ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಜನಪ್ರಿಯ ದ್ವಿಚಕ ವಾಹನ ತಯಾರಕ ಕಂಪನಿಯಾದ ಜಾವಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜಾವಾ 42 ಬೈಕನ್ನು ನವೀಕರಿಸಲಾಗುತ್ತಿದೆ. ಇದರ ಭಾಗವಾಗಿ ಭಾರತದಲ್ಲಿ ಹೊಸ ಜಾವಾ 42 ಬೈಕ್ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಪೈ ಚಿತ್ರಗಳಲ್ಲಿ ಕಂಡುಬಂದಂತೆ ಹೊಸ ಜಾವಾ 42 ಬೈಕ್ ಕೆಲವು ನವೀಕರಣಗಳನ್ನು ಒಳಗೊಂಡಿದೆ. ಇದರಲ್ಲಿ ಸಂಪೂರ್ಣ ಡ್ಯುಯಲ್-ಎಕ್ಸಾಸ್ಟ್ ಸಿಸ್ಟಂ ಅನ್ನು ಒಳಗೊಂಡಿದೆ. ಇದು ಕ್ರೋಮ್ ಫಿನಿಶ್ ಅನ್ನು ಬದಲಾಯಿಸಿ ಬ್ಲ್ಯಾಕ್ ಔಟ್ ವಿನ್ಯಾಸವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕ್ ಹೆಡ್‌ಲೈಟ್‌ನ ಸುತ್ತಲಿನ ಟ್ರಿಮ್ ಮತ್ತು ಮುಂಭಾಗದ ಸಸ್ಪೆಂಕ್ಷನ್ ಬ್ಲ್ಯಾಕ್ ಬಣ್ಣಗಳ ಅಂಶವನ್ನು ಹೊಂದಿದೆ. ಇನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಇತರ ಬದಲಾವಣೆಗಳು ಅಲಾಯ್ ವ್ಹೀಲ್ ಗಳು, ಸಣ್ಣ ಫ್ಲೈಸ್ಕ್ರೀನ್ ಮತ್ತು ಪಿಲಿಯನ್ ರೈಡರ್‌ಗಾಗಿರುವ ಗ್ರ್ಯಾಬ್ ಹ್ಯಾಂಡಲ್ ಬಾರ್ ಕೂಡ ಕಪ್ಪು ಬಣ್ಣದಿಂದ ಕೂಡಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಹಿಂದಿನ ಸ್ಪೋಕ್ ವೀಲ್‌ಗಳಿಂದ ಬೈಕ್ ಅಪ್‌ಗ್ರೇಡ್ ವ್ಹೀಲ್ ಗಳನ್ನು ಪಡೆದ ಪರಿಣಾಮವಾಗಿ, 2021ರ ಜಾವಾ 42 ಬೈಕ್ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಸುಲಭವಾಗಿ ಬಳಕೆಗೆ ಬರಲಿದೆ. ಇನ್ನು ಈ ಬೈಕಿನ ಹಿಂಭಾಗದ ಸಸ್ಪೆಂಕ್ಷನ್ ನಲ್ಲಿ ಕೆಲವು ನವೀಕರಣಗಳನ್ನು ನಡೆಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಹಿಂಭಾಗದ ಬ್ರೇಕ್ ಮಾಸ್ಟರ್ ಸಿಲಿಂಡರ್ ಗಾಗಿ ಹೊಸ ಸ್ಪೇಸ್ ಅನ್ನು ನೀಡಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದನ್ನು ಹೊರತುಪಡಿಸಿದರೆ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳು ಕಂಡುಬಂದಿಲ್ಲ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕಿನಲ್ಲಿ ಅದೇ 293 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 26.2 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಜಾವಾ 42 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಹಿಂದಿನ ಮಾದರಿಯಲ್ಲಿರುವಂತೆಯೇ ಮುಂಭಾಗಕ್ಕೆ 18-ಇಂಚು ಮತ್ತು ಹಿಂಭಾಗಕ್ಕೆ 17-ಇಂಚಿನ ಅಲಾಯ್ ವ್ಹೀಲ್ ಗಳು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಹೊಸ ಜಾವಾ 42 ಬೈಕ್ ಆರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ, ಇದರಲ್ಲಿ 2 ಗ್ಲೋಸ್ ಮತ್ತು 4 ಮ್ಯಾಟ್ ಥೀಮ್‌ಗಳಿವೆ. ಇನ್ನು ಈ ಜಾವಾ 42 ಬೈಕ್ ಸಿಂಗಲ್-ಚಾನೆಲ್ ಎಬಿಎಸ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಜಾವಾ 42 ಬೈಕ್

ಜಾವಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜಾವಾ 42 ಬೈಕನ್ನು ನವೀಕರಿಸುವಲ್ಲಿ ನಿರತರಾಗಿದ್ದರೆ. ಹೊಸ ಜಾವಾ 42 ಬೈಕ್ ಹೆಚ್ಚಾಗಿ ಕಾಸ್ಮೆಟಿಕ್ ಅಪ್ಡೇಟ್ ಗಳಿಗೆ ಸೀಮಿತಗೊಳಿಸುವ ನಿರೀಕ್ಷೆಯಿದೆ. ಜಾವಾ 42 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New Jawa Forty-Two Spied Testing. Read In Kannada.
Story first published: Monday, January 18, 2021, 15:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X