ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಬಿಎಂಡಬ್ಲ್ಯು ಮೋಟರ್‌ರಾಡ್ ಕಂಪನಿಯು ಜಾಗತಿಕ ಮಟ್ಟದಲ್ಲಿ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾಗಿದೆ. ಆದರೆ ಕೆಲವರಿಗೆ ಬಿಎಂಡಬ್ಲ್ಯು ಮೋಟರ್‌ರಾಡ್ ಕಂಪನಿಯು ಸ್ಕೂಟರ್‌ಗಳನ್ನು ಮಾರಾಟ ಮಾಡುವುದರ ಬಗ್ಗೆ ಗೊತ್ತಿಲ್ಲ. ಬಿಎಂಡಬ್ಲ್ಯು ತನ್ನ ಸರಣಿಯಲ್ಲಿ ಜನಪ್ರಿಯ ಸ್ಕೂಟರ್‌ಗಳನ್ನು ಹೊಂದಿವೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಇದೀಗ ಬಿಎಂಡಬ್ಲ್ಯು ತನ್ನ ಸ್ಕೂಟರ್‌ಗಳು ಸ ಬಣ್ಣಗಳು ಮತ್ತು ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದೆ. ಇನ್ನು ಸಿಂಗಲ್-ಸಿಲಿಂಡರ್ ಹೊಂದಿರುವ ಮತ್ತು ಲಿಕ್ವಿಡ್ ಕೋಲ್ಡ್ 350 ಸಿಸಿ ಎಂಜಿನ್ ಈಗ ಹೊಸ 'ಇ-ಗ್ಯಾಸ್' ಸಿಸ್ಟಂ ಅನ್ನು ಪಡೆಯುತ್ತದೆ, ಇದು ಮೂಲಭೂತವಾಗಿ ನವೀಕರಿಸಿದ ಥ್ರೊಟಲ್-ಬೈ-ವೈರ್ ಸಿಸ್ಟಮ್ ಆಗಿದೆ. ನವೀಕರಿಸಿದ ಎಂಜಿನ್ ನಿರ್ವಹಣಾ ವ್ಯವಸ್ಥೆಯೂ ಇದೆ. ಜೊತೆಗೆ ಎಕ್ಸಾಸ್ಟ್ ಸಿಸ್ಟಂ ಅನ್ನು ನವೀಕರಿಸಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಈ ಸ್ಕೂಟರ್‌ಗಳನ್ನು ಯುರೋ 5 ಮಾಲಿನ್ಯ ನಿಯಕ್ಕೆ ಅನುಗುಣವಾಗಿ ನವೀಕರಿಸಿದೆ. ಇದೀಗ ಬಿಎಂಡಬ್ಲ್ಯು ಮೋಟರ್‌ರಾಡ್ ತನ್ನ ಮಿಡ್ ಮೈಟ್ ಸ್ಕೂಟರ್‌ಗಳಾದ ಸಿ 400 ಎಕ್ಸ್ ಮತ್ತು ಸಿ 400 ಜಿಟಿ ಸ್ಕೂಟರ್‌ಗಳನ್ನು ಅನಾವರಣಗೊಳಿಸಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಇತ್ತೀಚಿನ ಮಾದರಿಗಳು ಹೊಸ ಬಣ್ಣಗಳು ಮತ್ತು ಶೈಲಿಗಳೊಂದಿಗೆ ತಾಂತ್ರಿಕ ನವೀಕರಣಗಳಿಂದ ಪ್ರಯೋಜನ ಪಡೆಯುತ್ತವೆ. ಹೊಸ ಬಿಎಂಡಬ್ಲ್ಯು ಸಿ 400 ಎಕ್ಸ್ ಮತ್ತು ಸಿ 400 ಜಿಟಿ ಸ್ಕೂಟರ್‌ಗಳನ್ನು ಬ್ಲ್ಯಾಕ್ ಸ್ಟಾರ್ಮ್ ಮೆಟಾಲಿಕ್ ಮತ್ತು ರೇಸಿಂಗ್ ಬ್ಲೂ ಮೆಟಾಲಿಕ್ ಮ್ಯಾಟ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಈ ಹೊಸ ಬಿಎಂಡಬ್ಲ್ಯು ಸ್ಕೂಟರ್‌ಗಳನಲ್ಲಿ ಒಂದೇ ರೀತಿಯ ನವೀಕರಿಸಿದ, 350 ಸಿಸಿ ಲಿಕ್ವಿಡ್ ಕೋಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 33.5 ಬಿಹೆಚ್‍ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಬಿಎಂಡಬ್ಲ್ಯು ಸಿ 400 ಎಕ್ಸ್ ಮತ್ತು ಸಿ 400 ಜಿಟಿ ಸ್ಕೂಟರ್‌ಗಳು ಪ್ರತಿ ಗಂಟೆಗೆ 139 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಇನ್ನು ಈ ಎರಡು ಸ್ಕೂಟರ್‌ಗಳ ಎಂಜಿನ್ ಉತ್ತಮ ಥ್ರೊಟಲ್ ರೆಸ್ಪಾನ್ಸ್ ನೊಂದಿಗೆ ಸುಗುಮ ಪವರ್ ಡೆಲಿವೆರಿಗೆ ಕಾರಣವಾಗುತ್ತದೆ ಎಂದು ಬಿಎಂಡಬ್ಲ್ಯು ಹೇಳಿದೆ. ಇನ್ನು ಈ ಸ್ಕೂಟರ್‌ಗಳ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಂ ಅನ್ನು ನವೀಕರಿಸಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಭಾರತೀಯ ಮಾರುಕಟ್ಟೆಯಲ್ಲಿ , ಬಿಎಂಡಬ್ಲ್ಯು ಮೋಟರ್‌ರಾಡ್ ಇಂಡಿಯಾ ತನ್ನ ಎಂ 1000 ಆರ್‌ಆರ್ ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಭಾರತದಲ್ಲಿ ಬಿಎಂಡಬ್ಲ್ಯು ಮೋಟರ್‌ರಾಡ್ ಪರಿಚಯಿಸಿದ ಎಂ ವಿಭಾಗದ ಮೊದಲ ಮಾದರಿ ಇದಾಗಿದೆ. ಈ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಕಾಂಪಿಟೇಷನ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಇದರ ಆರಂಭಿಕ ಬೆಲೆಯು ರೂ.42 ಲಕ್ಷಗಳಾದರೆ, ಟಾಪ್ ಸ್ಪೆಕ್ ಕಾಂಪಿಟೇಷನ್ ರೂಪಾಂತರದ ಬೆಲೆಯು ರೂ.45 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಬಿಎಂಡಬ್ಲ್ಯು ಸಿ 400 ಎಕ್ಸ್, ಸಿ 400 ಜಿಟಿ ಸ್ಕೂಟರ್‌ಗಳು

ಇನ್ನು ಹೊಸ ಬಿಎಂಡಬ್ಲ್ಯು ಸಿ 400 ಎಕ್ಸ್ ಮತ್ತು ಸಿ 400 ಜಿಟಿ ಸ್ಕೂಟರ್‌ಗಳು ಹೊಸ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಬ್ರೇಕ್‌ಗಳನ್ನು ನವೀಕರಿಸಲಾಗಿದೆ ಎಂದು ಬಿಎಂಡಬ್ಲ್ಯು ಹೇಳಿದೆ, ಈ ಎರಡು ಸ್ಕೂಟರ್‌ಗಳು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
BMW C 400 X, C 400 GT Scooters Updated For 2021. Read In Kannada.
Story first published: Tuesday, March 30, 2021, 21:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X