ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್? ಯಾವುದು ಉತ್ತಮವೆಂದ ಓಲಾ!

ಓಲಾ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು, ಕಂಪನಿಯು ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಗ್ರಾಹಕರ ಅಭಿಪ್ರಾಯಗಳನ್ನು ಸಂಗ್ರಹಿಸಲು ಒಂದೊಂದೆ ಕುತೂಹಲಕಾರಿಯಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ.

ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್?

ಹೊಸ ಸ್ಕೂಟರ್ ಕುರಿತಾಗಿ ಈಗಾಗಲೇ ಪ್ರಮುಖ ತಾಂತ್ರಿಕ ಮಾಹಿತಿಗಳನ್ನು ಹಂಚಿಕೊಂಡಿರುವ ಓಲಾ ಕಂಪನಿಯು ಬುಕ್ಕಿಂಗ್ ಸಹ ಆರಂಭಿಸಿದ್ದು, ಇದೀಗ ಹೊಸ ಸ್ಕೂಟರ್ ಮಾರಾಟದ ಕುರಿತಾಗಿ ಗ್ರಾಹಕರಿಗೆ ಹೊಸ ಮಾಹಿತಿ ಹಂಚಿಕೊಂಡಿದೆ. ವಾಹನ ಖರೀದಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಉತ್ತಮವೋ ಅಥವಾ ಡೀಲರ್‌ಶಿಪ್ ಉತ್ತಮವೋ? ಎಂದು ಗ್ರಾಹಕರನ್ನು ಅಭಿಪ್ರಾಯ ಕೇಳಿದೆ.

ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್?

ಓಲಾ ಟ್ವೀಟರ್ ಪೊಲ್‌ನಲ್ಲಿ ಶೇ.60 ಜನ ಆನ್‌ಲೈನ್ ಪ್ಲ್ಯಾಟ್ ಉತ್ತಮ ಎಂದರೆ ಶೇ. 40 ಜನ ಶೋರೂಂನಲ್ಲಿಯೇ ವಾಹನ ಖರೀದಿ ಉತ್ತಮ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದು, ಓಲಾ ಕಂಪನಿಯು ಸಹ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಮಾರಾಟಕ್ಕೆ ಆದ್ಯತೆ ನೀಡುವ ಸಾಧ್ಯತೆಗಳಿವೆ.

ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್?

ಕೋವಿಡ್ ಸಂದರ್ಭದಲ್ಲಿ ಬಹುತೇಕ ವಾಹನ ಕಂಪನಿಗಗಳು ಗ್ರಾಹಕರ ಸಂಪರ್ಕ ತಪ್ಪಿಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿದ್ದು, ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರು ಪದೇ ಪದೇ ಶೋರೂಂಗಳಿಗೆ ಭೇಟಿ ನೀಡದೆ ಎಲ್ಲಾ ಪತ್ರ ವ್ಯವಹಾರಗಳನ್ನು ಡಿಜಿಟಲ್ ಪತ್ರಗಳ ಮೂಲಕ ವ್ಯಹರಿಸಿ ವಾಹನವನ್ನು ಮನೆ ಬಾಗಿಲಿಗೆ ವಿತರಣೆ ಪಡೆದುಕೊಳ್ಳಬಹುದು.

ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್?

ಹೀಗಾಗಿ ಓಲಾ ಕಂಪನಿಯು ಸೀಮಿತ ಸಂಖ್ಯೆಯ ಡೀಲರ್‌ಶಿಪ್ ಮತ್ತು ಸರ್ವಿಸ್ ಸೆಂಟರ್‌ಗಳ ಜೊತೆಗೆ ಆನ್‌ಲೈನ್ ಖರೀದಿಗೆ ನೀಡುವ ಸಾಧ್ಯತೆಗಳಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ರೂ. 499 ಮುಂಗಡ ಹಣದೊಂದಿಗೆ ಬುಕ್ಕಿಂಗ್ ಆರಂಭಿಸಿರುವ ಓಲಾ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದೆ.

ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್?

ಹೊಸ ಇವಿ ಸ್ಕೂಟರ್ ಪ್ಯಾಸ್ಟೆಲ್ ರೆಡ್, ಯೆಲ್ಲೊ, ಬ್ಲ್ಯೂ, ವೈಟ್, ಮೆಟಾಲಿಕ್ ಸಿಲ್ವರ್, ರೋಜ್ ಗೋಲ್ಡ್, ಪಿಂಕ್, ಮ್ಯಾಟೆ ಬ್ಲ್ಯಾಕ್, ಬ್ಲ್ಯೂ ಮತ್ತು ಗ್ರೆ ಬಣ್ಣಗಳ ಆಯ್ಕೆ ಪಡೆದುಕೊಳ್ಳಲಿದ್ದು, ಹೊಸ ಸ್ಕೂಟರ್ ಖರೀದಿಗಾಗಿ ಈಗಾಗಲೇ 1.50 ಲಕ್ಷಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ.

ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್?

ಹೊಸ ಸ್ಕೂಟರ್‌ನಲ್ಲಿ ಓಲಾ ಕಂಪನಿಯು ಎರಡು ಮಾದರಿಯಲ್ಲಿ ಬ್ಯಾಟರಿ ಪ್ಯಾಕ್ ನೀಡುವ ಸಾಧ್ಯತೆಗಳಿದ್ದು, ಸಿಂಗಲ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 140 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಡ್ಯುಯಲ್ ಬ್ಯಾಟರಿ ಬ್ಯಾಕ್ಅಪ್ ಹೊಂದಿರುವ ಮಾದರಿಯಿಂದ ಗರಿಷ್ಠ 240 ಕಿ.ಮೀ ಮೈಲೇಜ್ ಪಡೆಯಬಹುದಾಗಿದೆ.

ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್?

ಈ ಮೂಲಕ ಓಲಾ ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

ಇವಿ ಸ್ಕೂಟರ್ ಖರೀದಿಗೆ ಆನ್‌ಲೈನ್ ಅಥವಾ ಡೀಲರ್‌ಶಿಪ್?

ಹೊಸ ವಾಹನ ಉತ್ಪಾದನಾ ಯೋಜನೆಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ತ್ರಿ ಚಕ್ರ ವಾಹನಗಳು ಮತ್ತು ಇವಿ ಕಾರುಗಳನ್ನು ಸಹ ಅಭಿವೃದ್ದಿಪಡಿಸಲಿದೆ.

ಓಲಾ ಹೊಸ ವಾಹನ ಉತ್ಪದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಬಹುದಾದ ಸಾಮರ್ಥ್ಯ ಹೊಂದಿದ್ದು, ಹೊಸ ಘಟಕವು ಏಷ್ಯಾದಲ್ಲೇ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಘಟಕ ಎನ್ನುವ ಹೆಗ್ಗಳಿಕೆಯೊಂದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ.

Most Read Articles

Kannada
English summary
Ola Electric Scooter To Be Delivered Both Online And Through Dealerships.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X