Just In
Don't Miss!
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ
ಹೀರೋ ಮೊಟೊಕಾರ್ಪ್ ಕಂಪನಿಯು ತನ್ನ ಹೊಸ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬೈಕನ್ನು ಭಾರತೀಯ ಮಾರುಕಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.08 ಲಕ್ಷಗಳಾಗಿದೆ.

ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಇತ್ತೀಚೆಗೆ 100 ಮಿಲಿಯನ್(10 ಕೋಟಿ) ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 10 ಕೋಟಿ ಯುಮಿಟ್ ಗಳನ್ನು ಉತ್ಪಾದನೆ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ 100 ಮಿಲಿಯನ್ ಉತ್ಪಾದನಾ ಮೈಲಿಗಲ್ಲಿನ ಸಂಭ್ರಮಕ್ಕಾಗಿ ಈ ಹೊಸ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಈ 100 ಮಿಲಿಯನ್ ಎಡಿಷನ್ ಬಣ್ಣದಲ್ಲಿ ಇತರ 5 ಮಾದರಿಗಳನ್ನು ಕೂಡ ಬಿಡುಗಡೆಗೊಳಿಸಲಿದೆ. ಇನ್ನು ಬಿಡುಗಡೆಗೊಂಡ ಸ್ಪೆಷಲ್ ಎಢಿಷನ್ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಮಾದರಿಯು ಕೆಂಪು ಮತ್ತು ಬಿಳಿ ಬಣ್ಣದ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ. ಈ ಬೈಕಿನ ಹೆಡ್ ಲೈಟ್ ಮಾಸ್ಕ್, ಫ್ಯೂಯಲ್ ಟ್ಯಾಂಕ್ ಮತ್ತು ಹಿಂಭಾಗದ ಬಾಡಿ ಪ್ಯಾನೆಲ್‌ಗಳಲ್ಲಿ ಕೆಂಪು ಬಣ್ಣವನ್ನು ಹೊಂದಿರುವ 100 ಮಿಲಿಯನ್ ಎಡಿಷನ್ ಮಾದರಿಗಳಲ್ಲಿ ಮಾತ್ರ ಈ ವಿಶೇಷ ಬಣ್ಣವನ್ನು ಹೊಂದಿದೆ.

ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ನಲ್ಲಿ ಅದೇ 163ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 15 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 14 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಎಂಜಿನ್ ನಲ್ಲಿ ಹೀರೋನ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಸಹ ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ದಕ್ಷತೆಯನ್ನು ಒದಗಿಸುತ್ತದೆ. ಹೀರೋ ಎಕ್ಸ್‌ಟ್ರಿಮ್ 160ಆರ್ ಬೈಕ್ ಕೇವಲ 7 ಸೆಕೆಂಡುಗಳಲ್ಲಿ 0 ದಿಂದ 60 ಕಿ.ಮೀ ಕ್ರಮಿಸುತ್ತದ.

ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಬೈಕ್ ಹಲವಾರು ಪ್ರೀಮಿಯಂ ಫೀಚರುಗಳನ್ನು ಹೊಂದಿವೆ. ಈ ಬೈಕಿನಲ್ಲಿ ಎಲ್‌ಇಡಿ ಹೆಡ್ ಲ್ಯಾಂಪ್, ಡಿಆರ್‌ಎಲ್ ಇಂಡೀಕೆಟರ್ ಮತ್ತು ಟೇಲ್ ಲೈಟ್ ಮತ್ತು ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಮಾದರಿಯಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳ ಸೆಟಪ್ ಮತ್ತು ಹಿಂಭಾಗದಲ್ಲಿ ಏಳು-ಹಂತದ ರೈಡರ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಇನ್ನು ಈ ಬೈಕಿನಲ್ಲಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅಥವಾ 130 ಎಂಎಂ ಡ್ರಮ್ ಬ್ರೇಕ್ ಗಳೊಂದಿಗೆ ಎಬಿಎಸ್ ಅನ್ನು ಹೊಂದಿದೆ. ಹೀರೋ ಎಕ್ಸ್‌ಟ್ರಿಮ್ 160ಆರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಆರ್‍ಟಿಆರ್ 160 4ವಿ, ಬಜಾಜ್ ಪಲ್ಸರ್ ಎನ್ಎಸ್ 160 ಮತ್ತು ಸುಜುಕಿ ಜಿಕ್ಸರ್ 150 ಬೈಕುಗಳಿಗೆ ಪೈಪೋಟಿ ನೀಡುತ್ತದೆ.