ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

ಐಷಾರಾಮಿ ದ್ವಿಚಕ್ರ ವಾಹನಗಳ ತಯಾರಕ ಕಂಪನಿ ಕವಾಸಕಿ ತನ್ನ 2022ರ ಝಡ್900 ಸ್ಟ್ರೀಟ್‌ಫೈಟರ್ ಬೈಕನ್ನು ಯುಎಸ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2022ರ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

2022ರ ಕವಾಸಕಿ ಝಡ್900 ಬೈಕ್ ಸ್ಪಾರ್ಕ್ ಬ್ಲ್ಯಾಕ್ನೊಂದಿಗೆ ಪರ್ಲ್ ರೊಬೊಟಿಕ್ ವೈಟ್ ಮತ್ತು ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ನೊಂದಿಗ್ ಮೆಟಾಲಿಕ್ ಮ್ಯಾಟ್ ಟ್ವಿಲೈಟ್ ಬ್ಲೂ ಬಣ್ಣವನ್ನು ಪಡೆದುಕೊಂಡಿದೆ. ಹೊಸ ಬಣ್ಣಗಳ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. 2022ರ ಕವಾಸಕಿ ಝಡ್900 ಬೈಕಿನಲ್ಲಿ ಅದೇ 948 ಸಿಸಿ ಇನ್‍-ಲೈನ್ ನಾಲ್ಕು ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

ಈ ಎಂಜಿನ್ 9,500 ಆರ್‍‍‍ಪಿಎಂನಲ್ಲಿ 123 ಬಿ‍‍ಹೆಚ್‍‍ಪಿ ಪವರ್ ಮತ್ತು 7,700 ಆರ್‍‍ಪಿಎಂನಲ್ಲಿ 98.6 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

2022ರ ಕವಾಸಕಿ ಝಡ್900 ಬೈಕ್‍‍ನಲ್ಲಿ ಹೊಸ ಪವರ್ ಮೋಡ್‍ನೊಂದಿಗೆ ಇತರ ರೈಡಿಂಗ್ ಮೋಡ್‍‍ಗಳನ್ನು ನೀಡಲಾಗಿದೆ. ಇದರೊಂದಿಗೆ ಟ್ರಾಕ್ಷನ್ ಕಂಟ್ರೂಲ್, ಸ್ಟ್ರಾಂಗ್ ಫ್ರೇಮ್ ಮತ್ತು ಡನ್‍‍ಲಾಪ್ ಸ್ಪೋರ್ಟ್ಸ್‌ಮ್ಯಾಕ್ಸ್ ರೋಡ್ಸ್‌ಪೋರ್ಟ್ 2 ಟಯರ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

ಹೊಸ ಕವಸಾಕಿ ಝಡ್900 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಅದೇ 41 ಎಂಎಂ ಯು‍ಎಸ್‍‍ಡಿ ಫೋರ್ಕ್‍‍ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

ಈ ಸ್ಟ್ರೀಟ್‌ಫೈಟರ್ ಬೈಕಿನ ಬ್ರೇಕಿಂಗ್ ಸಿಸ್ಟಂನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 250 ಎಂಎಂ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

ಹೊಸ ಕವಾಸಕಿ ಝಡ್900 ಬೈಕಿನಲ್ಲಿ ಹಲವಾರು ಆತಾಧ್ಯುನಿಕ ಫೀಚರ್ಸ್‍‍ಗಳನ್ನು ಹೊಂದಿವೆ. ಇದರಲ್ಲಿ ಹೆಡ್‍‍ಲ್ಯಾಂಪ್ ಮತ್ತು ಟೇಲ್‍‍ಲೈ‍‍ಟ್‍, ಎಲ್‍ಇಡಿ ಲೈಟ್‍ಗಳು ಮತ್ತು ಎರಡು ಕಡೆಗಳಲ್ಲಿ ನವೀಕರಿಸಿದ ಸಸ್ಪೆಂಕ್ಷನ್ ಸೆಟ್ಟಿಂಗ್‍‍ಗಳನ್ನು ಹೊಂದಿವೆ.

MOST READ: ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಹೋಂಡಾ ಶೈನ್ ಬೈಕ್

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ರೈಡಿಯಾಲಜಿ ಎಂಬ ಆ್ಯಪ್ ಮೂಲಕ ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ ಹೊಂದಿರುವ ಹೊಸ 4.3 ಇಂಚಿನ ಟಿಎ‍ಫ್‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ ಕವಾಸಕಿ ಝಡ್900 ಸ್ಟ್ರೀಟ್‌ಫೈಟರ್ ಬೈಕ್

ಕವಾಸಕಿ ಝಡ್900 ಪ್ರೀಮಿಯಂ ಸ್ಟ್ರೀಟ್‌ಫೈಟರ್ ಬೈಕ್ ಆಗಿದೆ. ಕವಾಸಕಿ ಕಂಪನಿಯು ಈ ವರ್ಷದ ಕೊನೆಯಲ್ಲಿ ಈ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2022 Kawasaki Z900 Breaks Cover In New Colours. Read In Kannada.
Story first published: Wednesday, June 9, 2021, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X