Just In
Don't Miss!
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಬೈಕ್ ಉತ್ಪಾದನೆ ಆರಂಭ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಪ್ಯಾನ್ ಅಮೆರಿಕ ಬೈಕನ್ನು ಇತ್ತೀಚೆಗೆ ಅಧಿಕೃತವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತು. ಈ ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಯು ಅಮೆರಿಕದ ಹಾರ್ಲೆಸ್ ಯಾರ್ಕ್, ಪೆನ್ಸಿಲ್ವೇನಿಯಾ ವೆಹಿಕಲ್ ಆಪರೇಶನ್ಸ್ ಘಟಕದಲ್ಲಿ ಹೊಸ ಪ್ಯಾನ್ ಅಮೆರಿಕ ಬೈಕನ್ನು ಬೈಕಿನ ಉತ್ಪಾದನೆಯನ್ನು ಆರಂಭಿಸಿದೆ. ಇನ್ನು ಹಾರ್ಲೆ ಡೇವಿಡ್ಸನ್ ಕಂಪನಿಯು ಪ್ಯಾನ್ ಅಮೆರಿಕ ಬೈಕನ್ನು ಯುರೋಪಿಗೆ ಮಾತ್ರವಲ್ಲ ಭಾರತ ಮತ್ತು ಏಷ್ಯಾದ ಉಳಿದ ಭಾಗಗಳಿಗೂ ಶೀಘ್ರದಲ್ಲಿಯೇ ವಿತರಿಸಲಿದೆ. ಈ ವರ್ಷಾಂತ್ಯದ ಮೊದಲು ಭಾರತಕ್ಕೆ ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಬೈಕ್ ತಲುಪಬಹುದು.

ಈ ಪ್ಯಾನ್ ಅಮೆರಿಕ ಅಡ್ವೆಂಚರ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಸ್ಪೆಷಲ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಅಡ್ವೆಂಚರ್ ಬೈಕ್ ಬಿಎಂಡಬ್ಲ್ಯು ಆರ್1250ಜಿಎಸ್ ಮಾದರಿಗೆ ನೇರವಾಗಿ ಪೈಪೋಟಿ ನೀಡುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಪ್ಯಾನ್ ಅಮೆರಿಕ ಸಂಪೂರ್ಣವಾಗಿ ಹೊಸ ಬೈಕು ಆಗಿದ್ದು, ಇದನ್ನು ಸಂಪೂರ್ಣವಾಗಿ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ, ಅಡ್ವೆಂಚರ್ ಪ್ರಿಯರಿಗಾಗಿ ಸಂಪೂರ್ಣವಾಗಿ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ.

ಈ ಹೊಸ ಬೈಕ್ ಫ್ಲಾಟ್ ಎಲ್ಇಡಿ ಹೆಡ್ ಲೈಟ್ ಅನ್ನ್ ನೀಡಿದ್ದು, ಇದು ಹೆಚ್ಚು ಪ್ರಕಾಶಮಾನವಾಗಿದೆ. ಇನ್ನು ಈ ಬೈಕಿನಲ್ಲಿ ಟೂ-ಪೀಸ್ ಸ್ಪ್ಲೀಟ್ ಸೀಟುಗಳು, ಅಪ್‌ಸ್ವೆಪ್ಟ್ ಮಫ್ಲರ್ ಮತ್ತು ಎಕ್ಸಾಸ್ಟ್ ಪೈಪ್ ಗಳು ಮತ್ತು ಇತರ ಆಕರ್ಷಕ ಮುಖ್ಯಾಂಶಗಳನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಬೈಕ್ ಮುಖ್ಯವಾಗಿ ಮ್ಯಾಟ್ ಫಿನಿಶಿಂಗ್ ನಿಂದ ಕೂಡಿದೆ. ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಅಡ್ವೆಂಚರ್ ಬೈಕ್ ಬೋಲ್ಟ್-ಆನ್ ರಿಯರ್ ಸಬ್‌ಫ್ರೇಮ್ ಮತ್ತು ಕ್ಯಾಸ್ಟ್ ಫ್ರೇಮ್‌ನಿಂದ ಆಧಾರವಾಗಿದೆ.

ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಶೋವಾದಿಂದ ಸಂಪೂರ್ಣವಾಗಿ ಹೊಂದಾಣಿಕೆಯಾಗಿದ್ದು, ಮುಂಭಾಗ ಮತ್ತು ಹಿಂಭಾಗದ ತುದಿಗಳಲ್ಲಿ ಪ್ರಿ ಲೋಡ್ ಮತ್ತು ರಿಬೌಂಡ್ ಡ್ಯಾಂಪಿಂಗ್ಗಾಗಿ ಟ್ಯೂನ್ ಮಾಡಲಾಗಿದೆ. ಇದರ ಮುಂಭಾಗದಲ್ಲಿ 47 ಎಂಎಂ ಯುಎಸ್ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಪಡೆಯುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಪ್ಯಾನ್ ಅಮೆರಿಕ ಅಡ್ವೆಂಚರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟ್ವಿನ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ 280 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಇದರಲ್ಲಿ ಮುಂಭಾಗ 17 ಇಂಚಿನ ಮತ್ತು ಹಿಂಭಾಗ 19-ಇಂಚಿನ 5-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ.

ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಬೈಕ್ 1250 ಸಿಸಿ ವಿ-ಟ್ವಿನ್ ಡಿಒಹೆಚ್‌ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8750 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಮತ್ತು 6750 ಆರ್‌ಪಿಎಂನಲ್ಲಿ 127 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಅಡ್ವೆಂಚರ್ ಬೈಕಿನ ಆಫ್-ರೋಡ್ ಮತ್ತು ಸವಾರಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಇದು ಎಲೆಕ್ಟ್ರಾನಿಕ್ ಫೀಚರ್ ಗಳನ್ನು ಒಳಗೊಂಡಿದೆ. ಇವುಗಳಲ್ಲಿ ರೈಡ್-ಬೈ-ವೈರ್, ಕಾರ್ನರಿಂಗ್ ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಅನ್ನು ಹೊಂದಿವೆ.

ಇನ್ನು ಈ ಹೊಸ ಅಡ್ವೆಂಚರ್ ಬೈಕ್ ಸ್ಪೋರ್ಟ್ಸ್, ರೈಮ್, ಆಫ್-ರೋಡ್ ಮತ್ತು ಆಫ್-ರೋಡ್ ಪ್ಲಸ್ ಎಂಬ ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ. ಸವಾರರು ತಮ್ಮ ಆದ್ಯತೆಯ ಪ್ರಕಾರ ಟಿಸಿಎಸ್, ಎಬಿಎಸ್, ಟಾರ್ಕ್ ಡೆಲಿವರಿ, ಥ್ರೊಟಲ್ ರೆಸ್ಪಾನ್ಸ್ ಮತ್ತು ಸಸ್ಪೆಂಕ್ಷನ್ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಲು ಆಫ್-ರೋಡ್ ಮೋಡ್ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸಹ ಪಡೆಯುತ್ತಾರೆ.

ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ ಬೈಕ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಭಾರತದಲ್ಲಿ ಈ ಐಷಾರಾಮಿ ಬೈಕ್ ಅಂದಾಜು ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.20 ಲಕ್ಷಗಳಿಗೆ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.