ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು, ಇದೀಗ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ವಿತರಣೆಯನ್ನು ಪ್ರಾರಂಭಿಸಿದ್ದಾರೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಬೆಲೆಯು ರೂ.9,95,000 ಆಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ(BMW C 400 GT) ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಭಾರತದಲ್ಲಿ ಬಿಎಂಡಬ್ಲ್ಯು ಮೊಟೊರಾಡ್‌ನ ಮೊದಲ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಪ್ರೀಮಿಯಂ ಮಿಡ್ ಸೈಜ್ ಸ್ಕೂಟರ್ ಸಿಬಿಯು ಯುನಿಟ್ ಆಗಿ ಲಭ್ಯವಿರುತ್ತದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಆಲ್ಪೈನ್ ವೈಟ್ ಮತ್ತು ಸ್ಟೈಲ್ ಟ್ರಿಪಲ್ ಬ್ಲ್ಯಾಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಈ ದುಬಾರಿ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ ಮುಂಭಾಗದಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್, ವಿಂಡ್‌ಶೀಲ್ಡ್, ಎರಡು ಗ್ಲೌಸ್ ಕಂಪಾರ್ಟ್‌ಮೆಂಟ್‌ಗಳು, ಸಿಂಗಲ್-ಸೆಕ್ಷನ್ ಸೀಟಿನ ಅಡಿಯಲ್ಲಿ ಒಂದು ಫ್ಲೆಕ್ಸ್‌ಕೇಸ್ ಮತ್ತು ಕೀಲೆಸ್ ರೈಡ್‌ನಂತಹ ಟ್ವಿನ್-ಪಾಡ್ ಎಲ್‌ಇಡಿ ಹೆಡ್‌ಲೈಟ್ ಅನ್ನು ಹೊಂದಿದೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಈ ಫೀಚರ್ಸ್ ಗಳ ಪಟ್ಟಿಯು ಬ್ಲೂಟೂತ್-ಸಕ್ರಿಯಗೊಳಿಸಿದ 6.5-ಇಂಚಿನ ಪೂರ್ಣ-ಬಣ್ಣದ ಟಿಎಫ್ಟಿ ಸ್ಕ್ರೀನ್ ಮತ್ತು ಬಿಎಂಡಬ್ಲ್ಯು ಮೊಟೊರಾಡ್ ಮಲ್ಟಿ-ಕಂಟ್ರೋಲರ್ ಅನ್ನು ಒಳಗೊಂಡಿದೆ. ಬಿಎಂಡಬ್ಲ್ಯು ಮೋಟೊರಾಡ್ ಕನೆಕ್ಟಿವಿಟಿ ಆಪ್ ನ್ಯಾವಿಗೇಷನ್ ಕಾರ್ಯಕ್ಕೆ ಪ್ರವೇಶವನ್ನು ನೀಡುತ್ತದೆ. 400 ಜಿಟಿಯು ಸೈಡ್-ಸ್ಟ್ಯಾಂಡ್ ಮತ್ತು ಸೆಂಟರ್-ಸ್ಟ್ಯಾಂಡ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಇತ್ತೀಚೆಗೆ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಬಳಿಕ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷರಾದ ವಿಕ್ರಮ್ ಪವಾಹ್ ಅವರು ಮಾತನಾಡಿ, ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಬಿಡುಗಡೆ ಭಾರತದ ನಗರ ಚಲನಶೀಲತೆಯ ವಿಭಾಗದಲ್ಲಿ ಹೊಸ ಯುಗವನ್ನು ಘೋಷಿಸುತ್ತದೆ. ಈ ಪ್ರಗತಿಪರ ಮತ್ತು ಚುರುಕಾದ ಮಿಡ್ ಸೈಜ್ ಸ್ಕೂಟರ್ ನಗರ ಮತ್ತು ದೀರ್ಘ ಪ್ರವಾಸಕ್ಕೆ ಸೂಕ್ತವಾಗುವ ರೀತೀಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ನಗರ ಕೇಂದ್ರಿಕರಿಸಿದ ಸವಾರಿಗೆ, ಕಚೇರಿಗೆ ಪ್ರಯಾಣಕ್ಕೆ ಅಥವಾ ವಿಕೇಂಡ್ ಪ್ರಾವಸ ಎಂಜಾಯ್ ಮಾಡಲು ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಪರಿಪೂರ್ಣ ಸಂಗಾತಿ ಎಂದು ಹೇಳಿದ್ದರು. ಅದರಂತೆ ಈ ಐಷಾರಾಮಿ ಸ್ಕೂಟರ್ ಸಿಟಿ ಜನರಿಗೆ ಹೆಚ್ಚು ಸೂಕ್ತವಾದ ಮಾದರಿಯಾಗಿದೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಈ ಐಷಾರಾಮಿ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ 350 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 7,500 ಆರ್‌ಪಿಎಂನಲ್ಲಿ 33.5 ಬಿಹೆಚ್‍ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 35 ಬಿಹೆಚ್‍ಪಿ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಇನ್ನು ಈ ಸ್ಕೂಟರ್ 9.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ, ಇನ್ನು ಈ ಸ್ಕೂಟರ್ ಟಾಪ್-ಸ್ಫೀಡ್ 139 ಕಿ.ಮೀ ಆಗಿದೆ, ದುಬಾರಿ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡಬಲ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಟೈಪ್ ಸಸ್ಪೆಂಕ್ಷನ್ ಅನ್ನು ಡಬಲ್ ಸ್ಪ್ರಿಂಗ್ ಸ್ಟ್ರಟ್ಗಳೊಂದಿಗೆ ಹೊಂದಿದೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಇನ್ನು ಈ ಐಷಾರಾಮಿ ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಬಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಬಿಎಸ್ ಸಿಸ್ಟಂ ಅನ್ನು ಹೊಂದಿದೆ,

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಇನ್ನು ಬಿಎಂಡಬ್ಲ್ಯು ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ, ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಈ ಹೊಸ ಜಿ 310 ಜಿಎಸ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದೆ. ಈ 2022ರ ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲಾಕ್. ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ, ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ 2022ರ ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲ್ಯಾಕ್ ಎಂಬ ಹೊಸ ಬಣ್ಣವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಈ ಹೊಸ ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಅದರಂತೆ ಭಾರತದಲ್ಲಿ ಬಿಡುಗಡೆಯಾಗಲಿರುವ 2022ರ ಜಿ 310 ಜಿಎಸ್ ಬೈಕ್ ಕೂಡ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಈ ಜಿ 310 ಜಿಎಸ್ ಬಿಎಂಡಬ್ಲ್ಯು ಮೋಟರ್‌ರಾಡ್‌ನ ಸಣ್ಣ ವಿಭಾಗದಲ್ಲಿ ಸಾಕಷ್ಟು ಜನಪ್ರಿಯ ಕೊಡುಗೆಯಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೈಕ ಗಳಲ್ಲಿ ಒಂದಾಗಿದೆ,

ಭಾರತದಲ್ಲಿ ಐಷಾರಾಮಿ BMW C 400 GT ಸ್ಕೂಟರ್ ವಿತರಣೆ ಆರಂಭ

ಈ ಹೊಸ ಎಂಡಬ್ಲ್ಯು ಸಿ 400 ಜಿಟಿ ಭಾರತದ ಅತಿ ದುಬಾರಿ ಸ್ಕೂಟರ್ ಆಗಿದೆ, ಇದು ಪ್ರೀಮಿಯಂ ಸ್ಕೂಟರ್ ಗಳನ್ನು ಇಷ್ಟಪಡುವ ಗ್ರಾಹಕರನ್ನು ಸೆಳೆಯಬಹುದು.ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ ಮೂರು ವರ್ಷಗಳು, ಅನಿಯಮಿತ ಕಿಲೋಮೀಟರ್', ವಾರಂಟಿಯನ್ನು ನಾಲ್ಕನೇ ಮತ್ತು ಐದನೇ ವರ್ಷಕ್ಕೆ ವಿಸ್ತರಿಸುವ ಆಯ್ಕೆಯೊಂದಿಗೆ ಬರುತ್ತದೆ. ಕಂಪನಿಯು 24×7 365 ದಿನಗಳ ಪ್ಯಾಕೇಜ್‌ನೊಂದಿಗೆ ರೋಡ್ ಸೈಡ್ ಅಸಿಸ್ಟ್ ಅನ್ನು ಒಳಗೊಂಡಿರುತ್ತದೆ.

Most Read Articles

Kannada
English summary
New bmw c 400 gt premium maxi scooter deliveries commence find here all details
Story first published: Thursday, October 14, 2021, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X