ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ಐಕಾನಿಕ್ ಕೆಎಲ್ಆರ್ 650 ಅಡ್ವೆಂಚರ್ ಬೈಕನ್ನು ಮತ್ತೊಮೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಮಿಡ್ ವೈಟ್ ಅಡ್ವೆಂಚರ್ ಬೈಕ್ 2022ರ ಮಾದರಿಯಾಗಿ ಕವಾಸಕಿ ಕಂಪನಿಯು ಅನಾವರಣಗೊಳಿಸಿದೆ.

ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್ ಹೆಚ್ಚು ಮಾರ್ಡನ್ ಲುಕ್ ಅನ್ನು ಹೊಂದಿದೆ. ಇನ್ನು ಈ ಕೆಎಲ್ಆರ್ 650 ಅಡ್ವೆಂಚರ್ ಬೈಕ್ ಒರಟುತನದ ಲುಕ್ ಅನ್ನು ಹೊಂದಲು ಸರಿಯಾದ ಬಣ್ಣಗಳನ್ನು ನೀಡುವುದರಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಇದು ಹೊಸ ಸೈಡ್ ಕವರ್ ಮತ್ತು ಟೈಲ್ ಕೌಲ್ ಅನ್ನು ಸಹ ಪಡೆದಿದೆ. ಇನ್ನು ಟೈಲ್ ಲೈಟ್ ಮತ್ತು ಡ್‌ಲೈಟ್ ಈಗ ಎಲ್ಇಡಿ ಆಗಿದೆ.

ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಇನ್ನು ಈ ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಡಿಜಿಟಲ್ ಆಗಿದೆ. ಇದು ಮತ್ತು ಸ್ಪೀಡೋಮೀಟರ್, ಓಡೋಮೀಟರ್, ಡ್ಯುಯಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಕ್ಲಾಕ್ ಮತ್ತು ಇಂಡಿಕೇಟರ್ ಮಾಹಿತಿಯನ್ನು ಕೂಡ ಪ್ರದರ್ಶಿಸುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಇನ್ನು ಇದರೊಂದಿಗೆ ಎರಡು ಪವರ್ ಸಾಕೆಟ್‌ಗಳನ್ನು ಅಳವಡಿಸುವ ಆಯ್ಕೆಗಳಿವೆ. ಇನ್ನು ಕೆಎಲ್ಆರ್ 650 ಅಡ್ವೆಂಚರ್ ಸೆಮಿ-ಡಬಲ್-ಕ್ರ್ಯಾಡಲ್ ಅನ್ನು ನವೀಕರಿಸಿದೆ. ಇದರ ಸ್ವಿಂಗಾರ್ಮ್ ಈಗ ಉದ್ದವಾಗಿದೆ ಮತ್ತು ಸಬ್ ಫ್ರೇಮ್ ಈಗ ಮುಖ್ಯ ಫ್ರೇಮ್ ನೊಂದಿಗೆ ಸಂಯೋಜಿಸಲ್ಪಟ್ಟಿದೆ

ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕಿನಲ್ಲಿ 652 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಫ್ಯೂಯಲ್-ಇಂಜೆಕ್ಷನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಇನ್ನು ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ 185 ಎಂಎಂ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ದೊಡ್ಡದಾದ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಇನ್ನು ಆಫ್-ರೋಡ್ ಅಗತ್ಯತೆಗಳನ್ನು ನೋಡಿಕೊಳ್ಳಲು, ಕೆಎಲ್ಆರ್ 650 ಬೈಕಿನ ಮುಂಭಾಗ 21 ಇಂಚಿನ ಮತ್ತು 17 ಇಂಚಿನ ಹಿಂಭಾಗದ ಸ್ಪೋಕ್ ವ್ಹೀಲ್ ಗಳನು ಪಡೆಯುತ್ತದೆ. ಕವಾಸಕಿ ಕೆಎಲ್ಆರ್ 650 ಎಬಿಎಸ್ ಮತ್ತು ಎಬಿಎಸ್ ಅಲ್ಲದ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಅನಾವರಣವಾಯ್ತು ಹೊಸ ಕವಾಸಕಿ ಕೆಎಲ್ಆರ್ 650 ಅಡ್ವೆಂಚರ್ ಬೈಕ್

ಈ ಬೈಕ್ ಅಡ್ವೆಂಚರ್ ಮತ್ತು ಟ್ರಾವೆಲರ್ ರೂಪಾಂತರಗಳಾಗಿಯೂ ಲಭ್ಯವಿರುತ್ತದೆ. ಇದರ ಅಡ್ವೆಂಚರ್ ರೂಪಾಂತರ 21-ಲೀಟರ್ ಪ್ಯಾನಿಯರ್, ಎಂಜಿನ್ ಗಾರ್ಡ್ ಮತ್ತು ಎಲ್ಇಡಿ ಆಕ್ಸ್ ಲೈಟ್ ಗಳನ್ನು ಪಡೆಯುತ್ತದೆ. ಇನ್ನು ಟ್ರಾವೆಲರ್ ರೂಪಾಂತರ 42-ಲೀಟರ್ ಟಾಪ್ ಕೇಸ್ ಮತ್ತು ಎರಡು ಪವರ್ ಸಾಕೆಟ್ ಗಳನ್ನು ಪಡೆಯುತ್ತದೆ.

Most Read Articles

Kannada
English summary
Kawasaki KLR 650 Adventure Bike Makes A Comeback. Read In Kannada.
Story first published: Thursday, January 28, 2021, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X