2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್‌ ತನ್ನ ಜನಪ್ರಿಯ ಹಯಾಬುಸಾ ಬೈಕನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಸುಜುಕಿ ಹಯಾಬುಸಾ ಬೈಕ್ ಮುಂದಿನ ತಿಂಗಳ 5 ರಂದು ಜಾಗಾತಿಕವಾಗಿ ಅನಾವರಣವಾಗಲಿದೆ.

2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಇದೀಗ ಸುಜುಕಿ ಕಂಪನಿಯು ತನ್ನ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ವೀಡಿಯೋದಲ್ಲಿ ರೇಸರ್ ಟ್ರ್ಯಾಕ್‌ನಲ್ಲಿ ಹೊಸ ಸುಜುಕಿ ಹಯಾಬುಸಾ ಬೈಕಿನ ಪರ್ಫಾಮೆನ್ಸ್ ಮತ್ತು ಟರ್ನ್ ನಲ್ಲಿ ಉತ್ತಮ ಸ್ಥಿರತೆಯನ್ನು ಹೊಂದಿರುವುದನ್ನು ಪ್ರದರ್ಶಿಸಿದೆ. ಇನ್ನು ಈ ಟೀಸರ್ ವೀಡಿಯೋದಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಬಹಿರಂಗಪಡಿಸಿದೆ. ಇನ್ನು ಇದರೊಂದಿಗೆ ಡಿಜಿಟಲ್ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇದರ ಸ್ಕ್ರೀನ್ ಎರಡೂ ಕಡೆಗಳಲ್ಲಿ ಅನಲಾಗ್ ಟ್ಯಾಕೋಮೀಟರ್ ಮತ್ತು ಸ್ಪೀಡೋಮೀಟರ್ ಜೊತೆಗೆ ಫ್ಯೂಯಲ್ ಗೇಜ್ ಮಾಹಿತಿಯನ್ನು ಒಳಗೊಂಡಿದೆ.

2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಹೊಸ ಹಯಾಬುಸಾ ಬೈಕಿನ ಡಿಜಿಟಲ್ ಟಿಎಫ್‌ಟಿ ಡಿಸ್ ಪ್ಲೇ ವಿಭಿನ್ನ ಯುಐ ಅನ್ನು ಸಹ ಹೊಂದಿದೆ. ಇದು ಮಧ್ಯದಲ್ಲಿ ಗೇರ್ ಪೊಷಿಸನ್, ಲೀನ್ ಆಂಗಲ್, ರೈಡ್ ಮೋಡ್‌ಗಳು, ಕ್ಲಾಕ್ ಮತ್ತು ತಾಪಮಾನ ಸೇರಿದಂತೆ ಹಲವಾರು ಮಾಹಿತಿಯನ್ನು ಪ್ರದರ್ಶಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಇನ್ನು ಟ್ಯಾಕ್ಷನ್ ಕಂಟ್ರೋಲ್, ಪವರ್ ಮೋಡ್‌ಗಳು, ಲ್ಯಾಪ್ ಟೈಮರ್, ಟೈಲ್ ಲೈಟ್ ಮತ್ತು ಹೆಚ್ಚಿನವುಗಳ ಚಿಹ್ನೆಗಳನ್ನು ಈ ಟಿಎಫ್‌ಟಿ ಡಿಸ್ ಪ್ಲೇಯಲ್ಲಿ ನೋಡಬಹುದಾಗಿದೆ. ಹೊಸ ಹಯಾಬುಸಾ ಬೈಕ್ ಕಾರ್ನರಿಂಗ್ ಫೋರ್ಸಸ್, ವ್ಹೀಲಿ ಕಂಟ್ರೋಲ್ ಮತ್ತು ಐಎಂಯು ಫೀಚರ್ ಗಳನು ಒಳಗೊಂಡಿರುತ್ತದೆ.

2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಟೀಸರ್ ವೀಡಿಯೋದಲ್ಲಿ ಆನೇಕ ವಿವರಗಳನ್ನು ಬಹಿರಂಗಪಡಿಸುವುದಿಲ್ಲವಾದರೂ, 2021ರ ಸುಜುಕಿ ಹಯಾಬುಸಾದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಸುಜುಕಿ ಹಯಾಬುಸಾ ಬೈಕಿನ ವಿನ್ಯಾಸದಲ್ಲಿ ಭಾರಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಹಯಾಬುಸಾ ಅತ್ಯಂತ ಏರೋಡೈನಾಮಿಕ್ ಬೈಕ್ ಆಗಿದೆ. ಇನ್ನು ಈ ಬೈಕಿನ ಪರ್ಫಾಮೆನ್ಸ್ ಹೆಚ್ಚಿಸಲು ವಿನ್ಯಾಸದಲ್ಲಿ ಯಾವುದೇ ಬದಲಾಣೆಗಳನ್ನು ಮಾಡಲಾಗುವುದಿಲ್ಲ. ಆದರೆ ಈ ಬೈಕಿನ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್ ಅನ್ನು ನವೀಕರಿಸಬಹುದು.

2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಹೊಸ ಸುಜುಕಿ ಹಯಾಬುಸಾ ಬೈಕಿನಲ್ಲಿ ಅದೇ 1340 ಸಿಸಿ ಇನ್ಲೈನ್-ನಾಲ್ಕು-ಸಿಲಿಂಡರ್ ಡಿಒಹೆಚ್ಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಆದರೆ ಇದರ ಪರ್ಫಾಮೆನ್ಸ್ ಅನ್ನು ಹೆಚ್ಚಿಸಲು ಸ್ವಲ್ಪ ಟ್ಯೂನ್ ಮಾಡಬಹುದು. ಇನ್ನು ಮಾಲಿನ್ಯ ನಿಯಮಗಳ ಮಾನದಂಡಗಳನ್ನು ಅನುಗುಣವಾಗಿ ನವೀಕರಿಸಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹಿಂದಿನ ಮಾದರಿಯ ಎಂಜಿನ್ 195 ಬಿಹೆಚ್‌ಪಿ ಪವರ್ ಮತ್ತು 155 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಹೊಸ ಹಯಾಬುಸಾ ಬೈಕಿನಲ್ಲಿ ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ನೀಡಬಹುದು.

2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಹೊಸ ಸುಜುಕಿ ಹಯಾಬುಸಾ ಬೈಕ್ ಹೊಸ ಸಸ್ಪೆಂಕ್ಷನ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ. ಉನ್ನತ-ಸ್ಪೆಕ್ ಬ್ರೆಂಬೊ ಬ್ರೇಕಿಂಗ್ ಸೆಟಪ್ ಜೊತೆಗೆ ಎರಡೂ ಕಡೆಗಳಲ್ಲಿ ಎಲೆಕ್ಟ್ರಾನಿಕ್ ಹೊಂದಾಣಿಕೆಯ ಸಸ್ಪೆಂಕ್ಷನ್ ಯುನಿಟ್ ಅನ್ನು ನೀಡಬಹುದು.

2021ರ ಹಯಾಬುಸಾ ಬೈಕಿನ ಆಕರ್ಷಕ ಟೀಸರ್ ಬಿಡುಗಡೆಗೊಳಿಸಿದ ಸುಜುಕಿ ಮೋಟಾರ್‌ಸೈಕಲ್‌

ಹೊಸ ಸುಜುಕಿ ಹಯಾಬುಸಾ ಬೈಕ್ 1999 ರಲ್ಲಿ ಜಗತ್ತಿಗೆ ಪರಿಚಯಿಸಲ್ಪಟ್ಟ ಐಕಾನಿಕ್ ಹೈಪರ್ ಬೈಕ್‌ಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಹಯಾಬುಸಾ ಮತ್ತೊಮ್ಮೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಸಾಧಿಸಲು ಸಜ್ಜಾಗುತ್ತಿದೆ.

Most Read Articles

Kannada
English summary
2021 Suzuki Hayabusa Teased Ahead Of Unveil Next Month. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X