Just In
- 2 hrs ago
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- 4 hrs ago
ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಫೋಕ್ಸ್ವ್ಯಾಗನ್ ಟಿಗ್ವಾನ್ ಎಸ್ಯುವಿ
- 4 hrs ago
ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ
- 5 hrs ago
ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು
Don't Miss!
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- News
ಪೆಟ್ರೋಲ್ ಪಂಪ್ಗಳಿಂದ ಪ್ರಧಾನಿ ಮೋದಿ ಫೋಟೊ ತೆರವಿಗೆ ಚುನಾವಣಾ ಆಯೋಗ ಸೂಚನೆ
- Movies
ಬಿಗ್ಬಾಸ್: ಕೊಡಲಿ ಬಳಸಿ ನಾಮಿನೇಷನ್ ಕತ್ತಿಯಿಂದ ಬಚಾವಾದ ಗೀತಾ ಭಟ್
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- Lifestyle
ಮಾರ್ಚ್ ನಲ್ಲಿದೆ ಕಷ್ಟ ನಿವಾರಿಸುವ ಫಾಲ್ಗುಣ ಅಮವಾಸ್ಯೆ, ಯಾಕಿಷ್ಟು ಮಹತ್ವ ಗೊತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹುನಿರೀಕ್ಷಿತ 2021ರ ಬಜಾಜ್ ಪಲ್ಸರ್ 180 ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 2021ರ ಪಲ್ಸರ್ 180 ಬೈಕನ್ನು ಸದ್ದಿಲ್ಲದೇ ಬಿಡುಗಡೆಗೊಳಿಸಿದೆ. ಈ ಹೊಸ ಬಜಾಜ್ ಪಲ್ಸರ್ 180 ಬೈಕಿನ ಬೆಲೆಯು ನವದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.07 ಲಕ್ಷಗಳಾಗಿದೆ.

ಇದು ಪಲ್ಸರ್ 150 ಟ್ವಿನ್ ಡಿಸ್ಕ್ ರೂಪಾಂತರದಿಂದ ಸ್ಫೂರ್ತಿ ಪಡೆದ ವಿಭಿನ್ನ ಸ್ಟೈಲಿಂಗ್‌ನೊಂದಿಗೆ ಬಿಡುಗಡೆಗೊಂದಿದೆ. ಹೊಸ ಪಲ್ಸರ್ 180 ಕ್ಲಾಸಿಕ್ ಫ್ಯಾಮಿಲಿ ಸ್ಟೈಲಿಂಗ್ ಅನ್ನು ಒಳಗೊಂಡಿದೆ. ಹೊಸ ಪಲ್ಸರ್ 180 ಬೈಕಿನಲ್ಲಿ ಇದು ಬಾಡಿ ಪ್ಯಾನೆಲ್‌ಗಳು, ಫೆಂಡರ್‌ಗಳು, ಫ್ಯೂಯಲ್ ಟ್ಯಾಂಕ್ ವಿಸ್ತರಣೆಗಳ ಮತ್ತು ಬೆಲ್ಲಿ ಪ್ಯಾನ್‌ನಲ್ಲಿ ಕಾಂಟ್ರಾಸ್ಟ್ ಗ್ರಾಫಿಕ್ ಮುಖ್ಯಾಂಶಗಳನ್ನು ಒಳಗೊಂಡಿದೆ.

2021ರ ಪಲ್ಸರ್ 180 ಬೈಕಿನಲ್ಲಿ ಎಲ್ಇಡಿ ಟೈಲ್‌ಲೈಟ್ಸ್ ಮತ್ತು ಮಲ್ಟಿ-ಸ್ಪೋಕ್ ಬ್ಲ್ಯಾಕ್ ಅಲಾಯ್ ವೀಲ್‌ಗಳ ಮೇಲೆ ಕೆಂಪು ಬಣ್ಣದ ರಿಮ್ ಟೇಪ್ ಅನ್ನು ನೀಡಿದ್ದು. ಇದರೊಂದಿಗೆ ಬಣ್ಣದ ವಿಂಡ್‌ಶೀಲ್ಡ್, ಬ್ಲ್ಯಾಕ್ ರಿಯರ್‌ವ್ಯೂ ಮಿರರ್ಸ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಸೆಟಪ್, ಸ್ಪ್ಲಿಟ್ ಗ್ರಾಬ್ ರೈಲ್ ಅನ್ನು ಹೊಂದಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೀಟ್ ಶಿಲ್ಡಡ್ ಎಕ್ಸಾಸ್ಟ್ ಸಿಸ್ಟಂ ಮತ್ತು ಬ್ಲ್ಯಾಕ್ ಸ್ಪ್ಲೀಟ್ ಸೀಟ್ ಅನ್ನು ಹೊಂದಿದೆ. ಇನ್ನು ಹೊಸ ಬಜಾಜ್ ಪಲ್ಸರ್ ಬೈಕಿನ ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕನ್ಸೋಲ್ ಅನ್ನು ಅಳವಡಿಸಲಾಗಿದೆ

ಇನ್ನು ಈ ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಬೈಕಿನ ವೇಗ, ಇಂಧನ ದಕ್ಷತೆ, ಇಂಧನ ಎಷ್ಟೂ ದೂರ ಸಾಗಲು ಇದೆ, ಸೈಡ್-ಸ್ಟ್ಯಾಂಡ್ ಅಲರ್ಟ್, ಓಡೋಮೀಟರ್ ಸರ್ವಿಸ್ ರಿಮೈಂಡರ್ ಮತ್ತು ಅನೇಕ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬಜಾಜ್ ಪಲ್ಸರ್ 180 ಬೈಕಿನಲ್ಲಿ 178.6 ಸಿಸಿ ಏರ್-ಕೂಲ್ಡ್, ಇಂಧನ-ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 17 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 14.52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

2021ರ ಬಜಾಜ್ ಪಲ್ಸರ್ 180 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ ಗಳ ಸೆಟಪ್ ಅನ್ನು ನೀಡಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದ 280 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಎಬಿಎಸ್ ಸಿಸ್ಟಂ ಅನ್ನು ನೀಡಿಸಲಾಗಿದೆ.

ಬಜಾಜ್ ಕಂಪನಿಯು ಕೊನೆಗೂ ಸದ್ದಿಲ್ಲದೇ 2021ರ ಪಲ್ಸರ್ 180 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿದೆ. ಹೊಸ ಬಜಾಜ್ ಪಲ್ಸರ್ 180 ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್‍ಟಿಆರ್ 180 ಮತ್ತು ಹೋಂಡಾ ಹಾರ್ನೆಟ್ 2.0 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಪಲ್ಸರ್ 180 ಬೈಕ್ ಡೀಲರುರುಗಳ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ಇದರ ವಿತರಣೆಯು ಆರಂಭವಾಗಬಹುದು.