್ ಬೈಕ್ ಗಿಂತ 0.26 ಸೆಕೆಂಡುಗಳ ವೇಗವಾಗಿರುತ್ತದೆ. ಸ್ಟೇಜ್ ಐ ಸ್ಟ್ರೀಟ್‌ನ ಬೆಲೆಯು ರೂ.18,000 (ಜಿಎಸ್‌ಟಿ ಸೇರಿದಂತೆ) ಗಳಾಗಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಸ್ಟೇಜ್ I ಸ್ಟ್ರೀಟ್ ಪ್ಲಸ್

ಸ್ಟೇಜ್ I ಸ್ಟ್ರೀಟ್ ಹೋಲಿಸಿದರೆ ಈ ಕಾರ್ಯಕ್ಷಮತೆ ಪ್ಯಾಕೇಜ್ ಸ್ವಲ್ಪ ಹೆಚ್ಚು ಸುಧಾರಿತವಾಗಿದೆ. ಇದು ಟಿಬಿಎಂ ಕಾರ್ಯಕ್ಷಮತೆಯ ಏರ್ ಫಿಲ್ಟರ್, ಡಿ-ರೆಸ್ಟ್ರಕ್ಟರ್ ಪ್ಲೇಟ್, ಟ್ವಿನ್ ಸ್ಲಿಪ್-ಆನ್ ಎಇಯು ಟಿ -102 ಎಕ್ಸಾಸ್ಟ್ ಸಿಸ್ಟಂ, ಮತ್ತು ಈ ಕಾರ್ಯಕ್ಷಮತೆಯ ಭಾಗಗಳಿಂದ ಗರಿಷ್ಠ ಪವರ್ ಅನ್ನು ಉತ್ಪಾದಿಸುವಂತೆ ಇಸಿಯುನೊಂದಿಗೆ ಬರುತ್ತದೆ. ಸ್ಟಾಕ್ ಬೈಕಿನಲ್ಲಿ ಕಂಡುಬರುವಂತೆ ರೆವ್-ಮಿತಿ ಇನ್ನೂ 7,400 ಆರ್‌ಪಿಎಂನಲ್ಲಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಈ ಟ್ಯೂನಿಂಗ್ ನಲ್ಲಿ ಇದು 46.39 ಬಿಹೆಚ್‍ಪಿ ಮತ್ತು 59 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮಾದರಿಯು 1.2 ಬಿಹೆಚ್‍ಪಿ ಮತ್ತು 2.3 ಎನ್ಎಂ ಸ್ಟಾಕ್ ಬೈಕ್ ಗಿಂತ ಹೆಚ್ಚು ಉತ್ಪಾದಿಸುತ್ತದೆ. ಈ ಬೈಕ್ 6.13 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯುತ್ತದೆ. ಇದು ಸ್ಟಾಕ್ ಬೈಕ್ ಗಿಂತ 0.56 ಸೆಕೆಂಡ್ ವೇಗ ಹೆಚ್ಚಾಗಿದೆ. ಸ್ಟೇಜ್ ಐ ಸ್ಟ್ರೀಟ್ ಪ್ಲಸ್ ಬೆಲೆಯು ರೂ.44,000 (ಜಿಎಸ್‌ಟಿ ಸೇರಿದಂತೆ) ಗಳಾಗಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಸ್ಟೇಜ್ II ಸ್ಪೋರ್ಟ್

ಈ ಸ್ಟೇಜ್ II ಸ್ಪೋರ್ಟ್ ಪ್ಯಾಕೇಜ್ ನಲ್ಲಿ ಇದು ಟಿಬಿಎಂ ಕಾರ್ಯಕ್ಷಮತೆ ಏರ್ ಫಿಲ್ಟರ್, ಡಿ-ರೆಸ್ಟ್ರಕ್ಟರ್ ಪ್ಲೇಟ್ ಮತ್ತು ವಿಶೇಷ 2-ಇನ್ -1 ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ರಾಯಲ್ ಎನ್‌ಫೀಲ್ಡ್ 650 ಟ್ವಿನ್ ತಮ್ಮ ಸ್ಟಾಕ್ ರೂಪದಲ್ಲಿ ಟ್ವಿನ್ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದ್ದು ಅದು ಉತ್ತಮವಾಗಿ ಕಾಣುತ್ತದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಎಕ್ಸಾಸ್ಟ್ ಎರಡು ಎಂಡ್-ಕ್ಯಾನ್‌ಗಳು ತಲಾ 7 ಕಿಲೋಗ್ರಾಂಗಳಷ್ಟು ತೂಕವಿದೆ. ಇದರತೂಕವನ್ನು ಕಡಿಮೆ ಮಾಡಲು ಮಂತ್ರ ರೇಸಿಂಗ್ 2-ಇನ್ -1 ಪೂರ್ಣ ಎಕ್ಸಾಸ್ಟ್ ಸಿಸ್ಟಂ ಅನ್ನು ಅಭಿವೃದ್ದಿಪಡಿಸಿದೆ. ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾದ ಉತ್ತಮವಾಗಿ ಕಾಣುವ ಮತ್ತು ಹೆಚ್ಚಿನ ಸೌಂಡ್ ನಿಂದ ಕೂಡಿದ ಎಕ್ಸಾಸ್ಟ್ ಸಿಸ್ಟಂ ಬೈಕಿನ ತೂಕವನ್ನು 9 ಕಿಲೋಗ್ರಾಂಗಳಷ್ಟು ಕಡಿಮೆ ಮಾಡಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಈ ಹಂತದಲ್ಲಿ ಬೈಕ್‌ನಲ್ಲಿ ನೀಡಲಾದ ವಿವಿಧ ಕಾರ್ಯಕ್ಷಮತೆಯ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಪರಿಪೂರ್ಣ ಟ್ಯೂನಿಂಗ್ ನೊಂದಿಗೆ ಲೋಡ್ ಮಾಡಲಾದ ಇಸಿಯು ಅನ್ನು ಪಡೆಯುತ್ತದೆ. ಎಂಜಿನ್ ರೆವ್-ಮಿತಿಯನ್ನು 200 ಆರ್ಪಿಎಂ ಹೆಚ್ಚಿಸಲಾಗಿದೆ ಮತ್ತು ಲಿಮಿಟರ್ ಈಗ 7,600 ಆರ್ಪಿಎಂಗೆ ಪ್ರಾರಂಭವಾಗುತ್ತದೆ. ಇವೆಲ್ಲವೂ ಸಂಯೋಜಿಸಿದಾಗ ಬೈಕಿನ ವರ್ತನೆಯು ಸಂಪೂರ್ಣವಾಗಿ ಬದಲಾಯಿಸುತ್ತದೆ ಮತ್ತು ಇದು ಅದ್ಭುತವಾದ ರೈಡಿಂಗ್ ಅನುಭವವನ್ನು ನೀಡುತ್ತದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಈ ಟ್ಯೂನಿಂಗ್ ನಲ್ಲಿ ಬೈಕ್ 50.42 ಬಿಹೆಚ್‍ಪಿ ಮತ್ತು 60.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸ್ಟಾಕ್ ಬೈಕ್ ಗಿಂತಲೂ 5.23 ಬಿಹೆಚ್‍ಪಿ ಮತ್ತು 3.5 ಎನ್ಎಂ ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಈ ಬೈಕ್ ಕೇವಲ 5.53 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯುತ್ತದೆ. ಇದು ಸ್ಟಾಕ್ ಬೈಕ್ ಗಿಂತ 1.16 ಸೆಕೆಂಡುಗಳ ವೇಗ ಹೆಚ್ಚಿದೆ. ಇನ್ನು ಸ್ಟೇಜ್ II ಸ್ಪೋರ್ಟ್ ಬೆಲೆಯು ರೂ.85,000 (ಜಿಎಸ್‌ಟಿ ಸೇರಿದಂತೆ) ಗಳಾಗಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಸ್ಟೇಜ್ II ಸ್ಪೋರ್ಟ್ ಪ್ಲಸ್

ಈ ಸ್ಟೇಜ್ II ಸ್ಪೋರ್ಟ್ ಪ್ಯಾಕೇಜ್ ನಲ್ಲಿ ಕಂಡುಬರುವ ಎಲ್ಲಾ ಭಾಗಗಳೊಂದಿಗೆ ಬರುತ್ತದೆ. ಹೈ-ಲಿಫ್ಟ್ ಕ್ಯಾಮ್‌ಶಾಫ್ಟ್ ಪ್ಯಾಕೇಜ್‌ನ ಏಕೈಕ ಸೇರ್ಪಡೆಯಾಗಿದೆ. ಲಿಫ್ಟ್ ಕ್ಯಾಮ್‌ಶಾಫ್ಟ್‌ನ ಸೇರ್ಪಡೆಯನ್ನು ಗಮನದಲ್ಲಿಟ್ಟುಕೊಂಡು ಮ್ಯಾಪ್ ಮಾಡಲಾಗುವುದರಿಂದ ಇಸಿಯು ಸಹ ಬದಲಾವಣೆಗಳನ್ನು ಹೊಂದಿರುತ್ತದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಆದರೆ ಈ ಈ ಹಂತದ ಟ್ಯೂನಿಂಗ್ ಮಾಡಿದ ಬೈಕನ್ನು ಓಡಿಸಿಲ್ಲ. ಇನ್ನು ಪ್ರಸ್ತುತ ಇನ್ನೂ ಒಂದು ಹಂತವಿದೆ. ಅದು ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಖಂಡಿತವಾಗಿಯೂ ಗಮನಹರಿಸಬೇಕಾಗಿರುವ ಹಂತವೆಂದು ನಾವು ನಿರೀಕ್ಷಿಸುತ್ತೇವೆ. ಅದು ಸ್ಟೇಜ್ III ರೇಸ್ ಆಗಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಸ್ಟೇಜ್ III ರೇಸ್

ಈ ಸ್ಟೇಜ್ III ರೇಸ್ ಈ ಹಂತವು ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಅನ್ನು ಲ್ಯಾಂಡ್ ಸ್ಪೀಡ್ ರೆಕಾರ್ಡ್ ಬ್ರೇಕರ್ ಆಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಇದು ಟಿಬಿಎಂ ಪರ್ಫಾರ್ಮೆನ್ಸ್ ಏರ್ ಫಿಲ್ಟರ್, ಡಿ-ರೆಸ್ಟ್ರಕ್ಟರ್ ಪ್ಲೇಟ್, 2-ಇನ್ -1 ಎಕ್ಸಾಸ್ಟ್, ಹೈ-ಲೈಟ್ ಕ್ಯಾಮ್‌ಶಾಫ್ಟ್, ಮತ್ತು ಅಮೇರಿಕನ್ ಎಂಜಿನ್ ಮತ್ತು ಎಸ್ & ಎಸ್ ಸೈಕಲ್ಸ್‌ನಿಂದ 865 ಸಿಸಿ ದೊಡ್ಡ ಬೋರ್ ಕಿಟ್‌ನೊಂದಿಗೆ ಬರುತ್ತದೆ.ಇದು ಸುಮಾರು 217 ಸಿಸಿ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಈ ಪ್ಯಾಕೇಜ್‌ನೊಂದಿಗೆ ಬರುವ ಇಸಿಯು ಈ ಕಾರ್ಯಕ್ಷಮತೆಯ ಭಾಗಗಳಿಂದ ಉತ್ತಮವಾದದ್ದನ್ನು ಪಡೆಯಲು ಟ್ಯೂನ್ ಮಾಡಲಾಗುವುದು ಮತ್ತು ರೆವ್-ಮಿತಿಯನ್ನು 7,600 ಆರ್‌ಪಿಎಂಗೆ ಹೊಂದಿಸಲಾಗುವುದು. ಈ ಹಂತವು ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ.

ಭಾರತದ ಅತಿ ವೇಗದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್

ಸದ್ಯ ಅಭಿವೃದ್ದಿಗೊಳಿಸಲಾದ ಎಲ್ಲಾ ಹಂತವನ್ನು ಡ್ರೈವ್‌ಸ್ಪಾರ್ಕ್ ತಂಡವು ಪರೀಕ್ಷೆಗೊಳಿಸಿದ್ದು, ಅತ್ಯುತ್ತಮ ಪರ್ಫಾಮೆನ್ಸ್ ಖಾತ್ರಿಪಡಿಸುತ್ತೆ. ಅದರಲ್ಲೂ ಹೊಸ ಬೈಕಿ ತೂಕದ ಕಡಿತವು ಬೈಕ್ ಪರ್ಫಾಮೆನ್ಸ್ ಅನ್ನು ಉತ್ತಮವಾಗಿ ನಿಭಾಯಿಸಲು ಪ್ರಮುಖ ಕಾರಣವಾಗಿದ್ದು, ಕಾರ್ಯಕ್ಷಮತೆ ಅಪ್‌ಗ್ರೇಡ್ ಪ್ಯಾಕೇಜ್‌ಗಳನ್ನು ಖರೀದಿಸಲು ಬಯಸುವ ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ವಿವಿಧ ಜಾಲತಾಣಗಳ ಮೂಲಕ ಸಂಪರ್ಕಿಸಬಹುದು.

ಇಮೇಲ್ - contact@mantraracing.com ಅಥವಾ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿಯೂ ಮಂತ್ರ ರೇಸಿಂಗ್ ತಂಡವನ್ನು ಸಂಪರ್ಕಿಸಬಹುದು.

Most Read Articles

Kannada
English summary
Mantra Racing Builds The Quickest & Fastest Royal Enfield Interceptor 650. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X