ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಕರ್ನಾಟಕ (ಎನ್‌ಐಟಿ-ಕೆ), ಸುರತ್ಕಲ್, ಕಾಡಿನಲ್ಲಿ ಪ್ರಯಾಣಿಸಲು ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ಬೈಕ್ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಈ ಬೈಕ್‌ನಲ್ಲಿರುವ ಬ್ಯಾಟರಿಯನ್ನು ಸೌರಶಕ್ತಿ ಬಳಸಿ ಚಾರ್ಜ್ ಮಾಡಬಹುದಾಗಿದೆ. ಈ ಎಲೆಕ್ಟ್ರಿಕ್ ಬೈಕಿನಲ್ಲಿ ಡಿಟ್ಯಾಚೇಬಲ್ ಹೆಡ್‌ಲೈಟ್ ಅಳವಡಿಸಲಾಗಿದೆ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ರಾತ್ರಿ ವೇಳೆ ಇದನ್ನು ಟಾರ್ಚ್ ಆಗಿ ಬಳಸಬಹುದು. ಈ ಬಗ್ಗೆ ಮಾತನಾಡಿರುವ ಇನ್‌ಸ್ಟಿಟ್ಯೂಟ್‌ನ ಸೆಂಟರ್ ಫಾರ್ ಸಿಸ್ಟಮ್ಸ್ ಡಿಸೈನ್ ಹಾಗೂ ಇ-ಮೊಬಿಲಿಟಿ ಪ್ರಾಜೆಕ್ಟ್‌ಗಳ ಮುಖ್ಯಸ್ಥರಾದ ಪೃಥ್ವಿರಾಜ್ ಯು ರವರು, ಈ ಎಲೆಕ್ಟ್ರಿಕ್ ಬೈಕಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ ಸಾಮಾನ್ಯವಾಗಿ ಸಂಪೂರ್ಣವಾಗಿ ಮೌನವಾಗಿರುತ್ತದೆ ಎಂದು ಹೇಳಿದ್ದಾರೆ. ಈ ವಾಹನದಿಂದ ವನ್ಯಜೀವಿಗಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಜೊತೆಗೆ ಕಳ್ಳ ಬೇಟೆಗಾರರಿಗೆ ತಪ್ಪಿಸಿಕೊಳ್ಳಲು ಅವಕಾಶವನ್ನು ನೀಡದೆ ಅವರನ್ನು ಹಿಡಿಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಇದರ ಮುಂಭಾಗದಲ್ಲಿರುವ ಪೆಟ್ಟಿಗೆಯನ್ನು ವಾಕಿ ಟಾಕಿ, ಪುಸ್ತಕ ಸೇರಿದಂತೆ ಹಲವಾರು ವಸ್ತುಗಳನ್ನು ಇಡಲು ಬಳಸಬಹುದು ಎಂದು ಪೃಥ್ವಿ ರಾಜ್ ಮಾಹಿತಿ ನೀಡಿದರು.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಈ ಎಲೆಕ್ಟ್ರಿಕ್ ಬೈಕಿನಲ್ಲಿ ವಾಕಿ ಟಾಕಿ, ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಡಾಕ್‌ಗಳನ್ನು ಒದಗಿಸಲಾಗಿದೆ. ಹಿಂಭಾಗದ ಪ್ಯಾನಿಯರ್ ಬಾಕ್ಸ್ ಅನ್ನು ಹೆಚ್ಚುವರಿ ಪರಿಕರಗಳನ್ನು ಸಂಗ್ರಹಿಸಲು ಬಳಸಬಹುದು. ಇದರಿಂದ ಬೇಟೆಯಾಡುವ ವಿರೋಧಿ ಶಿಬಿರಗಳು ಅಥವಾ ಆಳವಾದ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಉಪಯೋಗವಾಗುತ್ತದೆ ಎಂದು ಅವರು ಹೇಳಿದರು.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಎನ್‌ಐಟಿ - ಕೆಯ ಜಲಸಂಪನ್ಮೂಲ ಹಾಗೂ ಒಶಿಯನ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಆಗಿರುವ ಪೃಥ್ವಿರಾಜ್ ಯು, ಉದ್ಯಾನ ಪ್ರದೇಶವನ್ನು ನಿರ್ವಹಿಸುವ ಅರಣ್ಯಾಧಿಕಾರಿಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನದ ಬಳಕೆಗಾಗಿ ಈ ಬೈಕ್‌ ಅನ್ನು ಅಭಿವೃದ್ಧಿಪಡಿಸಿ, ಪರಿಚಯಿಸಲಾಗಿದೆ ಎಂದು ಹೇಳಿದರು.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಎಲೆಕ್ಟ್ರಿಕ್ ಬೈಕ್ ಒರಟು 75 ಕಿ.ಮೀಗಳಷ್ಟು ದೂರ ಕ್ರಮಿಸುತ್ತದೆ. ಈ ಇ-ಬೈಕ್ ಅನ್ನು ಅಭಿವೃದ್ಧಿಪಡಿಸಲು ಸುಮಾರು ಮೂರು ತಿಂಗಳುಗಳನ್ನು ತೆಗೆದುಕೊಂಡಿದೆ. ಎರಡನೇ ಲಾಕ್‌ಡೌನ್ ನಂತರ ಯೋಜನೆಯನ್ನು ಮುಂದೂಡಲಾಗಿತ್ತು ಎಂದು ಅವರು ಹೇಳಿದರು. ಮಾಹಿತಿಗಳ ಪ್ರಕಾರ, ಈ ಎಲೆಕ್ಟ್ರಿಕ್ ಬೈಕ್‌ಗೆ 'ವಿದ್ಯುಗ್ 4.0 ಎಂದು ಹೆಸರಿಡಲಾಗಿದೆ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಈ ಬೈಕಿನಲ್ಲಿ ಬಿ‌ಎಲ್‌ಡಿ‌ಸಿ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟಾರ್ 2.0 ಕಿ.ವ್ಯಾ, 72 ವೋಲ್ಟ್, 33 ಎಹೆಚ್ ಲಿಥಿಯಂ ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ವಿಶೇಷವೆಂದರೆ ಈ ಇ-ಬೈಕ್ ಅನ್ನು ಸೌರಶಕ್ತಿಯಿಂದ ಚಾರ್ಜ್ ಮಾಡಬಹುದು. ಸೌರ ಚಾರ್ಜಿಂಗ್ ಸೆಟಪ್ ಎರಡು 400 ವ್ಯಾಟ್ ಮೊನೊ ಕ್ರಿಸ್ಟಲಿನ್ ಸೋಲಾರ್ ಪ್ಯಾನೆಲ್ ಹಾಗೂ ಬ್ಯಾಟರಿಯನ್ನು ಚಾರ್ಜ್ ಮಾಡಲು 1.5 ಕಿ.ವ್ಯಾ ಯುಪಿಎಸ್ ಘಟಕವನ್ನು ಹೊಂದಿದೆ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಕುದುರೆಮುಖ ವನ್ಯಜೀವಿ ವಿಭಾಗವು ನವೆಂಬರ್ 17 ರಂದು ಕುದುರೆಮುಖದಲ್ಲಿ ಆಯೋಜಿಸಿರುವ ಶೋಲಾ ಅರಣ್ಯಗಳ ಕಾರ್ಯಾಗಾರದಲ್ಲಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಲಾಗುವುದು.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಇನ್ನು ದೇಶದಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಇವಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ರೆಸಿಡೆನ್ಶಿಯಲ್ ಸೊಸೈಟಿ, ಅಪಾರ್ಟ್‌ಮೆಂಟ್‌, ಉದ್ಯಾನವನ ಹಾಗೂ ಶಾಪಿಂಗ್ ಮಾಲ್‌ಗಳಂತಹ ಸ್ಥಳಗಳಲ್ಲಿಯೂ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ರಾಷ್ಟ್ರ ರಾಜಧಾನಿ ದೆಹಲಿ ವಾಯು ಮಾಲಿನ್ಯದಿಂದ ತೀವ್ರವಾಗಿ ತತ್ತರಿಸಿದೆ. ದೀಪಾವಳಿಯ ನಂತರ ದೆಹಲಿಯಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ವಾಯು ಮಾಲಿನ್ಯದ ವಿರುದ್ಧ ಸಮರ ಸಾರಿದ್ದು, ದೆಹಲಿ ನಗರದೊಳಗೆ ಪೆಟ್ರೋಲ್, ಡೀಸೆಲ್ ಎಂಜಿನ್ ವಾಹನಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾತ್ರ ಬಳಸಬೇಕು ಎಂದು ಸೂಚಿಸಿದೆ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ನಗರದ 250 ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 9ರವರೆಗೆ ವಾಣಿಜ್ಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವಾಯು ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇದನ್ನು ಉಲ್ಲಂಘಿಸುವ ವಾಹನಗಳಿಗೆ ಭಾರಿ ದಂಡ ವಿಧಿಸಲಾಗುವುದು ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಮೇಲ್ಕಂಡ ನಿಷೇಧವು ಕೆಲವು ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಯಾವುದೇ ರೀತಿಯಲ್ಲಿ ಪರಿಸರ ಮಾಲಿನ್ಯವನ್ನುಂಟು ಮಾಡದ ಎಲೆಕ್ಟ್ರಿಕ್ ವಾಹನಗಳಿಗೆ ಈ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ದೆಹಲಿ ರಾಜ್ಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಈ ಘೋಷಣೆ ಮಾಡಿದ್ದಾರೆ. ನೋ ಎಂಟ್ರಿ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಈ ಮೂಲಕ ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನಗಳ ಕಾರ್ಯಾಚರಣೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳು ದೆಹಲಿ ನಗರದ ಯಾವುದೇ ರಸ್ತೆಯಲ್ಲಿ ಯಾವಾಗ ಬೇಕಾದರೂ ಸಂಚರಿಸಬಹುದು. ವಾಣಿಜ್ಯ ವಾಹನ ಬಳಕೆದಾರರ ತೀವ್ರ ವಿರೋಧದ ನಡುವೆ ಈ ಘೋಷಣೆ ಮಾಡಲಾಗಿದೆ. ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಚಾರವನ್ನು ನಿಷೇಧಿಸುವುದಿಲ್ಲ ಎಂದು ಈ ಮೂಲಕ ತಿಳಿಸಲಾಗಿದೆ.

ಅರಣ್ಯ ಬಳಕೆಗಾಗಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸಿದ ಎನ್‌ಐಟಿ-ಕೆ

ಅದರಲ್ಲೂ ವಿಶೇಷವಾಗಿ ವಾಯು ಮಾಲಿನ್ಯವನ್ನು ಪರಿಗಣಿಸಿ ತೆಗೆದುಕೊಂಡ ಯಾವುದೇ ಕ್ರಮವು ಎಲೆಕ್ಟ್ರಿಕ್ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಭವಿಷ್ಯದಲ್ಲಿ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ದೆಹಲಿ ಸರ್ಕಾರವು ವಾಯು ಮಾಲಿನ್ಯವನ್ನು ಪರಿಹರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Most Read Articles

Kannada
English summary
Nit k develops electric bike for forest use details
Story first published: Monday, November 22, 2021, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X