ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ಎಸ್1(S1) ಮತ್ತು ಎಸ್1 ಪ್ರೊ(S1 Pro) ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ವಿತರಣೆಗೆ ಸಿದ್ದಗೊಳ್ಳುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್, ಸಬ್ಸಡಿ, ಇನ್ಸುರೆನ್ಸ್ ಮತ್ತು ಗ್ರಾಹಕರ ಸೇವೆಗಳ ಕುರಿತಂತೆ ಕಂಪನಿಯು ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಹೊಸ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಭಾರೀ ಬದಲಾವಣೆ ತರಲು ತರಲು ಸಿದ್ದವಾಗಿರುವ Ola Electric ಕಂಪನಿಯು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಇವಿ ಸ್ಕೂಟರ್ ವಿತರಣೆಯನ್ನು ಆರಂಭಿಸುತ್ತಿದ್ದು, ಅಕ್ಟೋಬರ್ ಆರಂಭದಲ್ಲಿ ಗ್ರಾಹಕರ ಕೈಸೇರಲಿರುವ ಹೊಸ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆ ಕುರಿತಂತೆ ಹತ್ತಾರು ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಹೊಸ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆಗಾಗಿ ಶೋರೂಂಗಳ ಬದಲಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸ್ಕೂಟರ್ ಖರೀದಿ ಪ್ರಕ್ರಿಯೆ ಪ್ರಕ್ರಿಯೆ, ವಿತರಣೆ ಮತ್ತು ಮಾರಾಟ ನಂತರದ ಗ್ರಾಹಕರ ಸೇವೆಗಳು ಸಹ ಮನೆ ಬಾಗಿಲಿಗೆ ಒದಗಿಸಲು ಭರವಸೆ ನೀಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಓಲಾ ಹೊಸ ಇವಿ ಸ್ಕೂಟರ್‌ಗಳ ಖರೀದಿಗಾಗಿ ದೇಶಾದ್ಯಂತ ಪ್ರಮುಖ ನಗರಗಳಿಂದ ಸುಮಾರು 1 ಲಕ್ಷಕ್ಕೆ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಇದೇ ತಿಂಗಳು 8ರಿಂದ ಬುಕ್ಕಿಂಗ್ ಮಾಡಿರುವ ಗ್ರಾಹಕರನ್ನು ಕಂಪನಿಯು ಆನ್‌ಲೈನ್ ಮತ್ತು ದೂರವಾಣಿ ಮೂಲಕ ಸಂಪರ್ಕಿಸಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಬುಕ್ಕಿಂಗ್ ಮಾಹಿತಿಯನ್ನು ಆಧರಿಸಿ ಖರೀದಿ ಪ್ರಕ್ರಿಯೆ ಬಯಸುವುದಾದರೇ ಮುಂದಿನ ಪತ್ರ ವ್ಯವಹಾರಕ್ಕೆ ಚಾಲನೆ ನೀಡಲಿರುವ ಕಂಪನಿಯು ಆಸಕ್ತ ಗ್ರಾಹಕರಿಗಾಗಿ ಟೆಸ್ಟ್ ರೈಡ್ ಆರಂಭಿಸಲಿದೆ. ಟೆಸ್ಟ್ ರೈಡ್ ವಾಹನವು ಸಹ ಗ್ರಾಹಕರು ಸೂಚಿಸುವ ವಿಳಾಸಕ್ಕೆ ಬರಲಿದ್ದು, ಕೋವಿಡ್ ನಿಯಮಗಳ ಪ್ರಕಾರವೇ ಸ್ಯಾನಿಟೈಜ್ ನಂತರವೇ ವಾಹನ ಒದಗಿಸುವುದು ಮತ್ತು ಮರಳಿ ಪಡೆಯುವ ಪ್ರಕ್ರಿಯೆಯನ್ನು ನಡೆಸಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಟೆಸ್ಟ್ ರೈಡ್‌ನಲ್ಲಿ ನೀವು ಖರೀದಿಸಬೇಕಿರುವ ವಾಹನವು ಇಷ್ಟವಾದಲ್ಲಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಖರೀದಿ ಪ್ರಕ್ರಿಯೆ ಆರಂಭಿಸಲಿದ್ದು, ಸಂಪೂರ್ಣವಾಗಿ ಪತ್ರ ವ್ಯವಹಾರ ಮುಗಿದ ಬಳಿಕ ಸ್ಕೂಟರ್ ನಿಮ್ಮ ಕೈಸೇರಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಹೊಸ ಇವಿ ಸ್ಕೂಟರ್ ಖರೀದಿಗಾಗಿ ಓಲಾ ಕಂಪನಿಯು ದೇಶದ ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳ ಭರವಸೆ ನೀಡಿದ್ದು, ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದು.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಓಲಾ ಫೈನಾನ್ಸಿಲ್ ಸರ್ವಿಸ್‌ನಲ್ಲಿ ಹೊಸ ಎಸ್1 ಮಾದರಿಗೆ ರೂ.2999 ಮತ್ತು ಎಸ್1 ಪ್ರೊ ಮಾದರಿಗೆ ರೂ. 3199 ಇಎಂಐ ನಿಗದಿಪಡಿಸಿದ್ದು, ಹೆಚ್‌ಡಿಎಫ್‌ಸಿ, ಟಾಟಾ ಕ್ಯಾಪಿಟಲ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮೂಲಕವು ಸಾಲ ಸೌಲಭ್ಯವನ್ನು ಆಯ್ಕೆ ಮಾಡಬಹುದು.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಇಎಂಐ ಪಾವತಿಗಳು ಸಾಲದ ಮೊತ್ತದ ಮೇಲೆ ಅವಲಂಬಿತವಾಗಿದ್ದು, ಸ್ಕೂಟರ್ ಬೆಲೆಯು ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಇವಿ ವಾಹನಗಳಿಗೆ ಹೆಚ್ಚುವರಿ ಸಬ್ಸಡಿ ನೀಡುತ್ತಿರುವುದರಿಂದ ವಾಹನಗಳ ಬೆಲೆ ಏರಿಳಿತವಾಗುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಹೊಸ ಎಸ್1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ಸಬ್ಸಡಿ ನೀಡುತ್ತಿರುವ ಹಿನ್ನಲೆಯಲ್ಲಿ ಸಬ್ಸಡಿ ಹೊಂದಿರದ ರಾಜ್ಯಗಳಿಂತೂ ತುಸು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಕೇಂದ್ರ ಸರ್ಕಾರವು ಪ್ರತಿ ರಾಜ್ಯಗಳಿಗೂ ಅನ್ವಯವಾಗುವಂತೆ ಫೇಮ್ 2 ಯೋಜನೆ ಅಡಿ ಸಬ್ಸಡಿ ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯ ತೀವ್ರವಾಗಿ ಹೆಚ್ಚಿಸುವ ಉದ್ದೇಶದಿಂದ ದೆಹಲಿ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಗುಜರಾತ್ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಇವಿ ವಾಹನ ಖರೀದಿಸುವ ಗ್ರಾಹಕರಿಗೆ ಕೇಂದ್ರದ ಸಬ್ಸಡಿ ಜೊತೆ ರಾಜ್ಯ ಸರ್ಕಾರದಿಂದಲೂ ಸಬ್ಸಡಿ ನೀಡುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಆದರೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕೇಂದ್ರದ ಸಬ್ಸಡಿ ಯೋಜನೆಯಡಿ ಮಾತ್ರವೇ ವಿನಾಯ್ತಿ ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಡಿ ನೀಡುವ ವಿಚಾರದಲ್ಲಿ ದೆಹಲಿ ಮತ್ತು ಗುಜರಾತ್ ಸರ್ಕಾರಗಳು ಸಹ ಅಗ್ರಸ್ಥಾನದಲ್ಲಿವೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಇನ್ನು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಂದು ವರ್ಷದ ವ್ಯಯಕ್ತಿಕ ಹಾನಿಗೆ ಮತ್ತು 5 ವರ್ಷಗಳ ಮೂರನೇ ವ್ಯಕ್ತಿಯ ವಿಮೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಿದ್ದು, ಇದಕ್ಕಾಗಿ ಕಂಪನಿಯು ಐಸಿಐಸಿಐ ಲೊಂಬಾರ್ಡ್ ಜೊತೆ ಪಾಲುದಾರಿಕೆ ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉಪಯಕ್ತ ಮಾಹಿತಿಯುಳ್ಳ Ola Electric App ಅಭಿವೃದ್ದಿಪಡಿಸಿದ್ದು, ಹೊಸ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ರಕ್ರಿಯೆ, ಟೆಸ್ಟ್ ರೈಡ್ ಮತ್ತು ಸಬ್ಸಡಿ ಮಾಹಿತಿ ಹಂಚಿಕೊಂಡ Ola Electric

ಇನ್ನು ಎಸ್1 ವೆರಿಯೆಂಟ್‌ನಲ್ಲಿ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ನೀಡಲಿದೆ.

Most Read Articles

Kannada
English summary
Ola electric scooters purchase process delivery test ride insurance subsidy details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X