ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕ್

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ 2022ರ ಹೈಪರ್‌ಮೋಟಾರ್ಡ್ 950 ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಹೊಸ ಡುಕಾಟಿ ಹೈಪರ್‌ಮೋಟಾರ್ಡ್ 950 ನವೀಕರಿಸಿದ ಎಂಜಿನ್‌ನೊಂದಿಗೆ ಒಂದೆರಡು ಹೊಸ ವಿನ್ಯಾಸದ ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್

ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್ ಸ್ಟ್ಯಾಂಡರ್ಡ್, ಆರ್ವಿಇ ಮತ್ತು ಎಸ್ಪಿ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಕಂಪನಿಯು ನವೀಕರಿಸಿದ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕಿನ ಎಲ್ಲಾ ಮೂರು ರೂಪಾಂತರಗಳನ್ನು ಈ ವರ್ಷ ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. 2022ರ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕಿನ ಬೆಲೆಯು ಸುಮಾರು ರೂ.12.5 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್

ಹೈಪರ್‌ಮೊಟಾರ್ಡ್ 950 ಅನ್ನು ಹಿಂದಿನ ಮಾದರಿಯಲ್ಲಿ ಬಳಸಲಾಗಿದ್ದ ಅದೇ ಎಂಜಿನ್‌ ಅನ್ನು ಹೊಂದಿದೆ. ಆದರೆ ಈ ಎಂಜಿನ್ ಅನ್ನು ನವೀಕರಿಸಲಾಗಿದೆ. ಇದು ಡೆಸ್ಮೋಡ್ರೊಮಿಕ್ ಟೆಸ್ಟಾಸ್ಟ್ರೆಟಾ ಎಲ್-ಟ್ವಿನ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ 937 ಸಿಸಿ ಎಂಜಿನ್ ಅಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್

ಈ ಎಂಜಿನ್ 9000 ಆರ್‌ಪಿಎಂನಲ್ಲಿ ಗರಿಷ್ಠ 112.6 ಬಿಹೆಚ್‌ಪಿ ಪವರ್ ಮತ್ತು 7250 ಆರ್‌ಪಿಎಂನಲ್ಲಿ 96 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್-ಅಸಿಸ್ಟ್ ಕ್ಲಚ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್

ಆರ್‌ವಿಇ ಮತ್ತು ಎಸ್‌ಪಿಗಳನ್ನು ಬೈ-ಡೈರಕ್ಷನಲ್ ಶಿಫ್ಟರ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಗಳನ್ನು ಸ್ಟ್ಯಾಂಡರ್ಡ್ ಅಗಿ ನೀಡಲಾಗಿದೆ. 2022ರ ಡುಕಾಟಿ ಹೈಪರ್‌ಮೊಟಾರ್ಡ್ 950 ಎಸ್‌ಪಿ ರೂಪಾಂತರವು ಇತರ ಎರಡು ರೂಪಾಂತರಗಳನ್ನು ಹೊರತುಪಡಿಸಿ ಹೊಸ ಲೆವಿರಿ ಪಡೆಯುತ್ತದೆ. ಟಾಪ್-ಸ್ಪೆಕ್ ರೂಪಾಂತರವು ಇತರ ರೂಪಾಂತರಗಳಿಗಿಂತ ಸುಧಾರಿತ ತಂತ್ರಜ್ಙಾನಗಳನ್ನು ಸಹ ಹೊಂದಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್

ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮುಂಭಾಗದಲ್ಲಿ 48 ಎಂಎಂ ಸಂಪೂರ್ಣ ಹೊಂದಾಣಿಕೆ (ಯುಎಸ್‌ಡಿ) ಅಪ್‌ಸೈಡ್-ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್‌ನಿಂದ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್

ಇನ್ನು ಈ ಬೈಕಿನಲ್ಲಿ 17-ಇಂಚಿನ ಮಾರ್ಚೆಸಿನಿ ಖೋಟಾ ಅಲಾಯ್ ವ್ಹೀಲ್‌ಗಳ ಜೊತೆಯಲ್ಲಿ ಉತ್ತಮ ಪೈರೆಲ್ಲಿ ಡಯಾಬ್ಲೊ ಸೂಪರ್‌ಕೋರ್ಸಾ ಎಸ್‌ಪಿ ಟೈರ್‌ಗಳೊಂದಿಗೆ ಹೊಂದಿದೆ. ಇನ್ನು ಈ ಹೊಸ ಬೈಕಿನ ಎಲ್ಲಾ ರೂಪಾಂತರಗಳಲ್ಲಿ ಲೈಟಿಂಗ್, ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಬ್ರೇಕಿಂಗ್ ಹಾರ್ಡ್‌ವೇರ್ ಒಂದೇ ಆಗಿರುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್

ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 320 ಎಂಎಂ ಸೆಮಿ-ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಜೊತೆಗೆ ರೇಡಿಯಲ್ ಮೌಂಟೆಡ್ ಮೊನೊಬ್ಲೋಕ್ ಬ್ರೆಂಬೊ ಮತ್ತು 4-ಪಾಟ್ ಕ್ಯಾಲಿಪರ್‌ಗಳಿಂದ ಕೂಡಿದೆ. ಇನ್ನು ಬೈಕಿನ ಹಿಂಭಾಗದಲ್ಲಿ 245 ಎಂಎಂ ಸಿಂಗಲ್ ಡಿಸ್ಕ್ 2 ಪಾಟ್ ಕ್ಯಾಲಿಪರ್ ನೀಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕ್

2022ರ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕನ್ನು ತನ್ನ ಹಿಂದಿನ ಮಾದರಿ ಹೋಲಿಸಿದರೆ ಕೆಲವು ಬದಲಾವಣೆಯನ್ನು ಪಡೆದುಕೊಂಡಿದೆ. ಈ ಡುಕಾಟಿ ಹೈಪರ್‌ಮೋಟಾರ್ಡ್ 950 ಬೈಕಿಗೆ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳಿವೆ. ಹೊಸ ಡುಕಾಟಿ ಹೈಪರ್‌ಮೊಟಾರ್ಡ್ 950 ಬೈಕಿಗಾಗಿ ಅಭಿಮಾನಿಗಳನ್ನು ಕಾತರದಿಂದ ಕಾಯುತ್ತಿದ್ದಾರೆ.

Most Read Articles

Kannada
Read more on ಡುಕಾಟಿ ducati
English summary
2022 Ducati Hypermotard 950 Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X