Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ Ola Electric ಕಂಪನಿಯು S1 ಮತ್ತು S1 Pro ಸ್ಕೂಟರ್‌ಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಕಂಪನಿಯು ಹೊಸ ಸ್ಕೂಟರ್‌ಗಳನ್ನು ಬುಕ್ಕಿಂಗ್ ಆಧಾರದ ಮೇಲೆ ಮುಂಬರುವ ಅಕ್ಟೋಬರ್‌ನಿಂದ ವಿತರಣೆ ಆರಂಭಿಸಲಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

Ola Electric ಕಂಪನಿಯು ಎಸ್ ಸರಣಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ S1 ಮತ್ತು S1 Pro ಮಾದರಿಗಳನ್ನು ಮಾರಾಟ ಮಾಡಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ ಮತ್ತು ಬ್ಯಾಟರಿ ರೇಂಜ್‌ ಪಡೆದುಕೊಂಡಿವೆ. Ola ಕಂಪನಿಯು ಹೊಸ ಸ್ಕೂಟರ್‌ಗಳ ವಿತರಣೆ ಆರಂಭಕ್ಕೂ ಮಾರಾಟ ಮಳಿಗೆಗಳಿಗೆ ಚಾಲನೆ ನೀಡುತ್ತಿದ್ದು, ಪರ್ಫಾಮೆನ್ಸ್ ಮತ್ತು ಮೈಲೇಜ್ ವಿಚಾರವಾಗಿ S1 Pro ಮಾದರಿಯು ಗ್ರಾಹಕರನ್ನು ಸೆಳೆಯಲಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

Ola Electric ಕಂಪನಿಯು ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ S1 Pro ಮಾದರಿಯ ಪರ್ಫಾಮೆನ್ಸ್ ಕುರಿತಾಗಿ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸಾಮಾನ್ಯ ಸ್ಕೂಟರ್‌ಗಳಿಂತಲೂ ಕ್ವಿಕ್ ಆಕ್ಸಿಲೇಟ್ ಮೂಲಕ ಅತ್ಯುತ್ತಮ ವೇಗ ಮತ್ತು ಮೈಲೇಜ್ ಹಿಂದಿರುಗಿಸುತ್ತದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕುರಿತಾದ ಪರ್ಫಾಮೆನ್ಸ್ ವಿಡಿಯೋದಲ್ಲಿ S1 Pro ಮಾದರಿಯು ಪ್ರತಿ ಗಂಟೆ 115 ಕಿ.ಮೀ ಟಾಪ್ ಸ್ಪೀಡ್ ಅನ್ನು ಕೆಲವೇ ಸೆಕೆಂಡುಗಳಲ್ಲಿ ತಲುಪುವ ಗುಣವೈಶಿಷ್ಟ್ಯತೆ ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ನೀಡಲಾಗಿರುವ 8.5kW ಎಲೆಕ್ಟ್ರಿಕ್ ಮೋಟಾರ್ Ola Electric ಸ್ಕೂಟರ್‌ಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಲಿದೆ.

S1 Pro ಮಾದರಿಯಲ್ಲಿ Ola ಕಂಪನಿಯು ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಎನ್ನುವ ಮೂರು ರೈಡ್ ಮೋಡ್‌ಗಳನ್ನು ನೀಡಿದ್ದು, ಹೈಪರ್ ಮೋಡ್ ಮೂಲಕ ಕೇವಲ 3 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ಸ್ಪೀಡ್ ಪಡೆದುಕೊಳ್ಳಬಹುದಾಗಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಹಾಗೆಯೇ S1 ಮಾದರಿಯು ನಾರ್ಮಲ್ ಮತ್ತು ಸ್ಪೋರ್ಟ್ ಎನ್ನುವ ಎರಡು ರೈಡಿಂಗ್ ಮೋಡ್‌ಗಳೊಂದಿಗೆ ಕೇವಲ 3.6 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ಸ್ಪೀಡ್‌ ಪಡೆದುಕೊಳ್ಳಲಿದ್ದು, ಎಸ್1 ಸ್ಕೂಟರ್ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 90 ಕಿ.ಮೀ ಸೀಮಿತಗೊಳಿಸಲಾಗಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಇನ್ನು ಹೊಸ S1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ S1 Pro ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ಸಬ್ಸಡಿ ನೀಡುತ್ತಿರುವ ಹಿನ್ನಲೆಯಲ್ಲಿ ಸಬ್ಸಡಿ ಹೊಂದಿರದ ರಾಜ್ಯಗಳಿಂತೂ ತುಸು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಎಲೆಕ್ಟ್ರಿಕ್ ವಾಹನಗಳ ಬಳಕೆಯ ತೀವ್ರವಾಗಿ ಹೆಚ್ಚಿಸುವ ಉದ್ದೇಶದಿಂದ ದೆಹಲಿ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಗುಜರಾತ್ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಇವಿ ವಾಹನ ಖರೀದಿಸುವ ಗ್ರಾಹಕರಿಗೆ ಕೇಂದ್ರದ ಸಬ್ಸಡಿ ಜೊತೆ ರಾಜ್ಯ ಸರ್ಕಾರದಿಂದಲೂ ಸಬ್ಸಡಿ ನೀಡುತ್ತಿವೆ ಹೀಗಾಗಿ ಇತರೆ ರಾಜ್ಯಗಳಿಂತಲೂ ಈ ನಾಲ್ಕು ರಾಜ್ಯಗಳಲ್ಲಿ ಇವಿ ವಾಹನ ಬೆಲೆ ತುಸು ಕಡಿಮೆಯಾಗಿರಲಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ದೆಹಲಿಯಲ್ಲಿ ಎಸ್1 ಬೆಲೆ ರೂ. 85,0099 ಮತ್ತು ಎಸ್1 ಪ್ರೋ ಬೆಲೆ ರೂ. 1,10,149 ಇದ್ದಲ್ಲಿ ಗುಜರಾತ್‌ನಲ್ಲಿ ಎಸ್1 ಬೆಲೆ ರೂ. 79,999 ಮತ್ತು ಎಸ್1 ಪ್ರೊ ಬೆಲೆ ರೂ. 1,09,99 ಬೆಲೆ ಹೊಂದಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಎಸ್1 ಬೆಲೆ ರೂ. 94,999 ಮತ್ತು ಎಸ್1 ಪ್ರೊ ಬೆಲೆ ರೂ. 1,24,999 ಬೆಲೆ ಹೊಂದಿದ್ದು, ರಾಜಸ್ತಾನದಲ್ಲಿ ಎಸ್1 ಬೆಲೆ ರೂ. 89,968 ಮತ್ತು ಎಸ್1 ಪ್ರೊ ಬೆಲೆ ರೂ. 1,19,138 ಬೆಲೆ ಹೊಂದಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

S1 ವೆರಿಯೆಂಟ್‌ನಲ್ಲಿ ಕಂಪನಿಯು 2.98kWh ಮತ್ತು S1 Pro ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ S1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ S1 Pro ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ನೀಡಲಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಎರಡು ಮಾದರಿಗಳಲ್ಲೂ ಓಲಾ ಕಂಪನಿಯು 750 ವೊಲ್ಟ್ ಆನ್ ಬೋರ್ಡ್ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಪೂರ್ತಿಯಾಗಿ ಚಾರ್ಜ್ ಮಾಡಲು 6.50 ಗಂಟೆ ಕಾಲಾವಕಾಶ ತೆಗೆದುಕೊಳ್ಳುತ್ತದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಹೊಸ ಸ್ಕೂಟರ್‌ಗಳ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದರೆ ಕೇವಲ 18 ನಿಮಿಷಗಳಲ್ಲಿ ಶೇ. 50 ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲು ದೇಶಾದ್ಯಂತ ಪ್ರಮುಖ 400 ನಗರಗಳಲ್ಲಿ 1 ಲಕ್ಷ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

Ola Electric ಸ್ಕೂಟರ್‌ಗಳ ಡಿಸೈನ್ ಮತ್ತು ಫೀಚರ್ಸ್ ಬಗೆಗೆ ಹೇಳುವುದಾದರೆ ಅತ್ಯುತ್ತಮ ಡಿಸೈನ್‌ನೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಪರ್ಫಾಮೆನ್ಸ್ ಹೇಗಿದೆ?

ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೊಸ ಕ್ರಾಂತಿ ಆರಂಭಿಸಿರುವ Ola Electric ಕಂಪನಿಯು ಈ ವರ್ಷಾಂತ್ಯದೊಳಗೆ 1 ಸಾವಿರ ಪ್ರಮುಖ ನಗರಗಳಲ್ಲಿ ಹೊಸ ಸ್ಕೂಟರ್ ಮಾರಾಟ ಮಾಡುವ ಯೋಜನೆ ಹೊಂದಿದ್ದು, ಭಾರತದಲ್ಲಿ ಮಾತ್ರವಲ್ಲ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಗುರಿ ಹೊಂದಿದೆ.

Most Read Articles

Kannada
English summary
Ola electric shows off the top speed of s1 pro electric scooter
Story first published: Friday, August 20, 2021, 13:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X