ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿಯು ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗೆ ಸಜ್ಜಾಗುತ್ತಿದೆ. ಈ ಟ್ರಯಂಫ್ ಕಂಪನಿಯು ಹೊಸ ಟಿಇ-1 ಎಲೆಕ್ಟ್ರಿಕ್ ಬೈಕಿನ ಬ್ಯಾಟರಿ, ಮೋಟಾರ್ ಮತ್ತು ಫ್ರೇಮ್ ಬಗ್ಗೆ ಕೆಲವು ವಿವರಗಳನ್ನು ಬಿಡುಗಡೆ ಮಾಡಿದೆ.

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಹೊಸ ಟ್ರಯಂಫ್ ಟಿಇ -1 ಎಲೆಕ್ಟ್ರಿಕ್ ಬೈಕಿನ ಕೆಲವು ಸ್ಟೈಲಿಂಗ್ ರೇಖಾಚಿತ್ರಗಳನ್ನು ಸಹ ಕಂಪನಿಯು ಬಹಿರಂಗಪಡಿಸಲಾಗಿದೆ. ಈ ಯೋಜನೆಯು ವಾರ್ವಿಕ್ ವಿಶ್ವವಿದ್ಯಾಲಯದ ಟ್ರಯಂಫ್ ಮೋಟಾರ್‌ಸೈಕಲ್, ವಿಲಿಯಮ್ಸ್ ಅಡ್ವಾನ್ಸ್ಡ್ ಎಂಜಿನಿಯರಿಂಗ್, ಇಂಟಿಗ್ರಲ್ ಪವರ್‌ಟ್ರೇನ್ ಮತ್ತು ಡಬ್ಲ್ಯುಎಂಜಿ ನಡುವಿನ ಸಹಯೋಗದಲ್ಲಿ ಹೊಸ ಎಲೆಕ್ಟ್ರಿಕ್ ಬೈಕನ್ನು ತಯಾರಿಸಲಾಗುತ್ತಿದೆ.

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಟ್ರಯಂಫ್ ಸುರಕ್ಷತಾ ವ್ಯವಸ್ಥೆಗಳೊಂದಿಗೆ ಚಾಸಿಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಮತ್ತೊಂದೆಡೆ ವಿಲಿಯಮ್ಸ್ ಅಡ್ವಾನ್ಸ್ಡ್ ಎಂಜಿನಿಯರಿಂಗ್ ಬ್ಯಾಟರಿ ವಿನ್ಯಾಸ, ಬ್ಯಾಟರಿ ನಿರ್ವಹಣಾ ವ್ಯವಸ್ಥೆ ಮತ್ತು ವಾಹನ ನಿಯಂತ್ರಣ ಘಟಕಕ್ಕೆ ಸಹಾಯ ಮಾಡುತ್ತಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಇತರ ಪಾಲುದಾರರು ಇಂಟಿಗ್ರಲ್ ಪವರ್‌ಟ್ರೇನ್ ಎಲೆಕ್ಟ್ರಿಕ್ ಮೋಟರ್ ಮತ್ತು ಸಿಲಿಕಾನ್ ಕಾರ್ಬೈಡ್ ಇನ್ವರ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಫ್ರೇಮ್ ಮತ್ತು ಎಲೆಕ್ಟ್ರಿಕ್ ಮೋಟರ್ ಹೊರತುಪಡಿಸಿ, ಬೇರೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಮೂಲಮಾದರಿಯ ಪರೀಕ್ಷೆಯು ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಎಲೆಕ್ಟ್ರಿಕ್ ಬೈಕನ್ನು 2022ರ ಅಂತ್ಯದ 2022ರ ವೇಳೆಗೆ ಅಥವಾ 2023ರ ಆರಂಭದಲ್ಲಿ ಮಾತ್ರ ಉತ್ಪಾದನೆಗೆ ಸಿದ್ಧವಾಗುವ ಸಾಧ್ಯತೆಯಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಆದರೆ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಈ ಬೈಕಿನ ಎಲೆಕ್ಟ್ರಿಕ್ ಮೋಟರ್ ಕೇವಲ 10 ಕೆಜಿ ತೂಕವಿರುತ್ತದೆ ಮತ್ತು ಸುಮಾರು 174 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸಬಹುದು ಎಂದು ಎನ್ನಲಾಗುತ್ತಿದೆ.

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಇನ್ನು ಟ್ರಯಂಫ್ ಮೋಟರ್‌ಸೈಕಲ್ ಕಂಪನಿಯು ತನ್ನ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕನ್ನು ಜಾಗತಿವಾಗಿ ಕಳೆದ ವರ್ಷ ಪರಿಚಯಿಸಿತು. ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಈ ಹೊಸ ಟ್ರೈಡೆಂಟ್ 660 ಬೈಕಿನ ಅಧಿಕೃತ ಟೀಸರ್ ಅನ್ನು ಟ್ರಯಂಫ್ ಕಂಪನಿಯು ಇತೀಚೆಗೆ ಬಿಡುಗಡೆಗೊಳಿಸಿತು. ಟೀಸರ್ ನಲ್ಲಿ ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಅದರಂತೆ ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಏಪ್ರಿಲ್ 6 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಟ್ರಯಂಫ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಟ್ರಯಂಫ್ ಟ್ರೈಡೆಂಟ್ 660 ಬೈಕಿಗಾಗಿ ಪ್ರಿ ಬುಕ್ಕಿಂಗ್ ಅನ್ನು ಈಗಾಗಲೇ ಆರಂಭಿಸಿದ್ದಾರೆ. ಹೊಸ ಟ್ರಯಂಫ್ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷೆಯನ್ನು ಹುಟ್ಟು ಹಾಕಿದ ಬೈಕ್ ಇದಾಗಿದೆ.

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕಿನಲ್ಲಿ ಇನ್-ಲೈನ್ ಮೂರು-ಸಿಲಿಂಡರ್ 660 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,250 ಆರ್‌ಪಿಎಂನಲ್ಲಿ 80 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 64 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ, ಎಂಜಿನ್ ನೊಂದಿಗೆ ಸ್ಲಿಪ್/ಅಸಿಸ್ಟ್ ಕ್ಲಚ್‌ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಇನ್ನು ಈ ಬೈಕಿನಲ್ಲಿ ರೈಡರ್ ಏಡ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅನ್ನು ಸಹ ನೀಡುತ್ತದೆ, ಉದಾಹರಣೆಗೆ ರೈಡ್-ಬೈ-ವೈರ್, ಟ್ರ್ಯಾಕ್ಷನ್ ಕಂಟ್ರೋಲ್, ರೈನ್ ಮತ್ತು ರೋಡ್ ರೈಡರ್ ಮೋಡ್ ಗಳು ಸೇರಿದಂತೆ ಇತರ ಹಲವಾರು ಫೀಚರ್ ಗಳನ್ನು ಹೊಂದಿವೆ.

ಹೊಸ ಟ್ರಯಂಫ್ ಟಿಇ-1 ಎಲೆಕ್ಟ್ರಿಕ್ ಬೈಕ್ ಚಿತ್ರಗಳು ಬಹಿರಂಗ

ಟ್ರಯಂಫ್ ಟ್ರೈಡೆಂಟ್ 660 ಬೈಕ್ ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಟ್ರಯಂಫ್ ಟ್ರೈಡೆಂಟ್ 660 ಮಾದರಿತಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ಝಡ್ 650 ಬೈಕಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Triumph TE-1 Electric Motorcycle Prototype. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X