ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಸ್ಕ್ರ್ಯಾಂಬ್ಲರ್ ಸರಣಿಯಲ್ಲಿರುವ ಎರಡು ಹೊಸ ಬಿಎಸ್ 6 ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದು ಹೊಸ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್ ಮತ್ತು ಹೊಸ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕುಗಳಾಗಿವೆ.

ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಗೊಂಡ ಹೊಸ ಬೈಕುಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕಿನ ಬೆಲೆಯು ರೂ.9.80 ಲಕ್ಷಗಳಾದರೆ, ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್ ಬೈಕಿನ ಬೆಲೆಯು ರೂ.10.89 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಎರಡು ಬೈಕುಗಳು ಭಾರತೀಯ ಮಾರುಕಟ್ಟೆಗೆ ಡುಕಾಟಿಯ ಆಕರ್ಷಕ ಕೊಡುಗೆಗಳಾಗಿದೆ.

ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಇದರಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್ ಕೆಫೆ ರೇಸರ್ ಮತ್ತು ಫುಲ್ ಥ್ರೊಟ್ ರೂಪಾಂತರಗಳನ್ನು ಬದಲಾಯಿಸುತ್ತದೆ. ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಮೂಲಭೂತವಾಗಿ ಎರಡು ಮಾದರಿಗಳ ಮಿಶ್ರಣವಾಗಿದೆ, ಮತ್ತು ಕೆಫೆ ರೇಸರ್ ಶೈಲಿಯ ಸೀಟ್, ಕೆಫೆ ರೇಸರ್ ಶೈಲಿಯ ಕ್ಲಿಪ್-ಆನ್‌ಗಳಿಗಿಂತ ವಿಶಾಲವಾದ ಅಲ್ಯೂಮಿನಿಯಂ ಹ್ಯಾಂಡಲ್‌ಬಾರ್ ಮತ್ತು ಮುಂಭಾಗದಲ್ಲಿ ಮಡ್-ಗಾರ್ಡ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಇನ್ನು ಪ್ರಮುಖವಾಗಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕಿನಲ್ಲಿ 803ಸಿಸಿ, ಎಲ್-ಟ್ವಿನ್, ಎರಡು-ವಾಲ್ವ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,250 ಆರ್‌ಪಿಎಂನಲ್ಲಿ 73 ಬಿಹೆಚ್‌ಪಿ ಮತ್ತು 5,750 ಆರ್‌ಪಿಎಂನಲ್ಲಿ 66.2 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಇನ್ನು ಈ ಬೈಕ್ ನೈಗ್ಶಿಫ್ಟ್ ಸ್ಪೋಕ್ಡ್ ವ್ಹೀಲ್ ಗಳೊಂದಿಗೆ ಎಂಟಿ 60 ಟೈರ್ ಗಳನ್ನು ಹೊಂದಿವೆ. ಇನ್ನು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬ್ರ್ಯಾಕ್ ಥೀಮ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಅಗ್ರೇಸಿವ್ ಎಕ್ಸಾಸ್ಟ್ ಸಿಸ್ಟಂ ಹೊಂದಿರುವ ಪ್ರೀಮಿಯಂ ವೈಬ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್ ಅದೇ ಎನ್ ಲೈನ್ ಅನ್ನು ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್‌ನೊಂದಿಗೆ ಹಂಚಿಕೊಳ್ಳುತ್ತದೆ. ಆದರೆ ಹೊಸ ಬಣ್ಣ ಮತ್ತು ಲೆವೆರಿಯನ್ನು ಪರಿಚಯಿಸಲಾಗಿದೆ. ಇಂಧನ ಟ್ಯಾಂಕ್ ಮತ್ತು ಮಡ್‌ಗಾರ್ಡ್‌ಗಳಲ್ಲಿ ಕೆಂಪು ಮತ್ತು ಬಿಳಿ ಬಣ್ಣದೊಂದಿಗೆ ಹೊಸ "ಸ್ಪಾರ್ಕ್ಲಿಂಗ್ ಬ್ಲೂ" ಲೆವೆರಿ ಡಸರ್ಟ್ ಸ್ಲೆಡ್ ಬೈಕಿನ ಆಕರ್ಷಣೆಯನ್ನು ಹೆಚ್ಚಿಸಿದೆ.

ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಡಸರ್ಟ್ ಸ್ಲೆಡ್ ಹೆಚ್ಚು ಸಸ್ಪೆಂಕ್ಷನ್ ಟ್ರ್ಯಾವೆಲ್ ನೀಡುತ್ತದೆ, ಇದರ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲಿ ಮತ್ತು ಹಿಂಭಾಗ 200ಎಂಎಂ ಟ್ರ್ಯಾವೆಲ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಮುಂಭಾಗದ ಮಡ್‌ಗಾರ್ಡ್ ಮತ್ತು ವಿಸ್ತೃತ ಹಿಂಭಾಗದ ಫೆಂಡರ್ ಜೊತೆಗೆ ಹಿಂದಿನ ಕಾಲದ ಎಂಡ್ಯೂರೋ ಬೈಕ್‌ಗಳ ಆಫ್-ರೋಡ್ ಲುಕ್ ಅನ್ನು ನೀಡುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ ಅವರು ಮಾತನಾಡಿ, ಡುಕಾಟಿಯ ಹೊಸ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಮತ್ತು ಡಸರ್ಟ್ ಸ್ಲೆಡ್ ಅನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಅತ್ಯಾಧುನಿಕ ವಿನ್ಯಾಸವು ಎರಡು ಬೈಕ್‌ಗಳ ವ್ಯಾಪಕ ಸಂಶೋಧನೆಯನ್ನು ತೋರಿಸುತ್ತದೆ ಮತ್ತು ನಾವು ಹೊಸ ಮತ್ತು ಅನುಭವಿ ಸವಾರರು ತಮ್ಮ ರ್ರೈಡಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಸ್ಕ್ರ್ಯಾಂಬ್ಲರ್ ಹೊಂದುವ ಕನಸುಗಳನ್ನು ಈಡೇರಿಸಲು ಸುಂದರವಾದ ಅವಕಾಶವಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಡಸರ್ಟ್ ಸ್ಲೆಡ್, ನೈಟ್‌ಶಿಫ್ಟ್ ಬೈಕುಗಳು ಬಿಡುಗಡೆ

ಡುಕಾಟಿ ಸ್ಕ್ರ್ಯಾಂಬ್ಲರ್ ಸರಣಿಯಲ್ಲಿ ಡಸರ್ಟ್ ಸ್ಲೆಡ್ ಆಫ್-ರೋಡ್ ಸ್ಪೆಕ್ ಮಾದರಿಯಾಗಿದೆ. ಬಿಎಸ್ 6 ಡಸರ್ಟ್ ಸ್ಲೆಡ್‌ನಲ್ಲಿ ಬೇರೆ ಯಾವುದೇ ಬದಲಾವಣೆಗಳಿಲ್ಲ, ಮತ್ತು ಇದು 19 ಇಂಚಿನ ಮುಂಭಾಗದ ವ್ಹೀಲ್ ಪಿರೆಲ್ಲಿ ಸ್ಕಾರ್ಪಿಯಾನ್ ರ್ಯಾಲಿ ಎಸ್‌ಟಿಆರ್ ಟೈರ್‌ಗಳು ಮತ್ತು 17 ಇಂಚಿನ ಹಿಂಭಾಗದ ಸ್ಪೋಕ್ಡ್ ವ್ಹೀಲ್ ಸಂಯೋಜನೆಯೊಂದಿಗೆ ಬರುತ್ತದೆ.

Most Read Articles

Kannada
Read more on ಡುಕಾಟಿ ducati
English summary
2021 Ducati Scrambler Nightshift, Scrambler Desert Sled Launched. Read In Kananda.
Story first published: Monday, March 15, 2021, 21:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X