ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Yamaha ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ, ಭಾರತದಲ್ಲಿ Yamaha ಕಂಪನಿಯು FZ-X 155 ಮತ್ತು MT-15 ಮತ್ತು FZS ನ ಹೊಸ MotoGP ಎಡಿಷನ್ ಗಳನ್ನು ಪರಿಚಯಿಸಿದ ನಂತರ, ಇದೀಗ ಹೊಸ 155cc ಪ್ರೀಮಿಯಂ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಜಾಗತಿಕವಾಗಿ ಜನಪ್ರಿಯವಾಗಿರುವ Yamaha Aerox 155 ಸ್ಕೂಟರ್ ಅನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. Yamaha ಕಂಪನಿಯು ಭಾರತದಲ್ಲಿ ಪ್ರೀಮಿಯಂ ವಿಭಾಗದಲ್ಲಿ ಗಮನಹರಿಸುವುದಾಗಿ ಘೋಷಿಸಿದ್ದಾರೆ. 150 ಸಿಸಿ 250 ಸಿಸಿ ವಿಭಾಗದ ಮಾದರಿಗಳನ್ನು ಹೆಚ್ಚಾಗಿ ಬಿಡುಗಡೆ ಮಾಡಲಿದ್ದಾರೆ. ಇದರ ಭಾಗವಾಗಿ Yamaha ಕಂಪನಿಯು Aerox 155 ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ 2021ರ Yamaha Aerox ಸ್ಕೂಟರ್ ತೀಕ್ಷ್ಣವಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಶಾರ್ಪ್ ಆಗಿ ಇಂಡಿಕೇಟರ್ ಅನ್ನು ಸಂಯೋಜಿಸಲಾಗಿದೆ. ಇನ್ನು ಟೈಲ್ ಗೇಟ್ ಅನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ, ಸ್ಕೂಟರ್ ಹೊಸ ಸ್ಲಿಮ್ ಎಲ್ಇಡಿ ಟೈಲೈಟ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಇದಲ್ಲದೆ, ಹೊಸ Aerox155 ಸ್ಕೂಟರ್ ನಲ್ಲಿ ಹೊಸ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಸಂಯೋಜಿಸಲಾಗಿದೆ. ಈ ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಇನ್ನು ಸ್ಕೂಟರ್ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ. ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್‌ನಲ್ಲಿ ಯಮಹಾ ಆರ್15 ವಿ3.0 ಮಾದರಿಯಲ್ಲಿರುವ ಅದೇ 155ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಈ ಎಂಜಿನ್ 15.4 ಬಿಹೆಚ್‍ಪಿ ಪವರ್ ಮತ್ತು 13.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆರ್15 ಮಾದರಿಯಲ್ಲಿ ಕಂಡುಬರುವ 6-ಸ್ಪೀಡ್ ಗೇರ್‌ಬಾಕ್ಸ್‌ಗಿಂತ ಭಿನ್ನವಾಗಿ, ಸ್ಕೂಟರ್ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಹೊಸ Yamaha Aerox 155 ಸ್ಕೂಟರ್‌ನ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು 4.6 ಲೀಟರ್‌ನಿಂದ 5.5 ಲೀಟರ್‌ಗೆ ಹೆಚ್ಚಿಸಲಾಗಿದೆ. ಇನ್ನು ಈ Aerox 155 ಸ್ಕೂಟರ್‌ನಲ್ಲಿ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಹೊಸ Yamaha Aerox 155 ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಗ್ಯಾಸ್-ಚಾರ್ಜ್ಡ್ ಶಾಕರ್‌ಗಳನ್ನು ಪಡೆಯುತ್ತದೆ. ಇನ್ನು ಈ ಹೊಸ Yamaha Aerox 155 ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಉತ್ತಮವಾಗಿದೆ. ಬ್ರೇಕಿಂಗ್ ಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಆಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಇನ್ನು Yamaha ಕಂಪನಿಯು ತನ್ನ ಹೊಸ MT-15 MotoGP Edition ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ Yamaha MT 15 MotoGP Edition ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.48 ಲಕ್ಷಗಳಾಗಿದೆ. ಹೊಸ Yamaha MT 15 MotoGP Edition ಸ್ಟ್ಯಾಂಡರ್ಡ್ ಮಾದರಿಗಿಂತ ಎಂಟಿ-15 ಗಿಂತ ಸುಮಾರು ರೂ.1,400 ರಷ್ಟು ದುಬಾರಿಯಾಗಿದೆ. ಇನ್ನು ಹೊಸ Yamaha MT 15 MotoGP Edition ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ರೂ.2,000 ಟೋಕನ್ ಮೊತ್ತ ಪಾವತಿಸಿ ಆನ್‌ಲೈನ್‌ನಲ್ಲಿ ಅಥವಾ ಡೀಲರ್‌ಶಿಪ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೊಸ Yamaha MT 15 MotoGP Edition ಫ್ಯೂಯಲ್ ಟ್ಯಾಂಕ್ ವಿಸ್ತರಣೆಗಳಲ್ಲಿ ಮಾನ್ಸ್ಟರ್ ಎನರ್ಜಿ ಗ್ರಾಫಿಕ್ಸ್ ಸಹಿ ಹೊಂದಿದೆ. ಮೋಟೋ ಜಿಪಿ ಬ್ರಾಂನಿಂಗ್ ಅನ್ನು ಇಂಧನ ಟ್ಯಾಂಕ್ ಕವಚಗಳು, ಸೈಡ್ ಪ್ಯಾನಲ್‌ಗಳು ಮತ್ತು ಇಂಧನ ಟ್ಯಾಂಕ್‌ನಲ್ಲಿ ಸೇರಿಸಲಾಗಿದೆ. ಪ್ರಮುಖ ಯಮಹಾ ಲೋಗೋವನ್ನು ಗೋಲ್ಡನ್ ಬಣ್ಣದಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಈ ಬದಲಾವಣೆಗಳನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಬೈಕಿನಂತೆಯೇ ಕಾಣುತ್ತದೆ. ಹೊಸ ರೂಪಾಂತರವು ಮಾನ್ಸ್ಟರ್ ಎನರ್ಜಿ ಮೋಟೋ ಜಿಪಿ ಗ್ರಾಫಿಕ್ಸ್‌ನೊಂದಿಗೆ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಈ ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್

ಇನ್ನು ಈ ಹೊಸ Yamaha Aerox 155 ಸ್ಕೂಟರ್ 1,980 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,150 ಎಂಎಂ ಎತ್ತರವನ್ನು ಹೊಂದಿದೆ, ಇನ್ನು ಈ ಸ್ಕೂಟರ್ 1,350 ಎಂಎಂ ಉದ್ದದ ವೀಲ್‌ಬೇಸ್‌ ಅನ್ನು ಹೊಂದಿದೆ. ಸ್ಕೂಟರ್ ಅನ್ನು ಯಮಹಾ ವೈ-ಕನೆಕ್ಟ್ ಸ್ಟಾಂಡರ್ಡ್ ಆಗಿ ಅಳವಡಿಸಲಾಗಿರುತ್ತದೆ. ಇದನ್ನು ಸಂಬಂಧಿತ ಅಪ್ಲಿಕೇಶನ್ ಬಳಸಿ ರೈಡರ್ ಸ್ಮಾರ್ಟ್ ಫೋನ್ ಗೆ ಸಂಪರ್ಕಿಸಬಹುದು.

Most Read Articles

Kannada
Read more on ಯಮಹಾ yamaha
English summary
New yamaha 155cc maxi scooter will be launch soon in india details
Story first published: Wednesday, August 25, 2021, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X