Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಬ್ರಿಟಿಷ್ ಮೂಲದ ಬೈಕ್ ತಯಾರಕ ಕಂಪನಿಯಾದ Triumph ತನ್ನ Tiger Sport 660 ಬೈಕ್ ಅನ್ನು ಇತ್ತೀಚೆಗೆ ಜಾಗತಿಕವಾಗಿ ಬಿಡುಗಡೆ ಮಾಡಿದೆ. Triumph Tiger ಬೈಕ್ ಕಂಪನಿಯ ಅಡ್ವೆಂಚರ್ ಸರಣಿಗೆ ಹೊಸ ಪ್ರವೇಶವಾಗಿದೆ. Tiger ಬೈಕ್ ಈ ಸರಣಿಯಲ್ಲಿರುವ ಅತ್ಯುತ್ತಮ ರಸ್ತೆ ಆಧಾರಿತ ಮಾದರಿಯಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ಈ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಆದರೆ ಯಾವಾಗ ಬಿಡುಗಡೆಗೊಳಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. Triumph ಕಂಪನಿಯು ತನ್ನ ಹೊಸ Tiger Sport 660 ಬೈಕ್ ಅನ್ನು ಭಾರತದ ತನ್ನ ವೆಬ್‌ಸೈಟ್‌ನಲ್ಲಿ ಸೇರಿಸಿದೆ ಎಂದು ವರದಿಯಾಗಿದೆ. ಈ ಹೊಸ ಬೈಕ್ ಅನ್ನು Tiger ಸರಣಿಯಲ್ಲಿ ಪ್ರವೇಶ ಮಟ್ಟದ ಮಾದರಿಯಾಗಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಈ ಬೈಕ್ Kawasaki 650 ಹಾಗೂ Suzuki V Storm 650 XT ಬೈಕ್ ಗಳಿಗೆ ಪೈಪೋಟಿ ನೀಡಲಿದೆ. ಈ ಹೊಸ ಬೈಕ್ ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ Trident 660 Roadster ಬೈಕ್ ಅನ್ನು ಆಧರಿಸಿದೆ. ಆದರೆ Tiger Sport 660 ಬೈಕ್ ಹೊಸ ವಿನ್ಯಾಸ, ವಿಭಿನ್ನ ಸಬ್ ಫ್ರೇಮ್ ಹಾಗೂ ದೀರ್ಘ ಪ್ರಯಾಣಕ್ಕಾಗಿ ಸುಧಾರಿತ ಸಸ್ಪೆಂಷನ್ ಗಳನ್ನು ಹೊಂದಿದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಈ ಮಿಡಲ್‌ವೇಟ್ ಸ್ಪೋರ್ಟ್ ಟೂರರ್ ಬೈಕ್ ಸೆಮಿ ಫೇರಿಂಗ್, ಮುಂಭಾಗದಲ್ಲಿ ದೊಡ್ಡ ವಿಂಡ್‌ಸ್ಕ್ರೀನ್, ಸ್ಟೆಪ್ ಅಪ್ ಸ್ಯಾಡಲ್, ಇಂಟಿಗ್ರೇಟೆಡ್ ಪಿಗ್ಟೇಲ್ ಮೌಂಟ್ ಹಾಗೂ ಅಂಡರ್‌ಬೆಲ್ಲಿ ಎಕ್ಸಾಸ್ಟ್‌ಗಳನ್ನು ಹೊಂದಿದೆ. ಹೊಸ Tiger Sport 660 ಬೈಕಿನಲ್ಲಿ ಪೂರ್ಣ ಪ್ರಮಾಣದ ಎಲ್ಇಡಿ ಲೈಟಿಂಗ್ ಪ್ಯಾಕೇಜ್, ಬ್ಲೂಟೂತ್ ಎನೆಬಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ರಾಕ್ಷನ್ ಕಂಟ್ರೋಲ್, ಇಂಟರ್ ಚೆಂಚೆಬಲ್ ಎಬಿಎಸ್ ಹಾಗೂ ರೇನ್ ಮತ್ತು ರೋಡ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಹೊಸ Tiger Sport 660 ಬೈಕಿನಲ್ಲಿ 660 ಸಿಸಿ, ಇನ್ಲೈನ್ ​​ಮೂರು ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 10,250 ಆರ್‌ಪಿಎಂನಲ್ಲಿ ಗರಿಷ್ಠ 80 ಬಿಹೆಚ್‌ಪಿ ಪವರ್ ಹಾಗೂ 6,250 ಆರ್‌ಪಿಎಂನಲ್ಲಿ 64 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಸುರಕ್ಷತೆಗಾಗಿ ಈ ಬೈಕಿನ ಮುಂಭಾಗದಲ್ಲಿ ಡ್ಯುಯಲ್ ಪಿಸ್ಟನ್ ನಿಸ್ಸಿನ್ ಸ್ಲೈಡಿಂಗ್ ಕ್ಯಾಲಿಪರ್‌ ಹಾಗೂ ಬ್ರೇಕಿಂಗ್ ಗಳಿಗಾಗಿ 310 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರುವ 255 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ. Triumph Tiger Sport 660 ಬೈಕಿನಲ್ಲಿ ಸ್ವಿಚ್ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್, 41 ಎಂಎಂ ಶೋವಾ ಯುಎಸ್‌ಡಿ ಫ್ರಂಟ್ ಫೋರ್ಕ್ಸ್, ಪ್ರಿಲೋಡ್ ಅಡ್ಜಸ್ಟಬಲ್ ಶೋವಾ ರೇರ್ ಮೊನೊಶಾಕ್, 835 ಎಂಎಂ ಎತ್ತರದ ಸೀಟ್ ಹಾಗೂ 17.2 ಲೀಟರ್ ಫ್ಯೂಯಲ್ ಟ್ಯಾಂಕ್ ನೀಡಲಾಗಿದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬೈಕ್ ಅನ್ನು ಲುಸೆರ್ನ್ ಬ್ಲೂ- ಸಫೈರ್ ಬ್ಲಾಕ್, ಗ್ರ್ಯಾಫೈಟ್ - ಸಫೈರ್ ಬ್ಲಾಕ್ ಹಾಗೂ ಕೊರೋಜಿ ರೆಡ್ - ಗ್ರ್ಯಾಫೈಟ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬಣ್ಣಗಳನ್ನು ಭಾರತದಲ್ಲಿ ಮಾರಾಟ ಮಾಡುವ ಮಾದರಿಗಳಲ್ಲೂ ನೀಡುವ ನಿರೀಕ್ಷೆಗಳಿವೆ. ಈ ಹೊಸ ಬೈಕಿನ ಬೆಲೆಯ ಬಗ್ಗೆ ಯಾವುದೇ ಬೆಲೆ ಮಾಹಿತಿ ಲಭ್ಯವಾಗಿಲ್ಲ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಆದರೆ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ಸುಮಾರು ರೂ. 8 ಲಕ್ಷಗಳಾಗುವ ಸಾಧ್ಯತೆಗಳಿವೆ. ಕಂಪನಿಯು ಈ ಬೈಕಿಗೆ ಎರಡು ವರ್ಷಗಳ ಅನಿಯಮಿತ ಮೈಲೇಜ್ ವಾರಂಟಿಯನ್ನು ನೀಡುತ್ತದೆ. ಈ ವಾರಂಟಿಯನ್ನು ಒಂದು ಅಥವಾ ಎರಡು ವರ್ಷಗಳವರೆಗೆ ವಿಸ್ತರಿಸುವ ಆಯ್ಕೆಯನ್ನು ಸಹ ನೀಡಲಾಗುತ್ತದೆ. ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು 16,000 ಕಿಮೀ ಅಥವಾ 12 ತಿಂಗಳ ಸೇವಾ ಮಧ್ಯಂತರಗಳನ್ನು ಸಹ ನೀಡಲಾಗುತ್ತದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

Triumph ಕಂಪನಿಯ ಇತರ ಸುದ್ದಿಗಳನ್ನು ನೋಡುವುದಾದರೆ Triumph ಕಂಪನಿಯು ತನ್ನ ಹೊಸ 2021 Street Scrambler ಬೈಕ್ ಅನ್ನು ನಾಳೆ (ಅಕ್ಟೋಬರ್ 12) ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಕಂಪನಿಯು ಈ ಬೈಕಿನ ಟೀಸರ್ ಚಿತ್ರಗಳನ್ನು ಅನಾವರಣಗೊಳಿಸಿತ್ತು. ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Triumph Street Scrambler ಬೈಕಿನ ಬೆಲೆ ಸುಮಾರು ಎಕ್ಸ್ ಶೋರೂಂ ದರದಂತೆ ರೂ. 9 ಲಕ್ಷಗಳಾಗಲಿದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಭಾರತದಲ್ಲಿ ಹೊಸ Tiger Sport 660 ಬೈಕ್ ಅನ್ನು ಅನಾವರಣಗೊಳಿಸಿದ ಕೆಲವೇ ದಿನಗಳಲ್ಲಿ 2021 Street Scrambler ಬೈಕ್ ಅನ್ನು ಬಿಡುಗಡೆಗೊಳಿಸಲಾಗುತ್ತಿದೆ. ವಿಶ್ವದಾದ್ಯಂತ Street Scrambler Sandstorm ಆವೃತ್ತಿಯ ಕೇವಲ 775 ಯೂನಿಟ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಆವೃತ್ತಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 9.95 ಲಕ್ಷಗಳಾಗಿದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಕಂಪನಿಯು ಈಗಾಗಲೇ 2021 Street Scrambler ಹಾಗೂ Sandstorm ಆವೃತ್ತಿಯನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕ್ ಡ್ಯುಯಲ್ ಹೈ ಎಕ್ಸಿಟ್ ಎಕ್ಸಾಸ್ಟ್, ಎಲ್ಇಡಿ ಹೆಡ್‌ಲೈಟ್‌, ಥ್ರೊಟಲ್ ಬಾಡಿ ಟ್ರಿಮ್‌ಗಳಾದ ಬ್ರಶ್ಡ್ ಅಲ್ಯೂಮಿನಿಯಂ ಫಿನಿಶ್, ಹೀಲ್ ಪ್ರೊಟೆಕ್ಟರ್ಸ್, ಹೆಡ್‌ಲೈಟ್ ಬ್ರಾಕೆಟ್, ಟಿಯರ್ ಡ್ರಾಪ್ ಶೇಪಿನ ಫ್ಯೂಯಲ್ ಟ್ಯಾಂಕ್ ಹಾಗೂ ಇನ್ನಿತರ ಫೀಚರ್ ಗಳನ್ನು ಹೊಂದಿದೆ.

Triumph ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ Tiger Sport 660 ಬೈಕ್

ಇದರ ಜೊತೆಗೆ ಡ್ಯುಯಲ್ ಎಕ್ಸಾಸ್ಟ್ ಡಬ್ಬಿ, ವೈರ್ ಸ್ಪೋಕ್ ವೀಲ್ಸ್ ಹಾಗೂ ಸರ್ಕ್ಯುಲರ್ ರೇರ್ ವೀವ್ ಮಿರರ್ ಗಳನ್ನು ಹೊಂದಿದೆ. ಈ ಬೈಕ್ ಲೆದರ್ ಟೆಕ್ಸ್ ಟೈಲ್ಸ್, ಬೀರ್‌ಟ್ರಾಪ್ ಶೈಲಿಯ ಫುಟ್‌ಪ್ಯಾಗ್‌, ಲಾಕ್ ಮಾಡಬಹುದಾದ ಟ್ಯಾಂಕ್ ಅಥವಾ ಫ್ರಂಟ್ ಫೆಂಡರ್ ಹಾಗೂ ಸೀಟುಗಳಿಗೆ ಹೊಸ ಅಪ್‌ಹೊಲೆಸ್ಟರಿಯನ್ನು ಹೊಂದುವ ನಿರೀಕ್ಷೆಗಳಿವೆ.

Most Read Articles

Kannada
English summary
New tiger sport 660 listed in triumph motorcycles indian website details
Story first published: Monday, October 11, 2021, 20:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X