ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಬಿಡುಗಡೆಗೂ ಮುನ್ನವೇ ಭಾರೀ ಸಂಚಲನ ಮೂಡಿಸಿರುವ ಓಲಾ ನಿರ್ಮಾಣದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಮೊದಲ ಬಾರಿಗೆ ಹೊಸ ಸ್ಕೂಟರ್ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಓಲಾ ಎಲೆಕ್ಟ್ರಿಕ್ ಕಂಪನಿಯು ಹೊಸ ಸ್ಕೂಟರಿನ ಟಿವಿ ಜಾಹೀರಾತು ಚಿತ್ರೀಕರಣ ನಡೆಸುತ್ತಿರುವ ಸಂದರ್ಭದಲ್ಲಿ ಮೊದಲ ಬಾರಿಗೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಕಂಡುಬಂದಿದ್ದು, ಹೊಸ ಸ್ಕೂಟರ್ ಗ್ರಾಹಕರ ಬೇಡಿಕೆಯೆಂತೆ ಮ್ಯಾಟೆ ಬ್ಲ್ಯಾಕ್, ಪಿಂಕ್ ಮತ್ತು ಬ್ಲ್ಯೂ ಬಣ್ಣಗಳನ್ನು ಹೊಂದಿದೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಆಕರ್ಷಕ ವಿನ್ಯಾಸದೊಂದಿಗೆ ವಿವಿಧ ಬಣ್ಣಗಳ ಆಯ್ಕೆ ಓಲಾ ಸ್ಕೂಟರ್‌ಗೆ ಮತ್ತಷ್ಟು ಬೇಡಿಕೆ ಹೆಚ್ಚಿಸಲಿದ್ದು, ಹೊಸ ಸ್ಕೂಟರಿನಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್ ನೀಡಿರುವುದು ಜಾಹೀರಾತು ಮಾದರಿಗಳಲ್ಲಿ ಸ್ಪಷ್ಟವಾಗಿದೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಸ್ಕೂಟರ್ ಚಾಲನೆ ವೇಳೆ ರೈಡರ್‌ಗೆ ಪೂರಕವಾದ ಮಾಹಿತಿಗಳನ್ನು ಒದಗಿಸಲು ಉತ್ತಮ ವಿನ್ಯಾಸದ ಸಂಪೂರ್ಣ ಡಿಜಿಟಲ್ ಟಿಎಫ್‌ಟಿ ಟಚ್ ಸ್ಕ್ರೀನ್ ನೀಡಲಾಗಿದ್ದು, ಸ್ಕ್ರೀನ್‍‌ನಲ್ಲಿ ಬ್ಯಾಟರಿ ಲಭ್ಯತೆ, ನ್ಯಾವಿಗೇಷನ್ ಸೇರಿದಂತೆ ಸ್ಕೂಟರಿನ ತಾಂತ್ರಿಕತೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳನ್ನು ಒದಗಿಸಲಿದೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಡಿಜಿಟಲ್ ಸ್ಕ್ರೀನ್‌ನಲ್ಲಿರುವ ಮಾಹಿತಿ ಪ್ರಕಾರ, ಹೊಸ ಸ್ಕೂಟರ್ ಪ್ರತಿ ಚಾರ್ಜ್‌ಗೆ ಗರಿಷ್ಠ 140 ಕಿ.ಮೀ ಮೈಲೇಜ್ ಹೊಂದಿದ್ದು, 3.9 ಸೆಕೆಂಡುಗಳಲ್ಲಿ ಹೊಸ ಸ್ಕೂಟರ್ ಪ್ರತಿ ಗಂಟೆಗೆ ಸೊನ್ನೆಯಿಂದ 45 ಕಿ.ಮೀ ಸ್ಪೀಡ್ ಪಡೆದುಕೊಳ್ಳುವ ಮೂಲಕ ಗರಿಷ್ಠ 100 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಆದರೆ ಕಂಪನಿಯು ಈ ಹಿಂದೆ ಹೇಳಿಕೊಂಡಿರುವ ಪ್ರಕಾರ ಹೊಸ ಸ್ಕೂಟರ್ ಪ್ರತಿಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ನೀಡಲಿದೆ ಎಂದಿತ್ತು. ಆದರೆ ಚಿತ್ರೀಕರಣ ಸಂದರ್ಭದಲ್ಲಿ ಕಂಡುಬಂದ ಸ್ಕೂಟರ್‌ಗಳಲ್ಲಿ ಲಭ್ಯವಾದ ಮಾಹಿತಿಗಳ ಪ್ರಕಾರ ಪ್ರತಿ ಚಾರ್ಜ್‌ಗೆ ಗರಿಷ್ಠ 140 ಕಿ.ಮೀ ಮೈಲೇಜ್ ಪಡೆದುಕೊಂಡಿರುವ ಸ್ಪಷ್ಟವಾಗಿದೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಹೀಗಾಗಿ ಹೊಸ ಸ್ಕೂಟರ್ ಮೈಲೇಜ್ ಕುರಿತಂತೆ ಕೆಲವು ಗೊಂದಲಗಳಿದ್ದರೂ ನಮ್ಮ ಪ್ರಕಾರ ಹೊಸ ಸ್ಕೂಟರಿನಲ್ಲಿ ತೆಗೆದುಹಾಕಬಹುದಾದ ಬ್ಯಾಟರಿ ಸೌಲಭ್ಯವಿರುವುದರಿಂದ ಬ್ಯಾಕ್ಅಪ್(ಡ್ಯುಯಲ್) ಬ್ಯಾಟರಿ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ದೂರದ ಪ್ರಯಾಣದ ಸಂದರ್ಭದಲ್ಲಿ ನೀವು ಬ್ಲ್ಯಾಕ್ಅಪ್ ಬ್ಯಾಟರಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಇದರಿಂದ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾದ ಬ್ಯಾಟರಿ ಮತ್ತು ಹೆಚ್ಚುವರಿ ನೀಡಲಾಗುತ್ತಿರುವ ಬ್ಯಾಟರಿಯ ಮೈಲೇಜ್ ಅನ್ನು ಒಟ್ಟಾಗಿ ಹೇಳಿರಬಹುದಾದ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಹೊಸ ಸ್ಕೂಟರ್ ಕುರಿತಾಗಿ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಇನ್ನು ಹೊಸ ಸ್ಕೂಟರ್‌ನಲ್ಲಿ ಅಧಿಕೃತ ಬ್ಯಾಟರಿ ಪ್ಯಾಕ್ ಸಾಮರ್ಥ್ಯದ ಕುರಿತು ಯಾವುದೇ ಮಾಹಿತಿಗಳಿಲ್ಲವಾದರೂ ಹೊಸ ಬ್ಯಾಟರಿ ಪ್ಯಾಕ್ ಓಲಾ ಹೈಪರ್ ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್‌ಗೊಳ್ಳಲಿದೆ.

ಜಾಹೀರಾತು ಚಿತ್ರಿಕರಣದ ವೇಳೆ ವಿವಿಧ ಬಣ್ಣಗಳಲ್ಲಿ ಕಂಡುಬಂದ ಓಲಾ ಇವಿ ಸ್ಕೂಟರ್

ಹೋಂ ಚಾರ್ಜರ್ ಮೂಲಕ ಪೂರ್ಣ ಪ್ರಮಾದ ಚಾರ್ಜ್ ಮಾಡಲು ಕನಿಷ್ಠ 3 ಗಂಟೆಗಳು ಬೇಕಾಗಬಹುದಾಗಿದ್ದು, ಹೊಸ ಸ್ಕೂಟರ್‌ನಲ್ಲಿ ವಿವಿಧ ರೈಡಿಂಗ್ ಮೋಡ್‌ಗಳು ಸ್ಕೂಟರ್ ಚಾಲನೆಯನ್ನು ಮತ್ತಷ್ಟು ಸುಲಭವಾಗಿಸಲಿವೆ.

Most Read Articles

Kannada
English summary
Ola Electric Scooter Spotted In All Colour Options. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X